ಬಿಟ್‌ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ ಶಂಕೆ, ಮರು ತನಿಖೆಗೆ ಆದೇಶಿಸಿದ ಸಿದ್ದರಾಮಯ್ಯ ಸರ್ಕಾರ

| Updated By: ರಮೇಶ್ ಬಿ. ಜವಳಗೇರಾ

Updated on: Jul 03, 2023 | 1:03 PM

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಸುದ್ದು ಮಾಡಿದ್ದ ಬಿಟ್​ ಕಾಯಿನ್ (Bitcoin) ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣವನ್ನು ಮರುತನಿಖೆ ಸರ್ಕಾರ ಆದೇಶಿಸಿದೆ.

ಬಿಟ್‌ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ ಶಂಕೆ, ಮರು ತನಿಖೆಗೆ ಆದೇಶಿಸಿದ ಸಿದ್ದರಾಮಯ್ಯ ಸರ್ಕಾರ
ಬಿಟ್ ಕಾಯಿನ್
Follow us on

ಬೆಂಗಳೂರು: ಈ ಹಿಂದಿನ ಬಿಜೆಪಿ(BJP) ಸರ್ಕಾರ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಹಗರಣ(Bitcoin scam) ಪ್ರಕರಣವನ್ನು ಮರು ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ. ಕಾಟನ್ ಪೇಟೆ ಬಿಟ್ ಕಾಯಿನ್ ಪ್ರಕರಣವನ್ನು ಮರುತನಿಖೆಗೆ ಸಿಐಡಿಗೆ (SIT probe)ವರ್ಗಾವಣೆ ಇಂದು(ಜುಲೈ 03) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸಿಐಡಿ ಸಹ ಸರ್ಕಾರದ ಆದೇಶದಂತೆ ಕರ್ಭೀಕರ್ ನೇತೃತ್ವದಲ್ಲಿ ಎಸ್​ಐಟಿ ರಚನೆ  ಮಾಡಿದೆ. ಇನ್ನು ಈ ಬಗ್ಗೆ ಸ್ವತಃ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ನಾವು ಹಿಂದೆ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ವಿಚಾರದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಬಗ್ಗೆ ಮಾತನಾಡಿದ್ದೆವು. ಈಗ ಬಿಚ್ ಕಾಯಿನ್ ಪ್ರಕರಣ ಮರು ತನಿಖೆಗೆ ಅದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ SIT ರಚನೆ ಮಾಡಿದ್ದೇನೆ. ಸರ್ಕಾರದ ರಿಲೆಟೆಡ್ ಆದೇಶಗಳನ್ನ ಮಾಡುತ್ತೇವೆ. ಟೆಕ್ನಿಕಲ್ , ಅಂತರ್ ರಾಜ್ಯ, ಅಂತಾರಾಷ್ಟ್ರ ಇರುವುದಿರಂದ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲು ಬರಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Bengaluru News: ಬಿಟ್​ ಕಾಯಿನ್ ಬಹುಕೋಟಿ ಅಕ್ರಮ ವ್ಯವಹಾರ ಪ್ರಕರಣ: ಮರು ತನಿಖೆ ನಡೆಸುವಂತೆ ಸಿಐಡಿಗೆ ಪತ್ರ ಬರೆದ ನಗರ ಪೊಲೀಸ್​ ಕಮಿಷನರ್ ದಯಾನಂದ್

ಪತ್ರ ಬರೆದಿದ್ದ ಬೆಂಗಳೂರು ನಗರ ಪೊಲೀಸ್ ಕಮಿಷನರ್

2020ರಲ್ಲಿ ಬಿಟ್ ಕಾಯಿನ್ ಹಗರಣ ಸಂಬಂಧ ಬೆಂಗಳೂರಿನ ಕಾಟನ್​ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ (Bengaluru City Police)​ ಕಮಿಷನರ್ ದಯಾನಂದ್ (Commissioner Dayanand) ಅವರು ಸಿಐಡಿ (CID) ಡಿಜಿಪಿ ಎಂ.ಎ.ಸಲೀಂ (MA Salim) ಅವರಿಗೆ ಪತ್ರ ಬರೆದಿದ್ದರು.

ಈ ಹಿಂದೆ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್‌ (https://eproc.karnataka.gov.in) ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ದೋಚಿದ್ದ ಸಂಗತಿ ಪತ್ತೆ ಮಾಡಿದ್ದರು. ಜೊತೆಗೆ, ಶ್ರೀಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ, ಪೊಲೀಸ್ ಕಮಿಷನರ್ ತನಿಖೆ ಮುಂದುವರಿಸಲು ಆಸಕ್ತಿ ತೋರಿಸಿದ್ದು, ಗೃಹ ಸಚಿವರ ಸೂಚನೆ ಮೇರೆಗೆ ತನಿಖೆಗೆ ನಡೆಸಲು ಪತ್ರ ಬರೆದಿದ್ದರು.

ಕಾಟನ್ ಪೇಟೆ ಪ್ರಕರಣವನ್ನು ಈ ಹಿಂದೆ ಸಿಸಿಬಿ ತನಿಖೆ ಮಾಡಿತ್ತು. ಸಿಸಿಬಿ ತನಿಖೆಯಲ್ಲಿ ಹಗರಣ ನಡೆದಿದೆ, ರಾಜಕಾರಣಿಗಳು ಹಣ ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದವು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಆರೋಪ ಕೇಳಿಬಂದಿತ್ತು ಹೀಗಾಗಿ ಮರು ತನಿಖೆಗೆ ಕಾಂಗ್ರೆಸ್ ಆಗ್ರಹ ಮಾಡಿತ್ತು. ಅದರಂತೆ ಸರ್ಕಾರ ಈಗ ಸಿಐಡಿಗೆ ಪ್ರಕರಣವನ್ನು ವರ್ಗಾವಣೆ ಮಾಡಿದೆ.

ಈ ಪ್ರಕರಣದಲ್ಲಿ ಹಲವು ಬಿಜೆಪಿ ನಾಯಕರ ಕೈವಾಡವಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿತ್ತು. ಆರೋಪಿಗಳು ರಾಜ್ಯ ಸರ್ಕಾರದ ಇ-ಪೋರ್ಟಲ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವ ಮೂಲಕ 11.5 ಕೋಟಿ ರೂ. ಆರೋಪಿಗಳಲ್ಲಿ ಒಬ್ಬನಾದ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿಯನ್ನು ಬಂಧನವಾಗಿತ್ತು. ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ