ಸರ್ಕಾರದ ಆದೇಶಕ್ಕೂ ಮುನ್ನವೇ ಕಾಲೇಜು ಆರಂಭ.. ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳ ಬೇಸರ
ಚಿಕ್ಕಬಳ್ಳಾಪುರ: ಸರ್ಕಾರದ ಆದೇಶಕ್ಕೂ ಮುನ್ನವೇ ಚಿಂತಾಮಣಿಯ ಖಾಸಗಿ ಕಾಲೇಜು ಆರಂಭವಾಗಿದೆ. ಚಿಂತಾಮಣಿಯ ವಿಕ್ರಂ ಪದವಿಪೂರ್ವ ಕಾಲೇಜು ಆರಂಭವಾಗಿದ್ದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿರುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳ ಕಣ್ಣುತಪ್ಪಿಸಿ ಶಿಕ್ಷಕರು ಪಾಠ ಮಾಡ್ತಿದ್ದಾರಂತೆ. ಕಾಲೇಜಿನ 2, 3ನೇ ಅಂತಸ್ತಿನಲ್ಲಿ ಅನಧಿಕೃತವಾಗಿ ಪಾಠ ನಡೆಯುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಇಷ್ಟವಿಲ್ಲದಿದ್ದರೂ ತರಗತಿಗಳನ್ನು ಅಟೆಂಡ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಸದ್ಯ ಈಗಾಗಲೇ ಸರ್ಕಾರ ನವೆಂಬರ್ ಅಂತ್ಯದೊಳಗೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ […]

ಚಿಕ್ಕಬಳ್ಳಾಪುರ: ಸರ್ಕಾರದ ಆದೇಶಕ್ಕೂ ಮುನ್ನವೇ ಚಿಂತಾಮಣಿಯ ಖಾಸಗಿ ಕಾಲೇಜು ಆರಂಭವಾಗಿದೆ. ಚಿಂತಾಮಣಿಯ ವಿಕ್ರಂ ಪದವಿಪೂರ್ವ ಕಾಲೇಜು ಆರಂಭವಾಗಿದ್ದು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿರುವ ಆರೋಪ ಕೇಳಿ ಬಂದಿದೆ.
ಅಧಿಕಾರಿಗಳ ಕಣ್ಣುತಪ್ಪಿಸಿ ಶಿಕ್ಷಕರು ಪಾಠ ಮಾಡ್ತಿದ್ದಾರಂತೆ. ಕಾಲೇಜಿನ 2, 3ನೇ ಅಂತಸ್ತಿನಲ್ಲಿ ಅನಧಿಕೃತವಾಗಿ ಪಾಠ ನಡೆಯುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಇಷ್ಟವಿಲ್ಲದಿದ್ದರೂ ತರಗತಿಗಳನ್ನು ಅಟೆಂಡ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಸದ್ಯ ಈಗಾಗಲೇ ಸರ್ಕಾರ ನವೆಂಬರ್ ಅಂತ್ಯದೊಳಗೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಚಿಂತಿಸಿದೆ. ಆದರೆ ಪೋಷಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಾಲೇಜು ತೆರೆಯುವುದು ಗೊಂದಲದ ಪ್ರಶ್ನೆಯಾಗಿದೆ. ಆದರೆ ಸರ್ಕಾರದ ಆದೇಶಕ್ಕೂ ಕಾಯದೆ ಪೋಷಕರ ಅಭಿಪ್ರಾಯಕ್ಕೂ ತಲೆ ಕೆಡಿಸಿಕೊಳ್ಳದೆ ಚಿಂತಾಮಣಿಯ ವಿಕ್ರಂ ಪದವಿಪೂರ್ವ ಕಾಲೇಜು ಆರಂಭವಾಗಿದೆ.