ಪ್ರಯಾಣಿಕರಿಗೆ ಸಿಹಿ ಸುದ್ದಿ: ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಬಿಎಂಟಿಸಿ ಬಸ್ ಕಾರ್ಯಾರಂಭ
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ಸಂಚಾರ ಆರಂಭವಾಗಿದೆ.
ಬೆಂಗಳೂರು: ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉದ್ಘಾಟಿಸಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2 (T2) ನಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ಸಂಚಾರ ಆರಂಭವಾಗಿದೆ. ಹೌದು ಟರ್ಮಿನಲ್ 2 ನಿಂದ ಬಿಎಂಟಿಸಿಯ ವಾಯು ವಜ್ರ ಬಸ್‌ಗಳು ಕಾರ್ಯಾರಂಭ ಮಾಡಿವೆ. ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟುಕುವ ಪ್ರಯಾಣಕ್ಕಾಗಿ ಬಿಎಂಟಿಸಿ ಸೇವೆಗಳನ್ನು ಆರಿಸಿಕೊಳ್ಳಿ. ನಿಮ್ಮ ಮನೆ ಬಾಗಿಲಿಗೆ ನಮ್ಮ ಸೇವೆಯನ್ನು ತರುತ್ತಿದ್ದೇವೆ ಎಂದು ಬಿಎಂಟಿಸಿ ಭಾನುವಾರ ಟ್ವಿಟ್ ಮಾಡಿದೆ.
ಇದನ್ನೂ ಓದಿ: Namma BMTC: ಕೊನೆಗೂ ಅಸ್ತಿತ್ವಕ್ಕೆ ಬಂತು ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್ ಆ್ಯಪ್
ಟರ್ಮಿನಲ್ 2ನಿಂದ ಜನವರಿ 15, 2023 ರಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಟರ್ಮಿನಲ್ 1ನಿಂದ ಟರ್ಮಿನಲ್ 2ಗೆ ಸ್ಥಳಾಂತರಿಸಲಾಗುವುದು. ಇನ್ನು ಟರ್ಮಿನಲ್ 1ನಿಂದ ದೇಶಿ ವಿಮಾನಗಳು ಕಾರ್ಯಾಚರಣೆ ಆರಂಭಿಸುತ್ತವೆ ಎಂದು ಟೈಮ್ಸ್ ಆಫ್ ಇಂಡಿಯಾ ಜೂನ್ 8 ರಂದು ವರದಿ ಮಾಡಿತ್ತು.
“Hello Commuters ” Yes, you heard it Right… ! Now we are operating the buses from Terminal 2 also.
For safe,comfortable and affordable journey opt BMTC services..
Bringing our service at your door steps. pic.twitter.com/1X7fDndKlr
— BMTC (@BMTC_BENGALURU) July 1, 2023
BMTC ಯ ಟ್ವೀಟ್ಗೆ ತಿಕ್ರಿಯಿಸಿದ ನಿಹಾರ್ ಠಕ್ಕರ್ ಎಂಬುವರು ಎಲ್ಲ ಮಾರ್ಗಗಳ ಬಸ್‌ಗಳು ಟರ್ಮಿನಲ್1 ಮತ್ತು ಟರ್ಮಿನಲ್2ನಲ್ಲಿ ನಿಲ್ಲುತ್ತವೆಯೇ ಅಥವಾ ಕೆಲವು ಮಾತ್ರವೇ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ ಎಂದಿದ್ದಾರೆ. ಇನ್ನು ಅನೇಕರು ಬಸ್ ಸೇವೆಗಳ ವೇಳಾಪಟ್ಟಿಯನ್ನು ಕೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Mon, 3 July 23