Madal Virupakshappa: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು

| Updated By: ರಮೇಶ್ ಬಿ. ಜವಳಗೇರಾ

Updated on: Mar 07, 2023 | 12:56 PM

ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ KSDL ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

Madal Virupakshappa: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು
ಮಾಡಾಳ್ ವಿರೂಪಾಕ್ಷಪ್ಪ
Follow us on

ಬೆಂಗಳೂರು: ಪುತ್ರನ ಲಂಚ ಪ್ರಕರಣದಲ್ಲಿ A1 ಆರೋಪಿಯಾಗಿರುವ KSDL ಮಾಜಿ ಚೇರ್ಮನ್ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪಗೆ(Madal Virupakshappa )ಜಾಮೀನು ಸಿಕ್ಕಿದೆ. ನ್ಯಾಯಾಮುರ್ತಿ ನಟರಾಜನ್ ಅವರು ಮಾಡಳ್ ವಿರೂಪಾಕ್ಷಪ್ಪಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ಪೊಲೀಸರು ದಾಖಲೆ ಸಲ್ಲಿಸುವವರೆಗೆ ಹೈಕೋರ್ಟ್ ಏಕಸದಸ್ಯ ಪೀಠ ಮಾಡಾಳ್ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ನೀಡಿದ್ದು. 5 ಲಕ್ಷ ರೂ. ಮೌಲ್ಯದ ಬಾಂಡ್​, ಇಬ್ಬರು ಶ್ಯೂರಿಟಿ ನೀಡುವಂತೆ ಕೆ.ನಟರಾಜನ್​ ಹೇಳಿದ್ದಾರೆ. ಅಲ್ಲದೇ ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಖಡಕ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದರು.

ಇದನ್ನೂ ಓದಿ: ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಪ್ರಕರಣದ ಇಬ್ಬರು ತನಿಖಾಧಿಕಾರಿಗಳ ಬದಲಾವಣೆ, ಅನುಮಾನ ಹುಟ್ಟುಹಾಕಿದ ಬದಲಾವಣೆ

ಕಳೆದ ಆರು ದಿನಳಿಂದ ಅಜ್ಞಾತ ಸ್ಥಳದಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ಪರ ಹಿರಿಯ ವಕೀಲ ಕೆ.ಸುಮನ್ ವಾದ ಮಂಡಿಸಿದ್ದು, ಎಫ್ಐಆರ್​ನಲ್ಲಿ ಯಾವುದೇ ಆರೋಪಗಳಿಲ್ಲ. ಲೋಕಾಯುಕ್ತ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಟೆಂಡರ್ ಹಾಗೂ ಖರೀದಿ ಆದೇಶ ನೀಡಲಾಗಿದೆ. ಆದ್ರೆ, ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪನವರದ್ದಲ್ಲ. ಲಂಚಕ್ಕೆ ಯಾವುದೇ ಬೇಡಿಕೆ ಇಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ. ಮಗನೊಂದಿಗೆ ಮಾತನಾಡುವಂತೆ ತಿಳಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಆರೋಪವಿಲ್ಲ. ಹೀಗಾಗಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

ಮಾಡಾಳ್​ಗೆ 75 ವರ್ಷ ವಯಸ್ಸಾಗಿದ್ದು, ಹೃದಯದ ಸಮಸ್ಯೆಯಿದೆ. ಇದರಿಂದ ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ನೀಡುವಂತೆ ವಕೀಲ ಸುಮನ್ ಮಾಡಿದರು. ಆದ್ರೆ ಅನಾರೋಗ್ಯ, ಹೃದಯದ ಸಮಸ್ಯೆ ಇದೆ ಎಂದು ಅರ್ಜಿಯಲ್ಲಿ ಹೇಳಿಲ್ಲವಲ್ಲ. ಇದಕ್ಕೆ ಪೂರಕ ದಾಖಲೆ ಎಲ್ಲಿದೆ. ಪೂಕರ ದಾಖಲೆ ಸಲ್ಲಿಸಿಲ್ಲ, ಆದರೆ ಪೊಲೀಸರು ಶಾಸಕರನ್ನು ಹುಡುಕುತ್ತಿದ್ದಾರೆ. ಇಷ್ಟು ದಿನವೇ ಬಂಧಿಸಿಲ್ಲ, ಇನ್ನೆರಡು ದಿನದಲ್ಲಿ ಬಂಧಿಸುತ್ತಾರೆಯೇ? ಎಂದು ನ್ಯಾ.ಕೆ.ನಟರಾಜನ್ ಪ್ರಶ್ನಿಸಿದರು.

 

Published On - 12:34 pm, Tue, 7 March 23