AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರಿಗೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸ್ಬೇಡಿ: ಕಂಪನಿಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ

ಕಾರ್ಮಿಕರ ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ಬದಲು 10 ಗಂಟೆಗೆ ವಿಸ್ತರಣೆ ಮಾಡುವ ಪ್ರಸ್ತಾವಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಶೀಘ್ರ ನಿರ್ಧಾರ ತಿಳಿಸಲಿದೆ. ಆದರೆ, ಕಾರ್ಮಿಕರ ಮೇಲೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸುವಂತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾರ್ಮಿಕರಿಗೆ ಒತ್ತಡ ಹೇರಿ 10 ಗಂಟೆ ಕೆಲಸ ಮಾಡಿಸ್ಬೇಡಿ: ಕಂಪನಿಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Sunil MH
| Edited By: |

Updated on: Aug 01, 2025 | 7:38 AM

Share

ಬೆಂಗಳೂರು, ಆಗಸ್ಟ್ 1: ಕಾರ್ಮಿಕರ ಕೆಲಸದ ಅವಧಿಯನ್ನು 8 ರಿಂದ 10 ಗಂಟೆ ವಿಸ್ತರಣೆ (Working Hours Extension) ಮಾಡುವ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಪ್ರಸ್ತಾವನೆ ಕಳುಹಿಸಿತ್ತು. ಈ ಪ್ರಸ್ತಾವನೆಗೆ ಕೆಲಸದ ಕರ್ನಾಟಕದಲ್ಲಿ ಕಾರ್ಮಿಕ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿವೆ. ಇದರ ಬೆನ್ನಲ್ಲೇ ಕರ್ನಾಟಕ ಕಾರ್ಮಿಕ ಇಲಾಖೆಯು ಸಚಿವ ಸಂತೋಷ್ ಲಾಡ್ (Santosh Lad) ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು, ಕೈಗಾರಿಕೋದ್ಯಮಿಗಳು, ಐಟಿ ಉದ್ಯಮಿಗಳ ಜೊತೆ ಹಲವು ಬಾರಿ ಸಭೆ ನಡೆಸಿದೆ. ಕೇಂದ್ರದ ಪ್ರಸ್ತಾವಕ್ಕೆ ಕಾರ್ಮಿಕ ಸಂಘಟನೆಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದರೆ, ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿಲ್ಲ. ಇದೀಗ ರಾಜ್ಯ ಕಾರ್ಮಿಕ ಇಲಾಖೆಯು (Karnataka Labour Department) ಕಾರ್ಮಿಕರ ಹಿತದೃಷ್ಟಿಯಿಂದ ಒಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವನೆಗೆ ಯಾವುದೇ ಪರ-ವಿರೋಧ ವ್ಯಕ್ತಪಡಿಸದೆ ಇರುವ ಕಾರ್ಮಿಕ ಇಲಾಖೆ, ಕಾರ್ಮಿಕರಿಗೆ ಒತ್ತಡ ಹಾಕಿ 10 ಗಂಟೆಗಳ ಕಾಲ ಕೆಲಸ ಮಾಡದಂತೆ ಕಂಪನಿಗಳಿಗೆ ಎಚ್ಚರಿಕೆ ಕೊಟ್ಟಿದೆ.

ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು?

ಕೇಂದ್ರ ಸರ್ಕಾರವು 9-10 ಗಂಟೆ ಕೆಲಸ ಮಾಡಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸಿತ್ತು. ನಾವು ಟ್ರೇಡ್ ಯೂನಿಯನ್ ಸಭೆ ಮಾಡಿದ್ದೆವು. ಕೈಗಾರಿಕೋದ್ಯಮಿಗಳನ್ನು ಸಹ ಕರೆದು ಮಾತನಾಡಿದ್ದೆವು. ಕಾರ್ಮಿಕರು ಕೆಲಸದ ಅವಧಿ ವಿಸ್ತರಣೆಗೆ ಒಪ್ಪಿದರೆ ಅವರಿಗೆ ವಾರದಲ್ಲಿ ಎರಡುದಿನ ರಜೆ ಇರಲಿದೆ. ಕಾರ್ಮಿಕರು ಒಪ್ಪಿದರೆ ಇದನ್ನು ಜಾರಿಗೆ ತರಬಹುದು. ಮಾರ್ಗಸೂಚಿ ಪ್ರಕಾರ ನಾವು ಅವರಿಗೆ ಅವಕಾಶ ಕೋಡುತ್ತೇವೆ. ಕಾರ್ಮಿಕರ ಒಪ್ಪಿಗೆ ಇಲ್ಲದಿದ್ದರೆ ಅವಕಾಶ ಕೊಡಲ್ಲ. ಕಾರ್ಮಿಕರ ಅಭಿಪ್ರಾಯವನ್ನು ನಾವು ಪಡೆಯುತ್ತೇವೆ . ಕಾರ್ಮಿಕರು ಒಪ್ಪಿದರೆ ಮಾತ್ರ ಕೆಲಸದ ಅವಧಿ ವಿಸ್ತರಣೆ ಮಾಡಲು ಅವಕಾಶ ನೀಡುತ್ತೇವೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಇದನ್ನೂ ಓದಿ
Image
ಚಾಲಕರಿಗೆ ಕಡ್ಡಾಯ ಹೆಲ್ತ್ ಕಾರ್ಡ್: ಹೊಸ ನಿಯಮ ಕಡ್ಡಾಯಕ್ಕೆ ಚಿಂತನೆ
Image
ಬೆಂಗಳೂರಿನ ಈ ರಸ್ತೆಯಲ್ಲಿ ಪ್ರತಿದಿನ ಕಿಲೋಮೀಟರ್​ ಗಟ್ಟಲೇ ಟ್ರಾಫಿಕ್ ಜಾಮ್!
Image
ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಶಾಸಕ ವಿನೂತನ ಪ್ರಯತ್ನ: ರಾಜ್ಯದಲ್ಲೇ ಮೊದಲು
Image
ದಿನಕ್ಕೆ 12 ಗಂಟೆ ಕೆಲಸ: ಪ್ರತಿಭಟನೆಗೆ ಮಣಿದು ಸರ್ಕಾರದಿಂದ ಮಹತ್ವದ ನಿರ್ಧಾರ

ಅದರೆ, ಕಾರ್ಮಿಕ ಇಲಾಖೆ ಸಚಿವನಾಗಿ ಕೆಲಸದ ಅವಧಿ ವಿಸ್ತರಣೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಲಾಡ್ ಕಾರ್ಮಿಕರ ಪರ ಬ್ಯಾಟ್ ಬೀಸಿದ್ದಾರೆ.

ಅವಧಿ ವಿಸ್ತರಣೆಗೆ ರಾಜ್ಯದಲ್ಲಿ ಮಾನದಂಡ ತರಲು ನಿರ್ಧಾರ

ಕೆಲಸದ ಅವಧಿ ವಿಸ್ತರಣೆಯಿಂದ ಕಾರ್ಮಿಕರಿಗೆ ಸಾಕಷ್ಟು ಅನನುಕೂಲ ಆಗಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಕೆಲಸಕ್ಕೆ ಬರುವುದಕ್ಕೆ, ಆಮೇಲೆ ಕೆಲಸ ಮುಗಿಸಿ ಹೋಗುವುದಕ್ಕೆ ಸಾಕಷ್ಟು ತೊಂದರೆ ಆಗುತ್ತದೆ. ಹೀಗಾಗಿ ರಾಜ್ಯ ಕಾರ್ಮಿಕ ಇಲಾಖೆ ಒಂದಷ್ಟು ಮಾನದಂಡಗಳನ್ನು ತರಲು ನಿರ್ಧಾರ ಮಾಡಿದೆ. ಕಾರ್ಮಿಕರಿಗೆ ಒತ್ತಡ ಹಾಕಿ ಕೆಲಸ ಮಾಡಿಸುವಂತಿಲ್ಲ. ಕಾರ್ಮಿಕರು ಕೆಲಸ ಮಾಡುವುದಾಗಿ ಒಪ್ಪಿ ಪತ್ರ ಬರೆದು ಕೊಡಬೇಕು, ಹಾಗಿದ್ದರಷ್ಟೇ ಮಾಡಿಸಬಹುದು. ಕಂಪನಿಯವರು ತೊಂದರೆ ಕೊಟ್ಟರೆ ಕಾರ್ಮಿಕ ಇಲಾಖೆಗೆ ನೇರವಾಗಿ ಕಾರ್ಮಿಕರು ದೂರು ನೀಡಬಹುದು. ಕೆಲಸದ ಅವಧಿ ವಿಸ್ತರಣೆಯ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಆಗಾಗ ಪರಿಶೀಲನೆ ಮಾಡಬೇಕು. ಈ ರೀತಿಯ ಮಾನದಂಡಗಳನ್ನು ಜಾರಿಗೆ ತರಲು ನಿರ್ಧಾರ ಮಾಡಿದೆ ಎಂದು ಲಾಡ್ ಹೇಳಿದ್ದಾರೆ.

ಇದನ್ನೂ ಓದಿ: ದಿನಕ್ಕೆ 12 ಗಂಟೆ ಕೆಲಸ: ಪ್ರತಿಭಟನೆಗೆ ಮಣಿದು ಕೊನೆಗೂ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ

ಸದ್ಯಕ್ಕೆ ಕೇಂದ್ರದ ಅವಧಿ ವಿಸ್ತರಣೆ ಪ್ರಸ್ತಾವಕ್ಕೆ ಪರ ಅಥವಾ ವಿರೋಧವನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿಲ್ಲ. ಆದರೆ ಕಾರ್ಮಿಕರಿಗೆ ತೊಂದರೆ ಆದರೆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದೆ. ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆಗೆ‌ ಕೈಗಾರಿಕೋದ್ಯಮಿಗಳ ಒತ್ತಡ ಕೂಡ ಹೆಚ್ಚಾಗಿದೆ . ಹೀಗಾಗಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಕೇಂದ್ರದ ಅವಧಿ ವಿಸ್ತರಣೆ ನಿರ್ಧಾರಕ್ಕೆ ಮಣಿಯುತ್ತದೆಯಾ ಅಥವಾ ಕಾರ್ಮಿಕರ ಪರ ನಿಲ್ಲುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ