ಬೆಂಗಳೂರು: ಕೊರೊನಾ ಕರ್ಫ್ಯೂ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿಗಳನ್ನು ತೆರೆಯಲು ನಾಳೆಯಿಂದಲೇ ಅನ್ವಯವಾಗುವಂತೆ ಅವಕಾಶ ನೀಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಹಾಪ್ಕಾಮ್ಸ್, ಹಾಲಿನ ಬೂತ್, ತಳ್ಳುವ ಗಾಡಿಗಳಿಗೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಸಂತೆ ಮತ್ತು ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿಯೇ ಇರಲಿದ್ದು, ಅವುಗಳಿಗೆ ವಿನಾಯತಿ ನೀಡಿಲ್ಲ.
ಮಾರುಕಟ್ಟೆಗಳಲ್ಲಿ ಜನಸಂದಣಿ ತಪ್ಪಿಸಲು ಸರ್ಕಾರ ಈ ಹೊಸ ನಿರ್ಧಾರ ಕೈಗೊಳ್ಳಲಾಗಿದ್ದು, ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದ್ದು, ಕೊವಿಡ್ ಮಾರ್ಗಸೂಚಿ ಪಾಲಿಸಿ ವ್ಯಾಪಾರ ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ. ಎಪಿಎಂಸಿ, ದಿನಸಿ ಅಂಗಡಿಗಳಿಗೆ ಸಮಯ ನಿಗದಿ ಮಾಡಿರುವ ಸರ್ಕಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅವಕಾಶ ನೀಡಿದೆ. ವ್ಯಾಪಾರಿಗಳು ಮಾರುಕಟ್ಟೆ ದರದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಬೇಕು. ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂಬ ಶರತ್ತಿನೊಂದಿಗೆ ಅವಕಾಶ ಒದಗಿಸಲಾಗಿದೆ.
ಇಂದು ಪತ್ತೆಯಾದ ಸೋಂಕಿತರೆಷ್ಟು?
ಬೆಂಗಳೂರಲ್ಲಿ ಇಂದು ಒಂದೇ ದಿನ 19,353 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 7,76,093ಕ್ಕೇರಿಕೆಯಾಗಿದೆ. ಈ ಪೈಕಿ 4,98,562 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 162 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ ಒಟ್ಟು 6,537 ಜನರು ಸಾವನ್ನಪ್ಪಿದ್ದಾರೆ. 2,70,993 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಶನಿವಾರ (ಮೇ 1) ಒಟ್ಟು 40,990 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 271 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು, ಅಂದರೆ 19,353 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 162 ಜನರು ಸಾವನ್ನಪ್ಪಿದ್ದಾರೆ. ಸತತವಾಗಿ 30 ಸಾವಿರದ ಆಸುಪಾಸಿನಲ್ಲಿ ಬರುತ್ತಿದ್ದ ರಾಜ್ಯದ ಸೋಂಕಿತರ ಸಂಖ್ಯೆ ನಿನ್ನೆಯಿಂದ 40 ಸಾವಿರದ ಗಡಿ ದಾಟುತ್ತಿದೆ. ನಿನ್ನೆ (ಏಪ್ರಿಲ್ 30) ರಾಜ್ಯದಲ್ಲಿ 48,296 ಮಂದಿಯಲ್ಲಿ ಸೋಂಕು ದೃಢಪಟ್ಟು, 217 ಮಂದಿ ಸಾವನ್ನಪ್ಪಿದ್ದರು. ಮೊನ್ನೆ (ಏಪ್ರಿಲ್ 29) 35,024 ಮಂದಿಯಲ್ಲಿ ಸೋಂಕು ದೃಢಪಟ್ಟು, 270 ಮಂದಿ ಸಾವನ್ನಪ್ಪಿದ್ದರು. ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 200ಕ್ಕೂ ಅಧಿಕ ಪ್ರಮಾಣದಲ್ಲಿ ಇರುವುದು ಮತ್ತು ಸೋಂಕಿತರ ಸಂಖ್ಯೆ ಎರಡು ದಿನಗಳಿಂದ 40 ಸಾವಿರದ ಗಡಿ ದಾಟಿರುವುದು ಗಮನಾರ್ಹ ಸಂಗತಿ.
ರಾಜ್ಯದಲ್ಲಿ ಶನಿವಾರ ಹೊಸದಾಗಿ 40,990 ಜನರಿಗೆ ಕೊರೊನಾ ದೃಢಪಡುವುದರೊಂದಿಗೆ ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 15,64,132ಕ್ಕೆ (15.64 ಲಕ್ಷ) ಏರಿಕೆಯಾಗಿದೆ. ಈ ಪೈಕಿ 11,43,250 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 271 ಜನರ ಸಾವನ್ನಪ್ಪಿದ್ದಾರೆ. ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 15,794ಕ್ಕೆ ಏರಿಕೆಯಾಗಿದೆ. 4,05,068 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
ಖಾಸಗಿ ಆಸ್ಪತ್ರೆಗಳು ಸುಖಾಸುಮ್ಮನೆ ಬೆಡ್ ಇಲ್ಲ ಎನ್ನುವಂತಿಲ್ಲ; ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಿಟಿಜನ್ ಹೆಲ್ಪ್ ಡೆಸ್ಕ್
(Karnataka govt extends grocery shop opening time till 12 pm in Bengaluru)
Published On - 10:10 pm, Sat, 1 May 21