Thawar Chand Gehlot: ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್; ಸಚಿವ ಸುಧಾಕರ್ ಉಪಸ್ಥಿತಿ

| Updated By: shivaprasad.hs

Updated on: Jan 14, 2022 | 1:27 PM

Dr K Sudhakar | Booster Dose: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉಪಸ್ಥಿತರಿದ್ದರು.

Thawar Chand Gehlot: ಬೂಸ್ಟರ್ ಡೋಸ್ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್; ಸಚಿವ ಸುಧಾಕರ್ ಉಪಸ್ಥಿತಿ
ಬೂಸ್ಟರ್ ಡೋಸ್ ಪಡೆಯುತ್ತಿರುವ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Follow us on

ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ರಾಜ್ಯಪಾಲರನ್ನ ಹೂಗುಚ್ಚ ನೀಡಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ವಾಗತಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಮುಖ್ಯಸ್ಥರು ಈ ವೇಳೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಕೊವಿಡ್ ಮಹಾಮಾರಿಯಿಂದ ಪಾರಾಗಲು ಲಸಿಕೆಯ ಅವಶ್ಯಕತೆ ಇದೆ. ರಾಜ್ಯದ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದ್ದಾರೆ. ‘‘ದೆಹಲಿಯಲ್ಲಿ ಎರಡು ಡೋಸ್ ಲಸಿಕೆ ಆಗಿತ್ತು. ಇಂದು ಇಲ್ಲಿಗೆ ಬಂದು ಬೂಸ್ಟರ್ ಡೋಸ್ ಪಡೆದಿದ್ದೇನೆ. ಲಸಿಕಾ ಅಭಿಯಾನಕ್ಕೆ ರಾಜ್ಯದ ಜನ ಕೈಜೋಡಿಸಬೇಕು. ಲಸಿಕೆ ಅಭಿಯಾನದಲ್ಲಿ ಕರ್ನಾಟಕ ರಾಜ್ಯ ಮುಂದಿದೆ, ಇದಕ್ಕೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಗೆಹ್ಲೋಟ್ ನುಡಿದಿದ್ದಾರೆ. ಜತೆಗೆ ರಾಜ್ಯದ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನೂ ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬೂಸ್ಟರ್ ಡೋಸ್ ಲಸಿಕಾ ಅಭಿಯಾನವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ವೀಕ್ಷಿಸಿದ್ದಾರೆ. ಸದ್ಯ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವರ್ಕರ್ಸ್​ಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಸಚಿವ ಸುಧಾಕರ್ ಮಾತನಾಡಿ, ‘‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈವರೆಗೂ 83,937 ಡೋಸ್ ಬೂಸ್ಟರ್ ಡೋಸ್ ನೀಡಲಾಗಿದೆ. 420 ಬಾಣಂತಿಯರಿಗೆ, 1179 ಗರ್ಭಿಣಿಯರಿಗೆ ಮೂರನೇ ಡೋಸ್ ನೀಡಲಾಗಿದೆ’’ ಎಂದು ಮಾಹಿತಿ ನೀಡಿದ್ದಾರೆ.

ಅರ್ಹರೆಲ್ಲರೂ 3 ನೇ ಡೋಸ್ ಪಡೆಯಬೇಕು ಎಂದು ಕರೆ ನೀಡಿರುವ ಆರೋಗ್ಯ ಸಚಿವರು, ಇದರೊಂದಿಗೆ 15-18 ವರ್ಷದವರು ಲಸಿಕೆ ‌ಪಡೆಯಬೇಕು ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಲಸಿಕೆಯಿಂದ ಅಪಾಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕೊರೊನಾದಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯಬೇಕು. ಪ್ರಧಾನಿ ಮೋದಿ ಕೂಡಾ ಗುರುವಾರದ ಸಭೆಯಲ್ಲಿ ಇದನ್ನೇ ಹೇಳಿದ್ದಾರೆ ಎಂದು ಸುಧಾಕರ್ ಮನವಿ ಮಾಡಿದ್ದಾರೆ.

ವೀಕೆಂಡ್ ಕರ್ಫ್ಯೂಗೆ ಸಹಕಾರ ಕೋರಿದ ಸುಧಾಕರ್:
ಇನ್ನೊಂದು ವಾರ ಮಾತ್ರ ವೀಕೆಂಡ್ ಕರ್ಫ್ಯೂ ಪಾಲನೆ‌ ಮಾಡುತ್ತೇವೆ ಎಂದಿರುವ ಹೊಟೇಲ್, ಬಾರ್ ಮಾಲೀಕರ ಹೇಳಿಕೆ ವಿಚಾರಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ವೀಕೆಂಡ್ ಕರ್ಫ್ಯೂನಿಂದ ಕೆಲ ವರ್ಗಕ್ಕೆ ಸಮಸ್ಯೆ ಆಗುತ್ತದೆ ಎಂದು ತಿಳಿದಿದೆ. ಜನರ ಆರೋಗ್ಯಕ್ಕಾಗಿ ಇಂತಹ ನಿಯಮ ತೆಗೆದುಕೊಳ್ಳಲಾಗಿದೆ. ಅನಿವಾರ್ಯವಾಗಿ ಇಂತಹ ನಿಯಮ ಜಾರಿ ಮಾಡಲಾಗಿದೆ. ಹೀಗಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜಕೀಯ ಸಮಾವೇಶಗಳು, ಸಮಾರಂಭಗಳಿಂದ ಸಮಸ್ಯೆ ಆಗುತ್ತದೆ. ಹೀಗಾಗಿ ಇಂತಹವುಗಳನ್ನು ಯಾರು ಮಾಡಬಾರದು. ಹೈಕೋರ್ಟ್ ಕೂಡಾ ಈ ಬಗ್ಗೆ ಗಮನಿಸಿದೆ. ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ:

Cannabis: ಗಾಂಜಾದಲ್ಲಿನ ಸಂಯುಕ್ತಗಳು ಕೊರೋನಾ ಸೋಂಕು ಜೀವಕೋಶಗಳಿಗೆ ಹರಡುವುದನ್ನು ತಡೆಯುತ್ತದೆ: ಅಧ್ಯಯನ

ಗಾಳಿಯಲ್ಲಿ 20 ನಿಮಿಷಗಳೊಳಗೆ ದುರ್ಬಲಗೊಳ್ಳುತ್ತದೆ ಕೊವಿಡ್ ವೈರಾಣು; ಮಾಸ್ಕ್ ಹಾಗೂ ಅಂತರ ಕಾಪಾಡುವುದರ ಪ್ರಾಮುಖ್ಯತೆ ವಿವರಿಸಿದ ಅಧ್ಯಯನ