ಬೆಂಗಳೂರು: ಸರ್ಕಾರಿ ನೌಕರರ ಮೇಲೆ ದುರ್ನಡತೆ ಆರೋಪ ಕೇಳಿಬಂದಲ್ಲಿ ವಿಚಾರಣೆ ನಡೆಸಲು ನಿಗದಿತ ಸಮಯವನ್ನು ಕರ್ನಾಟಕ ಸರ್ಕಾರ ನಿಗದಿಪಡಿಸಿದೆ. 4 ತಿಂಗಳ ಒಳಗೆ ವಿಚಾರಣೆ ನಡೆಸಲು ಹಾಗೂ ವರದಿ ಮಂಡಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ದುರ್ನಡತೆಯ ವಿರುದ್ಧ ಶಿಸ್ತುಕ್ರಮ ಜರುಗಿಸಲು 9 ತಿಂಗಳ ಕಾಲಮಿತಿಯನ್ನು ಸರ್ಕಾರ ನಿಗದಿಪಡಿಸಲಾಗಿದೆ.
ಜನರಿಗೆ ಹತ್ತಿರವಾಗಿರುವ 10 ಇಲಾಖೆಗಳ ಮೇಲೆ ಕಣ್ಗಾಗಲಿಡಲು ಡ್ಯಾಶ್ಬೋರ್ಡ್ಗೆ ಚಾಲನೆ ನೀಡಿದ ಸಿಎಂ
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಿರುವ ಯೋಜನೆಗಳು ಅವುಗಳ ಸ್ಥಿತಿಗತಿಗಳ ಕುರಿತು ನೇರವಾಗಿ ಮಾಹಿತಿ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಗ್ರ ಮಾಹಿತಿಯುಳ್ಳ ಸಿಎಂ ಡ್ಯಾಶ್ ಬೋರ್ಡ್ಗೆ ಚಾಲನೆ ನೀಡಿದರು. ಜನರಿಗೆ ಹತ್ತಿರವಾಗಿರುವ 10 ಇಲಾಖೆಗಳ ಮೇಲೆ ಸಿಎಂ ಕಣ್ಣಿಡಲಿದ್ದು, ಪ್ರತಿಯೊಂದು ಕಾಮಗಾರಿ, ಕೆಲಸದ ಮೇಲೆ ಕುಳಿತಲ್ಲೇ ಡ್ಯಾಶ್ಬೋರ್ಡ್ ಮೂಲಕ ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿ ಮೇಲೆ ಕಣ್ಣಿಡಲು ಇದು ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:
Windows 11: ಬಹುನಿರೀಕ್ಷಿತ ಹೊಸ ಮೈಕ್ರೋಸಾಫ್ಟ್ ವಿಂಡೀಸ್ 11 ಅಪ್ಡೇಟ್ ಲಭ್ಯ: ಏನು ವಿಶೇಷತೆ?, ಅಪ್ಡೇಟ್ ಹೇಗೆ?
Virender Sehwag: ಕೂ ಆಪ್ಗೆ ಎಂಟ್ರಿಕೊಟ್ಟ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್; ಅಭಿಮಾನಿಗಳಿಗೆ ವಿಶೇಷ ಆಹ್ವಾನ
Published On - 6:41 pm, Tue, 5 October 21