ಯಾವೆಲ್ಲಾ ದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ? ಇಲ್ಲಿದೆ ಮಾಹಿತಿ

ಕಳೆದ 2 ವರ್ಷಗಳಿಂದ ಕೊರೋನಾ ಬೆಂಬಿಡದೆ ಕಾಡುತ್ತಿದೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಲಸಿಕೆಯನ್ನು ನೀಡುತ್ತದೆ. ಇದೀಗ ಭಾರತದಲ್ಲಿ 15-18 ವರ್ಷದ ಮಕ್ಕಳಿಗೆ ಜ.3 ರಿಂದ ಲಸಿಕೆ ನೀಡಲಾಗುತ್ತಿದೆ. ಇನ್ನು ಹಲವು ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಹಾಗಾದರೆ ಯಾವೆಲ್ಲ ದೇಶಗಳಲ್ಲಿ ಮಕ್ಕಳಿಗೆ ಯಾವ ಲಸಿಕೆಯನ್ನು ನೀಡಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

TV9 Web
| Updated By: Pavitra Bhat Jigalemane

Updated on: Jan 06, 2022 | 2:02 PM

ಭಾರತದಲ್ಲಿ ಈಗಾಗಲೇ ಹಲವು ಲಸಿಕೆಗಳ ಬಳಕೆಗೆ ಅನುಮತಿ ದೊರೆತಿದೆ. ಆದರೆ 12-18 ವರ್ಷದ ಮಕ್ಕಳಿಗೆ ಭಾರತ್​ ಬಯೋಟೆಕ್​ನ ಕೋವಾಕ್ಸಿನ್​ ಅನ್ನು ನೀಡಲು ಅವಕಾಶ ನೀಡಲಾಗಿದೆ.

1 / 5
ಸ್ವಿಡ್ಜರ್​ಲ್ಯಾಂಡ್​ನಲ್ಲಿ 12-15 ವರ್ಷದ ಮಕ್ಕಳಿಗೆ ಮೊಡರ್ನಾ ಮತ್ತು ಪೈಜರ್​ ಎರಡೂ ಲಸಿಕೆಯ ಬಳಕಗೆ ಅನುಮತಿ ನೀಡಲಾಗಿದೆ. ಇಟಲಿಯಲ್ಲಿಯೂ 12-17 ವರ್ಷದ ಮಕ್ಕಳಿಗೆ ಮಾಡರ್ನಾ ಲಸಿಕೆಯನ್ನು ನೀಡಲಾಗುತ್ತಿದೆ.

2 / 5
ಸಪ್ಟೆಂಬರ್​ನಲ್ಲಿ ಕ್ಯೂಬಾ ದೇಶ 2-10ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದೆ.  ಕ್ಯೂಬಾದಲ್ಲಿ ಸ್ಥಳೀಯವಾಗಿ ತಯಾರಿಸಿದ ಅಬ್ದಲಾ ಮತ್ತು ಸೋಬೇರಾನಾ ಎನ್ನುವ ಎರಡು ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ.

3 / 5
ಚೀನಾದಲ್ಲಿಯೂ ಮಕ್ಕಳಿಗೆ ಸ್ಥಳೀಯವಾಗಿ ತಯಾರಿಸಿದ ಸಿನೋವಾಕ್ಸ್​ ಲಸಿಕೆಯನ್ನು ನೀಡಲಾಗುತ್ತಿದೆ. ಜತೆಗೆ ಇಂಡೋನೇಷ್ಯಾವು ಸಿನೋವಾಕ್ಸ್​ ಲಸಿಕೆಯನ್ನು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡುತ್ತಿದೆ.

4 / 5
ಅಮೆರಿಕ ಮತ್ತು ಯುರೋಪಿಯನ್​ ದೇಶಗಳಲ್ಲಿ ಪೈಜರ್​ ಬಯೋಟೆಕ್​ ಲಸಿಕೆಯನ್ನು ನೀಡಲು ಅನುಮತಿ ನೀಡಲಾಗಿದೆ. ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಹಾಗೂ ಯುರೋಪಿಯನ್​ ದೇಶಗಳಲ್ಲಿ 5-18 ವರ್ಷದ ಮಕ್ಕಳಿಗೆ ಪೈಜರ್​ ಲಸಿಕೆಯ ಲೋವರ್​ ಡೋಸ್​ ನೀಡಲಾಗುತ್ತಿದೆ.

5 / 5
Follow us