ಜನರಿಗೆ ಹತ್ತಿರವಾಗಿರುವ 10 ಇಲಾಖೆಗಳ ಮೇಲೆ ಕಣ್ಗಾವಲಿಡಲು ಡ್ಯಾಶ್ಬೋರ್ಡ್ಗೆ ಚಾಲನೆ ನೀಡಿದ ಸಿಎಂ
ಪ್ರತಿಯೊಂದು ಕಾಮಗಾರಿ, ಕೆಲಸದ ಮೇಲೆ ಕುಳಿತಲ್ಲೇ ಡ್ಯಾಶ್ಬೋರ್ಡ್ ಮೂಲಕ ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿ ಮೇಲೆ ಕಣ್ಣಿಡಲು ಇದು ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಿರುವ ಯೋಜನೆಗಳು ಅವುಗಳ ಸ್ಥಿತಿಗತಿಗಳ ಕುರಿತು ನೇರವಾಗಿ ಮಾಹಿತಿ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಗ್ರ ಮಾಹಿತಿಯುಳ್ಳ ಸಿಎಂ ಡ್ಯಾಶ್ ಬೋರ್ಡ್ಗೆ ಚಾಲನೆ ನೀಡಿದರು. ಜನರಿಗೆ ಹತ್ತಿರವಾಗಿರುವ 10 ಇಲಾಖೆಗಳ ಮೇಲೆ ಸಿಎಂ ಕಣ್ಣಿಡಲಿದ್ದು, ಪ್ರತಿಯೊಂದು ಕಾಮಗಾರಿ, ಕೆಲಸದ ಮೇಲೆ ಕುಳಿತಲ್ಲೇ ಡ್ಯಾಶ್ಬೋರ್ಡ್ ಮೂಲಕ ಮಾಹಿತಿ ಪಡೆಯಲಿದ್ದಾರೆ. ಅಧಿಕಾರಿಗಳ ಕಾರ್ಯವೈಖರಿ ಮೇಲೆ ಕಣ್ಣಿಡಲು ಇದು ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ದುರ್ನಡತೆ ಆರೋಪ; ವಿಚಾರಣೆ ಮತ್ತು ಶಿಸ್ತುಕ್ರಮಕ್ಕೆ ಕಾಲಮಿತಿ ನಿಗದಿ ಬೆಂಗಳೂರು: ಸರ್ಕಾರಿ ನೌಕರರ ಮೇಲೆ ದುರ್ನಡತೆ ಆರೋಪ ಕೇಳಿಬಂದಲ್ಲಿ ವಿಚಾರಣೆ ನಡೆಸಲು ನಿಗದಿತ ಸಮಯವನ್ನು ಕರ್ನಾಟಕ ಸರ್ಕಾರ ನಿಗದಿಪಡಿಸಿದೆ. 4 ತಿಂಗಳ ಒಳಗೆ ವಿಚಾರಣೆ ನಡೆಸಲು ಹಾಗೂ ವರದಿ ಮಂಡಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ದುರ್ನಡತೆಯ ವಿರುದ್ಧ ಶಿಸ್ತುಕ್ರಮ ಜರುಗಿಸಲು 9 ತಿಂಗಳ ಕಾಲಮಿತಿಯನ್ನು ಸರ್ಕಾರ ನಿಗದಿಪಡಿಸಲಾಗಿದೆ.
ಇದನ್ನೂ ಓದಿ:
Published On - 6:51 pm, Tue, 5 October 21