ನಿರ್ಮಿತಿ ಕೇಂದ್ರದ ಅಧಿಕಾರಿಗಳೂ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವಂತೆ ಹೈಕೋರ್ಟ್ ಮಹತ್ವದ ಆದೇಶ

ನಿರ್ಮಿತಿ ಕೇಂದ್ರವು ನೋಂದಣಿಯಾಗಿರುವ ಸಂಘವಾಗಿದೆ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುವುದಿಲ್ಲವೆಂದು ಅರ್ಜಿದಾರ ಕೃಷ್ಣೇಗೌಡ ವಾದ ಮಂಡಿಸಿದ್ದರು. ಆದರೆ, ಇದೀಗ ಅವರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿಗಳೂ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವಂತೆ ಹೈಕೋರ್ಟ್ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್

ಬೆಂಗಳೂರು: ನಿರ್ಮಿತಿ ಕೇಂದ್ರದ ಅಧಿಕಾರಿಗಳೂ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಇಂದು (ಜುಲೈ 21) ಮಹತ್ವದ ಆದೇಶ ಹೊರಡಿಸಿದೆ. ಆದಾಯ ಮೀರಿ ಆಸ್ತಿ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ. ಈ ಮೂಲಕ, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಜಿ.ಕೃಷ್ಣೇಗೌಡ ಅರ್ಜಿ ವಜಾಗೊಳಿಸಲಾಗಿದೆ.

ನಿರ್ಮಿತಿ ಕೇಂದ್ರವು ನೋಂದಣಿಯಾಗಿರುವ ಸಂಘವಾಗಿದೆ. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುವುದಿಲ್ಲವೆಂದು ಅರ್ಜಿದಾರ ಕೃಷ್ಣೇಗೌಡ ವಾದ ಮಂಡಿಸಿದ್ದರು. ಆದರೆ, ಇದೀಗ ಅವರ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.

ಸರ್ಕಾರಿ ಕರ್ತವ್ಯ ನಿರತನೂ ಪಿಸಿ ಕಾಯ್ದೆ ವ್ಯಾಪ್ತಿಗೆ ಬರುತ್ತಾನೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಹಣದಿಂದ ಕಾರ್ಯ ನಿರ್ವಹಣೆ ಆಗುತ್ತದೆ. ಹೀಗಾಗಿ ಸರ್ಕಾರ, ಜನರಿಗೆ ನಿರ್ಮಿತಿ ಕೇಂದ್ರ ಉತ್ತರದಾಯಿ ಆಗಿರುತ್ತದೆ. ಕಾನೂನಿನ ಹುಳುಕುಗಳಿಂದ ಭ್ರಷ್ಟರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಭ್ರಷ್ಟಾಚಾರ ಕಡಿಮೆ ರಿಸ್ಕ್, ಹೆಚ್ಚು ಲಾಭದ ದಂಧೆಯಾಗಿಬಿಟ್ಟಿದೆ. ಒಳ್ಳೆಯ ಕಾನೂನಿದ್ದರೆ ಭ್ರಷ್ಟಾಚಾರ ಕಡಿಮೆಯಾಗುವುದಿಲ್ಲ. ಆ ಕಾನೂನನ್ನು ಅನುಷ್ಠಾನಗೊಳಿಸಿ ಭ್ರಷ್ಟರನ್ನು ಹೊಣೆಗಾರರಾಗಿಸಬೇಕು. ಭ್ರಷ್ಟಾಚಾರ ಎಲ್ಲರನ್ನೂ ಬಾಧಿಸುತ್ತದೆ. ವ್ಯವಸ್ಥೆ ಮೇಲಿನ ಶ್ರೀಸಾಮಾನ್ಯನ ವಿಶ್ವಾಸ ಅಳಿಸುತ್ತದೆ. ದೇಶದಿಂದ ಭ್ರಷ್ಟಾಚಾರ ತೊಲಗಿಸುವುದು ಗುರಿಯಾಗಬೇಕು ಎಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಮಹತ್ವದ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಆದೇಶಗಳನ್ನು ಉಲ್ಲಂಘಿಸಿದ ಬಿಡಿಎಗೆ ಹೈಕೋರ್ಟ್ ತರಾಟೆ