IPL Auction 2026 Live: ದಾಖಲೆಯ 14.20 ಕೋಟಿಗೆ ಸಿಎಸ್‌ಕೆ ಸೇರಿದ ಕಾರ್ತಿಕ್ ಶರ್ಮಾ
IPL Auction 2026 Live Updates in Kannada: ಐಪಿಎಲ್ 2026 ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದೆ. ಆರಂಭದಲ್ಲಿ, 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ಈ ಪಟ್ಟಿಗೆ ಇನ್ನೂ 19 ಆಟಗಾರರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಐಪಿಎಲ್ 2026 ರ ಹರಾಜಿನಲ್ಲಿ 10 ತಂಡಗಳು ಒಟ್ಟು 237.55 ಕೋಟಿ ಹಣವನ್ನು ಹೊಂದಿವೆ.

LIVE NEWS & UPDATES
-
ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್
ಪ್ರಶಾಂತ್ ವೀರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದಾರೆ.
SRH ಮತ್ತು CSK ನಡುವೆ ಬಿಡ್ಡಿಂಗ್ ಆರಂಭ
SRH 13 ಕೋಟಿ ಬಿಡ್ ಮಾಡಿದೆ.
13.8 ಕೋಟಿ ತಲುಪಿದ ಸಿಎಸ್‌ಕೆ.
14.20 ಕೋಟಿಗೆ ಖರೀದಿಸಿದ ಚೆನ್ನೈ.
-
ಆಕಿಬ್ ದಾರ್‌ಗೆ 8.4 ಕೋಟಿ
ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲಿಂಗ್ ಆಲ್‌ರೌಂಡರ್ ಆಕಿಬ್ ದಾರ್ 30 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ.
ಬಿಡ್ಡಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್.
ರಾಜಸ್ಥಾನ್ ರಾಯಲ್ಸ್ ಎಂಟ್ರಿ.
1 ಕೋಟಿ ದಾಟಿದ ತಕ್ಷಣ ರಾಜಸ್ಥಾನ ಔಟ್.
ಆರ್‌ಸಿಬಿ ಎಂಟ್ರಿ, 2 ಕೋಟಿ ತಲುಪಿದ ಬಿಡ್.
ಆರ್‌ಸಿಬಿ ಔಟ್, ಹೈದರಾಬಾದ್ ಇನ್.
8.40 ಕೋಟಿಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್
-
-
ಮಾರಾಟವಾಗದೆ ಉಳಿದ ಸ್ಟಾರ್ ಆಟಗಾರರು
ಲಿಯಾಮ್ ಲಿವಿಂಗ್‌ಸ್ಟನ್
ರಚಿನ್ ರವೀಂದ್ರ
ಮ್ಯಾಟ್ ಹೆನ್ರಿ
ಜೇಮೀ ಸ್ಮಿತ್
ಜೆರಾಲ್ಡ್ ಕೋಟ್ಜಿಯಾ
ಪೃಥ್ವಿ ಶಾ
ಸರ್ಫರಾಜ್ ಖಾನ್
ಮಹಿಷ ತೀಕ್ಷಣಾ
ಗಸ್ ಅಟ್ಕಿನ್ಸನ್
ಜೇಕ್ ಫ್ರೇಸರ್-ಮೆಕ್‌ಗುರ್ಕ್
ಡೆವೊನ್ ಕಾನ್ವೇ
ಜಾನಿ ಬೈರ್‌ಸ್ಟೋವ್
ರಹಮಾನುಲ್ಲಾ ಗುರ್ಬಾಜ್
-
ಇಲ್ಲಿಯವರೆಗೆ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರು
ಇಲ್ಲಿಯವರೆಗೆ, ಹರಾಜಿನಲ್ಲಿ ಕೇವಲ 12 ಆಟಗಾರರನ್ನು ಮಾತ್ರ ಖರೀದಿಸಲಾಗಿದೆ. ಅದರಲ್ಲಿ 4 ಆಟಗಾರರು ಅಧಿಕ ಮೊತ್ತ ಪಡೆದಿದ್ದಾರೆ.
ಕ್ಯಾಮೆರಾನ್ ಗ್ರೀನ್ – 25.20 ಕೋಟಿ, ಕೆಕೆಆರ್
ಮತಿಶಾ ಪತಿರ್ನಾ – 18 ಕೋಟಿ, ಕೆಕೆಆರ್
ರವಿ ಬಿಷ್ಣೋಯ್ – 7.20 ಕೋಟಿ, ರಾಜಸ್ಥಾನ್ ರಾಯಲ್ಸ್
ವೆಂಕಟೇಶ್ ಅಯ್ಯರ್ – 7 ಕೋಟಿ, ಆರ್‌ಸಿಬಿ
-
ರವಿ ಬಿಷ್ಣೋಯ್ ಸರದಿ
ರವಿ ಬಿಷ್ಣೋಯ್ ಮೂಲ ಬೆಲೆ 2 ಕೋಟಿ ರೂ.
ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಡ್ಡಿಂಗ್.
ಬಿಷ್ಣೋಯ್ ಬೆಲೆ 5 ಕೋಟಿಗೂ ಮೀರಿದೆ.
ರಾಜಸ್ಥಾನ 6 ಕೋಟಿ ರೂ.ಗೆ ಬಿಡ್ ಮಾಡಿದೆ.
ರಾಜಸ್ಥಾನ ಮತ್ತು ಹೈದರಾಬಾದ್ 7 ಕೋಟಿ ರೂ.ಗೂ ಹೆಚ್ಚು ಬಿಡ್ ಮಾಡಿವೆ.
7.20 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ ರವಿ.
-
-
ಲಕ್ನೋ ಸೇರಿದ ಆಫ್ರಿಕಾ ವೇಗಿ
ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋಕಿಯಾ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದ ಲಕ್ನೋ
-
ಮಥೀಶ ಪತಿರಾನಗೆ ಜಾಕ್ಪಾಟ್
ಮಥೀಶ ಪತಿರಾನ ಮೂಲ ಬೆಲೆ 2 ಕೋಟಿ ರೂ.
ಬಿಡ್ಡಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್.
ಲಕ್ನೋ ಆಗಮನ.
ದೆಹಲಿ-ಲಕ್ನೋ ನಡುವೆ ಕದನ ಆರಂಭ, 5 ಕೋಟಿ ರೂ. ದಾಟಿದ ಬಿಡ್.
10 ಕೋಟಿ ರೂ.ವರೆಗೆ ಬಿಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್
15 ಕೋಟಿ ರೂ.ಗಳನ್ನು ದಾಟಿದ ಎರಡೂ ತಂಡಗಳ ನಡುವಿನ ಬಿಡ್ಡಿಂಗ್
18 ಕೋಟಿಯೊಂದಿಗೆ ಕೆಕೆಆರ್ ಸೇರಿದ ಪತಿರಾನ
-
-
ಆರ್‌ಸಿಬಿಗೆ ಜಾಕೋಬ್ ಡಫ್ಫಿ
ನ್ಯೂಜಿಲೆಂಡ್ ವೇಗದ ಬೌಲರ್ ಜಾಕೋಬ್ ಡಫ್ಫಿ ಅವರನ್ನು ಆರ್‌ಸಿಬಿ 2 ಕೋಟಿ ಮೂಲ ಬೆಲೆಗೆ ಖರೀದಿಸಿದೆ.
-
ಡೆಲ್ಲಿ ಸೇರಿದ ಡಕೆಟ್
ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಬೆನ್ ಡಕೆಟ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ದೆಹಲಿ ಕ್ಯಾಪಿಟಲ್ಸ್ ₹2 ಕೋಟಿ ಮೂಲ ಬೆಲೆಗೆ ಖರೀದಿಸಿದೆ.
-
ಮುಂಬೈಗೆ ಮರಳಿದ ಡಿ ಕಾಕ್
ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೂಲ ಬೆಲೆ 1 ಕೋಟಿ ರೂ,ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ.
-
ಹರಾಜಿನಲ್ಲಿ ವೆಂಕಟೇಶ್ ಅಯ್ಯರ್
ವೆಂಕಟೇಶ್ ಅಯ್ಯರ್ ಅವರ ಮೂಲ ಬೆಲೆ 2 ಕೋಟಿ.
ಬಿಡ್ಡಿಂಗ್ ಆರಂಭಿಸಿದ ಲಕ್ನೋ
2.40 ಕೋಟಿ ಬಿಡ್ ಮಾಡಿದ ಗುಜರಾತ್ ಟೈಟನ್ಸ್
ಗುಜರಾತ್ ನಿರ್ಗಮನದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟ್ರಿ.
ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಪೈಪೋಟಿ
7 ಕೋಟಿಗೆ ಆರ್‌ಸಿಬಿ ಸೇರಿದ ಅಯ್ಯರ್
-
ಆಲ್‌ರೌಂಡರ್‌ಗಳ ಸೆಟ್
ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದಿದ್ದ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಅನ್ಸೋಲ್ಡ್
ರಚಿನ್ ರವೀಂದ್ರ (ಮೂಲ ಬೆಲೆ 2 ಕೋಟಿ) – ಸದ್ಯಕ್ಕೆ ಮಾರಾಟವಾಗಿಲ್ಲ.
ಲಿಯಾಮ್ ಲಿವಿಂಗ್‌ಸ್ಟೋನ್ (ಮೂಲ ಬೆಲೆ 2 ಕೋಟಿ) – ಸದ್ಯಕ್ಕೆ ಮಾರಾಟವಾಗಿಲ್ಲ.
ವಿಯಾನ್ ಮುಲ್ಡರ್ ಮೂಲ ಬೆಲೆ 1 ಕೋಟಿ, ಮಾರಾಟವಾಗಲಿಲ್ಲ
-
25.20 ಕೋಟಿಗೆ ಕೆಕೆಆರ್ ಪಾಲಾದ ಗ್ರೀನ್
2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಗ್ರೀನ್ಗಾಗಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪೈಪೋಟಿ ಶುರುವಾಯಿತು. ಆ ಬಳಿಕ ಕೆಕೆಆರ್ ಹಾಗೂ ಸಿಎಸ್‌ಕೆ ಜಿದ್ದಿಗೆ ಬಿದ್ದಿವೆ.
ಮುಂಬೈ ಇಂಡಿಯನ್ಸ್ ಬಿಡ್ಡಿಂಗ್ ಆರಂಭಿಸಿತು.
ಇದಾದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟ್ರಿಕೊಟ್ಟಿದೆ.
ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವೆ ಪೈಪೋಟಿ.
ಸುಮಾರು 13.50 ಕೋಟಿ ರೂ.ಗೆ ಬಿಡ್ ನಂತರ ಹಿಂದೆ ಸರಿದ ರಾಜಸ್ಥಾನ
ರಾಜಸ್ಥಾನ ತಂಡ ಹಿಂದೆ ಸರಿದ ತಕ್ಷಣ ಚೆನ್ನೈ ಸೂಪರ್ ಕಿಂಗ್ಸ್ ಎಂಟ್ರಿ.
ಗ್ರೀನ್ ಮೇಲಿನ ಬಿಡ್ 19 ಕೋಟಿ ದಾಟಿದೆ.
ಪ್ರಸ್ತುತ ಬಿಡ್ 25 ಕೋಟಿ ರೂ ದಾಟಿದೆ.
ಅಂತಿಮವಾಗಿ 25.20 ಕೋಟಿಗೆ ಕೆಕೆಆರ್ ಪಾಲಾದ ಗ್ರೀನ್
-
ಕಾನ್ವೇ ಅನ್ಸೋಲ್ಡ್
ನಿರೀಕ್ಷೆಯಂತೆ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಕೂಡ ಮೊದಲ ಸುತ್ತಿನಲ್ಲಿ ಮಾರಾಟವಾಗಲಿಲ್ಲ. ಅವರ ಮೂಲ ಬೆಲೆ ₹2 ಕೋಟಿ.
-
ಡೆಲ್ಲಿ ಸೇರಿದ ಮಿಲ್ಲರ್
ಮೂಲ ಬೆಲೆ 2 ಕೋಟಿ ರೂಗಳಿಗೆ ಡೇವಿಡ್ ಮಿಲ್ಲರ್ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
-
ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಅನ್ಸೋಲ್ಡ್
ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದ ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಅನ್ಸೋಲ್ಡ್ ಆಗಿದ್ದಾರೆ.
-
ಮಿನಿ ಹರಾಜನ್ನು ಎಲ್ಲಿ ವೀಕ್ಷಿಸಬಹುದು?
ಐಪಿಎಲ್ 2026 ರ ಮಿನಿ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೆಯೇ ಲೈವ್ ಸ್ಟ್ರೀಮಿಂಗ್ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತದೆ.
-
ಮಿನಿ ಹರಾಜು ಎಷ್ಟು ಗಂಟೆಗೆ ಪ್ರಾರಂಭ?
ಐಪಿಎಲ್ ಮಿನಿ ಹರಾಜು ಅಬುಧಾಬಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ.
ಐಪಿಎಲ್ 2026 ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದೆ. ಆರಂಭದಲ್ಲಿ, 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ಈ ಪಟ್ಟಿಗೆ ಇನ್ನೂ 19 ಆಟಗಾರರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಐಪಿಎಲ್ 2026 ರ ಹರಾಜಿನಲ್ಲಿ 10 ತಂಡಗಳು ಒಟ್ಟು 237.55 ಕೋಟಿ ಹಣವನ್ನು ಹೊಂದಿವೆ. ಕೆಕೆಆರ್ 64.30 ಕೋಟಿ ರೂಗಳೊಂದಿಗೆ ಅತಿ ಹೆಚ್ಚು ಹಣವನ್ನು ಹೊಂದಿದ್ದರೆ, ಮುಂಬೈ ಇಂಡಿಯನ್ಸ್ 2.75 ಕೋಟಿಯೊಂದಿಗೆ ಕಡಿಮೆ ಹಣವನ್ನು ಹೊಂದಿದೆ. ಐಪಿಎಲ್ 2026 ಕ್ಕೆ 77 ಆಟಗಾರರ ಸ್ಲಾಟ್‌ಗಳು ಲಭ್ಯವಿದ್ದು, ಇದರಲ್ಲಿ 52 ಭಾರತೀಯ ಮತ್ತು 25 ವಿದೇಶಿ ಆಟಗಾರರು ಸೇರಿದ್ದಾರೆ.
Published On - Dec 16,2025 1:29 PM
