ರಾಜ್ಯದ ನೆತ್ತಿಮೇಲೆ ತೂಗುತ್ತಿದೆಯಾ ಎರಡನೇ ಅಲೆ ಕತ್ತಿ, ಪರಿಸ್ಥಿತಿ ನಿಭಾಯಿಸಲು ಸರ್ಕಾರದ ರಂಗತಾಲೀಮು
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾ ಈಗ ಮತ್ತಷ್ಟು ಬಲಿಷ್ಠವಾಗುತ್ತಿದ್ದು 2ನೇ ಅಲೆ ಭೀತಿ ಶುರುವಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ ಎಂಬ ಸಮಾಧಾನದ ಪಡುವ ಮುನ್ನವೇ ಕೊರೊನಾ 2ನೇ ಅಲೆಯ ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಇದರ ತಯಾರಿ ನಡೆಸುತ್ತಿದೆ. ಈಗಾಗಲೇ ಆ್ಯಂಬುಲೆನ್ಸ್ಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಇದೀಗ ಆ್ಯಂಬುಲೆನ್ಸ್ಗಳನ್ನ ಮುಂದಿನ ಮೂರು ತಿಂಗಳ ಗುತ್ತಿಗೆ ಪಡೆಯಲು ನಿರ್ಧರಿಸಿದೆ. ಸದ್ಯ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು ಸೋಂಕಿತರು ಆಸ್ಪತ್ರೆಗಳಿಗೆ ಬರುತ್ತಿಲ್ಲ. ಹೀಗಾಗಿ […]

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯನ್ನು ಹಿಂಡಿ ಹಿಪ್ಪೆ ಮಾಡಿರುವ ಕೊರೊನಾ ಈಗ ಮತ್ತಷ್ಟು ಬಲಿಷ್ಠವಾಗುತ್ತಿದ್ದು 2ನೇ ಅಲೆ ಭೀತಿ ಶುರುವಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ ಎಂಬ ಸಮಾಧಾನದ ಪಡುವ ಮುನ್ನವೇ ಕೊರೊನಾ 2ನೇ ಅಲೆಯ ಆತಂಕ ಮನೆ ಮಾಡಿದೆ.
ಈ ನಿಟ್ಟಿನಲ್ಲಿ ಸರ್ಕಾರ ಇದರ ತಯಾರಿ ನಡೆಸುತ್ತಿದೆ. ಈಗಾಗಲೇ ಆ್ಯಂಬುಲೆನ್ಸ್ಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿದ್ದು, ಇದೀಗ ಆ್ಯಂಬುಲೆನ್ಸ್ಗಳನ್ನ ಮುಂದಿನ ಮೂರು ತಿಂಗಳ ಗುತ್ತಿಗೆ ಪಡೆಯಲು ನಿರ್ಧರಿಸಿದೆ. ಸದ್ಯ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು ಸೋಂಕಿತರು ಆಸ್ಪತ್ರೆಗಳಿಗೆ ಬರುತ್ತಿಲ್ಲ. ಹೀಗಾಗಿ ಶೇ50 ರಷ್ಟು ಬೆಡ್ ಮೀಸಲಾತಿ ಪದ್ಧತಿ ಕೈ ಬಿಡುವಂತೆ ಆಸ್ಪತ್ರೆಗಳು ಮನವಿ ಮಾಡಿದ್ದವು. ಇದನ್ನ ತಿರಸ್ಕರಿಸಿ ಸೆಕೆಂಡ್ ವೇವ್ ಬರುತ್ತಿದ್ದು ಸಿದ್ಧರಾಗಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಿಂದಲೂ ತಯಾರಿ ನಡೆಸುತ್ತಿವೆ. ಸದ್ಯ ಬೆಡ್ಗಳು ಖಾಲಿ ಇದ್ದರೂ ಪರವಾಗಿಲ್ಲ ಮುಂದಿನ ದಿನಗಳಿಗೆ ಅವಶ್ಯಕತೆ ಬೀಳುತ್ತೆ ಎಂದು ಸರ್ಕಾರ ತಿಳಿಸಿದೆ.
ಮುಚ್ಚಿರುವ ಕೊವಿಡ್ ಕೇರ್ ಸೆಂಟರ್ ಓಪನ್‌ಗೆ ಪ್ಲ್ಯಾನ್: ಕೊರೊನಾ ಸೆಕೆಂಡ್ ವೇವ್‌ನ ಆತಂಕ ಹಿನ್ನೆಲೆಯಲ್ಲಿ ಮುಚ್ಚಿರುವ ಕೊವಿಡ್ ಕೇರ್ ಸೆಂಟರ್ ಓಪನ್‌ಗೆ ಸರ್ಕಾರ ನಿರ್ಧರಿಸಿದೆ. 12 ಕೊವಿಡ್ ಕೇರ್ ಸೆಂಟರ್ ಪೈಕಿ 8 ಸೆಂಟರ್ ಕ್ಲೋಸ್ ಮಾಡಲಾಗಿದೆ. ಮತ್ತೆ ಅವುಗಳನ್ನು ಓಪನ್ ಮಾಡಲು ನಿರ್ಧರಿಸಲಾಗಿದೆ. ಸೆಕೆಂಡ್ ವೇವ್‌ನಲ್ಲಿ ಹೋಂ ಐಸೋಲೇಷನ್ ಸಾಧ್ಯವಿಲ್ಲ ಹೀಗಾಗಿ ಸ್ಟ್ಯಾಂಡ್ ಬೈನಲ್ಲಿ ಕೇರ್ ಸೆಂಟರ್ ಸಿದ್ಧತೆಗೆ ಪ್ಲ್ಯಾನ್ ಮಾಡಲಾಗಿದೆ.
Published On - 9:11 am, Thu, 12 November 20




