ರೈತರಿಗೆ ಗುಡ್ನ್ಯೂಸ್: ರಾಜ್ಯ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆ, ನಿಮ್ಮ ಜಿಲ್ಲೆಗೆ ಎಷ್ಟು?
Drought relief fund : ಈ ಬಾರಿ ಮಳೆ ಕೊರತೆಯಿಂದ ಬೆಳೆಗಳು ಕೈಕೊಟ್ಟಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಮಳೆ ಬೆಳೆ ಇಲ್ಲದೇ ರಾಜ್ಯದೆಲ್ಲೆಡೆ ತೀವ್ರ ಬರ ಆವರಿಸಿದೆ. ಇದಕ್ಕೆ ಇದೀಗ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.
ಬೆಂಗಳೂರು, (ನವೆಂಬರ್ 03): ಕರ್ನಾಟಕರ ಸರ್ಕಾರ ಬರ ಪರಿಹಾರ ಹಣ (Drought relief fund ) ಬಿಡುಗಡೆ ಮಾಡಿದೆ. 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಇಂದು (ನವೆಂಬರ್ 03) 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಮುಂಗಾರು ವೈಫಲ್ಯದಿಂದ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಲ ರೈತರು ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಹಲವು ರೈತ ಸಂಘಟನೆಗಳು ಬೆಳೆ ಪರಿಹಾರ ಘೋಷಣೆ ಮಾಡಿಬೇಕೆಂದು ಆಗ್ರಹಿಸಿದ್ದವು. ಅದರಂತೆ ಇದೀಗ ರಾಜ್ಯ ಸರ್ಕಾರ ಬೆಳೆ ಪರಿಹಾರಕ್ಕೆ ಅನುದಾನ ರಿಲೀಸ್ ಮಾಡಿದ್ದು, ಬೆಳೆ ಕಳೆದುಕೊಂಡು ಕಂಗಾಲಾಗಿರುವ ಅರ್ಹ ರೈತರಿಗೆ ಸರ್ಕಾರದ ಈ ಬರ ಪರಿಹಾರ ಸಿಗುವಂತಾಗಲಿ. ಹಾಗಾದ್ರೆ ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ ನೀಡಿದೆ ಎನ್ನುವ ವಿವರ ಈ ಕೆಳಗಿನಂತಿದೆ.
ರಾಜ್ಯದ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ಬರಪರಿಹಾರವಾಗಿ 17 ಸಾವಿರ ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದೆ. ಆದ್ರೆ ಕೇಂದ್ರ ಇದುವರೆಗೂ ಇನ್ನೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಗಾಗಿ ಸಣ್ಣ ಪ್ರಮಾಣದ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮೋದಿ ಅವರೇ ನೀವು ಕನ್ನಡಿಗರ ಬಗ್ಗೆ ಇಷ್ಟೊಂದು ಕಟುವಾಗಿರುವುದು ಯಾಕೆ? ಕೇಂದ್ರದ ವಿರುದ್ಧ ಸಿಎಂ ಗರಂ
ಯಾವ ಜಿಲ್ಲೆಗೆ ಎಷ್ಟು ಅನುದಾನ..?
- ಬೆಂಗಳೂರು ನಗರ- 7.50 ಕೋಟಿ ರೂಪಾಯಿ
- ಬೆಂಗಳೂರು ಗ್ರಾಮಾಂತರ- 6 ಕೋಟಿ ರೂ.
- ರಾಮನಗರ-7.50 ಕೋಟಿ ರೂ.
- ಕೋಲಾರ – 9 ಕೋಟಿ ರೂ.
- ಚಿಕ್ಕಬಳ್ಳಾಪುರ- 9 ಕೋಟಿ ರೂ.
- ತುಮಕೂರು-15 ಕೋಟಿ ರೂ.
- ಚಿತ್ರದುರ್ಗ- 9 ಕೋಟಿ ರೂ.
- ದಾವಣಗೆರೆ- 9 ಕೋಟಿ ರೂ.
- ಚಾಮರಾಜನಗರ-7.50 ಕೋಟಿ ರೂ.
- ಮೈಸೂರು – 13.50 ಕೋಟಿ ರೂ.
- ಮಂಡ್ಯ- 10.50 ಕೋಟಿ ರೂ.
- ಬಳ್ಳಾರಿ- 7.50 ಕೋಟಿ ರೂ.
- ಕೊಪ್ಪಳ- 10.50 ಕೋಟಿ ರೂ.
- ರಾಯಚೂರು- 9 ಕೋಟಿ ರೂ.
- ಕಲಬುರಗಿ- 16.50 ಕೋಟಿ ರೂ.
- ಬೀದರ್- 4.50 ಕೋಟಿ ರೂ.
- ಬೆಳಗಾವಿ- 22.50 ಕೋಟಿ ರೂ.
- ಬಾಗಲಕೋಟೆ- 13.50 ಕೋಟಿ. ರೂ.
- ವಿಜಯಪುರ- 18 ಕೋಟಿ ರೂ.
- ಗದಗ-10.50 ಕೋಟಿ ರೂ.
- ಹಾವೇರಿ-12 ಕೋಟಿ.
- ಧಾರವಾಡ-12 ಕೋಟಿ ರೂ.
- ಶಿವಮೊಗ್ಗ-10.50 ಕೋಟಿ ರೂ.
- ಹಾಸನ- 12 ಕೋಟಿ ರೂ.
- ಚಿಕ್ಕಮಗಳೂರು-12 ಕೋಟಿ ರೂ
- ಕೊಡಗು-7.50 ಕೋಟಿ ರೂ.
- ದಕ್ಷಿಣ ಕನ್ನಡ- 3 ಕೋಟಿ ರೂ.
- ಉಡುಪಿ- 4.50 ಕೋಟಿ ರೂ.
- ಉತ್ತರ ಕನ್ನಡ-16.50 ಕೋಟಿ ರೂ.
- ಯಾದಗಿರಿ-9 ಕೋಟಿ ರೂ.
- ವಿಜಯನಗರ-9 ಕೋಟಿ ರೂ.
Published On - 11:52 am, Fri, 3 November 23