AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಯುನಿಟ್​ ಉಚಿತ ವಿದ್ಯುತ್: ಸಿಎಂಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್

​​200 ಯುನಿಟ್​ ಉಚಿತ ವಿದ್ಯುತ್​ ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಧ್ಯೆ ವಾಕ್ಸಮರ ಶರುವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೆ ​ಬನ್ನಿ ವಿದ್ಯುತ್ ಬಗ್ಗೆ ಚರ್ಚೆ ಮಾಡೋಣ, ನಾನು ತಯಾರಿದ್ದೇನೆ. ಈಗ ನಮ್ಮ ಘೋಷಣೆಗಳನ್ನು ಬೋಗಸ್ ಎಂದು ಕರೆಯುತ್ತಿದ್ದೀರಿ. ಬನ್ನಿ ಚರ್ಚೆಗೆ ಯಾವುದೇ ವೇದಿಕೆಯಾದರೂ ಸರಿ ಎಂದು ಡಿಕೆ ಶಿವಕುಮಾರ ಚರ್ಚೆಗೆ ಆಹ್ವಾನಿಸಿದ್ದಾರೆ.

200 ಯುನಿಟ್​ ಉಚಿತ ವಿದ್ಯುತ್: ಸಿಎಂಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಡಿಕೆ ಶಿವಕುಮಾರ್
ಸಿಎಂ ಬೊಮ್ಮಾಯಿ (ಎಡಚಿತ್ರ) ಡಿಕೆ ಶಿವಕುಮಾರ್​ (ಬಲಚಿತ್ರ)
ವಿವೇಕ ಬಿರಾದಾರ
|

Updated on: Mar 07, 2023 | 12:18 PM

Share

ಬೆಂಗಳೂರು: 200 ಯುನಿಟ್​ ಉಚಿತ ವಿದ್ಯುತ್ (Free Electricity)​ ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಧ್ಯೆ ವಾಕ್ಸಮರ ಶರುವಾಗಿದೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೆ ಬನ್ನಿ ವಿದ್ಯುತ್ ಬಗ್ಗೆ ಚರ್ಚೆ ಮಾಡೋಣ, ನಾನು ತಯಾರಿದ್ದೇನೆ. ಈಗ ನಮ್ಮ ಘೋಷಣೆಗಳನ್ನು ಬೋಗಸ್ ಎಂದು ಕರೆಯುತ್ತಿದ್ದೀರಿ. ಬನ್ನಿ ಚರ್ಚೆಗೆ ಯಾವುದೇ ವೇದಿಕೆಯಾದರೂ ಸರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಚರ್ಚೆಗೆ ಆಹ್ವಾನ ನೀಡಿದ್ದಾರೆ. “ಅಧಿಕಾರಕ್ಕೆ ಬಂದರೇ 200 ಯುನಿಟ್​ ಉಚಿತ ಗೃಹ ಬಳಕೆ ವಿದ್ಯುತ್​ ನೀಡುವುದಾಗಿ ಘೋಷಿಸಿದೆ. ಆದರೆ ಈ ಘೋಷಣೆಯಲ್ಲಿ ಮೋಸವಿದೆ. ಗೃಹ ಬಳಕೆ ವಿದ್ಯುತ್​​​​ 60-70 ಯುನಿಟ್​​ಗಿಂತ್​ ಹೆಚ್ಚಾಗಿ ಬಳಕೆಯೇ ಆಗುವುದಿಲ್ಲ. ಹೀಗಿದ್ದರೂ 200 ಯುನಿಟ್​ವರೆಗೆ ಉಚಿತ ಎಂದು ಹೇಳುವುದು ಜನರಿಗೆ ಏಮಾರಿಸಿದಂತೆ ಅಲ್ಲವೇ? ಎಂದು ಪ್ರಶ್ನಿಸಿದ್ದರು”.

ಈ ಸಂಬಂಧ ಇಂದು (ಮಾ.7) ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ನಾವು ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡಲಿಲ್ಲ ಅಂದರೆ, ರಾಜ್ಯದ ಜನರ ಮುಂದೆ ಹೋಗಿ ರಾಜಕಾರಣ ಮಾಡುವುದಿಲ್ಲ. ಜನರಿಗೆ ನಾವು ಶಪಥ ಮಾಡಿದ್ದೇವೆ. ಸಿಎಂ ಅವರೇ, ನಾನು ಬಹಿರಂಗ ವೇದಿಕೆಯ ಚರ್ಚೆಗೆ ತಯಾರಿದ್ದೇನೆ, ನೀವು ಯಾವುದೇ ವೇದಿಕೆಗಾದರೂ ಬನ್ನಿ, ವಿದ್ಯುತ್ ಬಗ್ಗೆ ಚರ್ಚೆ ಮಾಡೋಣ, ನಾನು ತಯಾರಿದ್ದೇನೆ ಎಂದು ಆಹ್ವಾನ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುತ್ತಾರೆ

ಮುಂದಿನ ದಿನಗಳಲ್ಲಿ ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುತ್ತಾರೆ. ಇವತ್ತು ಕಾಂಗ್ರೆಸ್ ಸೇರ್ಪಡೆಯಾಗುವವರ ದೊಡ್ಡ ಪಟ್ಟಿ ಇದೆ. ಕಾಂಗ್ರೆಸ್ ಸೇರುವ ಕೆಲವರ ಹೆಸರನ್ನು ಚರ್ಚೆ ಮಾಡಬೇಕಿತ್ತು. ಈಗ ಇಬ್ಬರು ಮಾಜಿ ಶಾಸಕರು ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಬಿಜೆಪಿಯವರು ಚುನಾವಣೆಗೆ ಹೋಗಬೇಕೆಂದು ಅಧಿಕಾರಿಗಳನ್ನು ಕರೆದು ಬಿಜೆಪಿ ನಾಯಕರು ಚರ್ಚೆ ಮಾಡಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ದಿನೇದಿನೆ ಮುಂದಕ್ಕೆ ಹೋಗುತ್ತಿದೆ. ಬಿಜೆಪಿಯವರಿಗೆ ನಿತ್ಯ ಜನರೇ ಶಾಕಿಂಗ್ ನ್ಯೂಸ್ ಕೊಡುತ್ತಿದ್ದಾರೆ. ಭಾವನೆ ಹಾಗೂ ಬದುಕಿನ ಮಧ್ಯೆ ಸ್ಪಷ್ಟ ವ್ಯತ್ಯಾಸ ಇದೆ. ಕೂಡಲೇ ಚುನಾವಣಾ ಆಯೋಗ ಚುನಾವಣೆ ದಿನಾಂಕ ಘೋಷಣೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಿಲ್ಲಿಸಬೇಕು. ನಾವು ಯಾವಾಗ ಬೇಕಾದರೂ ಚುನಾವಣೆಗೆ ಹೋಗಲು ಸಿದ್ಧ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ