AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಕೊವಿಡ್ ಆತಂಕ: ಜಿಲ್ಲಾ-ತಾಲೂಕ ಆಸ್ಪತ್ರೆಗಳಿಗೆ ಮಹತ್ವದ ಸುತ್ತೋಲೆ

ಕರ್ನಾಟಕದಲ್ಲಿ ಕೊರೊನಾ ವೈರಸ್​​ನ ಜೆಎನ್​​1 ರೂಪಾಂತರಿ(Coronavirus JN1) ತಳಿ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು, ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ. ಆರೋಗ್ಯ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ? ಎನ್ನುವ ವಿವರ ಈ ಕೆಳಗಿನಂತಿದೆ.

ಕರ್ನಾಟಕದಲ್ಲಿ ಕೊವಿಡ್ ಆತಂಕ: ಜಿಲ್ಲಾ-ತಾಲೂಕ ಆಸ್ಪತ್ರೆಗಳಿಗೆ ಮಹತ್ವದ ಸುತ್ತೋಲೆ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Dec 19, 2023 | 7:04 PM

Share

ಬೆಂಗಳೂರು (ಡಿಸೆಂಬರ್.19): ಕಳೆದ ಮೂರ್ನಾಲ್ಕು ವರ್ಷಗಳಿಂದ ಕೋವಿಡ್ (Coronavirus) ಎನ್ನುವ ಮಹಾಮಾರಿ ಸೋಂಕು ಹೊಸ ವರ್ಷದ ಅದ್ಧೂರಿ ಸಂಭ್ರಮಾಚರಣೆಯನ್ನು ಕಿತ್ತುಕೊಂಡಿತ್ತು. ಈ ವರ್ಷ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎನ್ನುವಷ್ಟರಲ್ಲಿ ಪುನಃ ಕೋವಿಡ್ ವೈರಸ್‌ ಮತ್ತೊಂದು ರೂಪಾಂತರವಾಗಿ(Coronavirus JN1) ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು, ಮುಂಜಾಗ್ರತೆ ಕ್ರಮವಹಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದೆ.

ಆಸ್ಪತ್ರೆಗಳ ಸಿದ್ಧತೆ ಹಾಗೂ ಟೆಸ್ಟಿಂಗ್ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲ ಮುಂಜಾಗ್ರತೆ ಕ್ರಮವಹಿಸುವಂತೆ ತಿಳಿಸಿದೆ. ಅಲ್ಲದೇ ಐಸಿಯು ಘಟಕ ಹಾಗೂ ಆಕ್ಸಿಜನ್ ಘಟಕಗಳನ್ನ ಲಿಕ್ವಿಡ್ ಆಕ್ಸಿಜನ್, ವೆಂಟಿಲೇಟರ್ ಉಪಕಣಗಳನ್ನು ಪರಿಶೀಲಿಸಿ ಅವುಗಳ ಸ್ಥಿತಿಗತಿಯ ವಾಸ್ತವ ವರದಿಯನ್ನ ಸಲ್ಲಿಸಲು ಜಂಟಿ ನಿರ್ದೇಶಕರಿಗೆ ಸುತ್ತೋಲೆ ಮೂಲಕ ಸೂಚಿಸಿದೆ.

ಇದನ್ನೂ ಓದಿ: Karnataka Covid Guidelines: ಕರ್ನಾಟಕ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ, ಇಲ್ಲಿದೆ ವಿವರ

ವರದಿಯಲ್ಲಿರಬೇಕಾದ ಅಂಶಗಳು ಏನು..?

  •  PSA ಪ್ಯಾಂಟ್‌ಗಳ ಕಾರ್ಯವೈಖರಿ ಬಗ್ಗೆ ವರದಿ ನೀಡುವುದು.
  •  ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಗಳ ಬಗ್ಗೆ, ವರದಿ ಸಲ್ಲಿಸುವುದು.
  •  ಮುಖ್ಯವಾಗಿ ಐ.ಸಿ.ಯು ಉಪಕರಣಗಳು ವೆಂಟಿಲೇಟ‌ರ್ಗಗಳನ್ನು ಸ್ವತಃ ಪರಿಶೀಲಿಸಿ ಕಾರ್ಯನಿರ್ವಹಣೆ ಬಗ್ಗೆ, ವರದಿ ನೀಡುವುದು.
  •  ಎಲ್ಲಾ ಆಕ್ಸಿಜನ್ ಸಿಲಿಂಡರ್ ಗಳನ್ನು ತುಂಬಿಸುವ ಬಗ್ಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವುದು/.
  •  ಆಕ್ಸಿಜನ್ ಕಾನ್ಸಂಟ್ರೇಟರ್ ಬಗ್ಗೆ, ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.
  •  ಮೆಡಿಕಲ್ ಗ್ಯಾಸ್ ಪೈಪ್ ಲೈನ್ ಬಗ್ಗೆ, ತಪಾಸಣೆ ಕೈಗೊಂಡು ವರದಿ ಸಲ್ಲಿಸುವುದು.
  •  ICU ನಲ್ಲಿ ಇರುವ ಎಲ್ಲಾ ಯಂತ್ರೋಪಕರಣಗಳ ಬಗ್ಗೆ, ತಪಾಸಣೆ ಮತ್ತು ಔಷಧಗಳ ಲಭ್ಯತೆ ಬಗ್ಗೆ, ಕ್ರಮಕೈಗೊಳ್ಳುವುದು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ