ಪ್ರತಿ ಪೊಲೀಸ್ ಠಾಣೆಗೆ 2 ಶಬ್ದ ಮಾಪಕ ಅಗತ್ಯ: ಹೈಕೋರ್ಟ್​ಗೆ ಪೊಲೀಸ್ ಇಲಾಖೆ ಮಾಹಿತಿ

ಬೆಂಗಳೂರಿನ ಪ್ರತಿ ಪೊಲೀಸ್ ಠಾಣೆಗೆ 2 ಶಬ್ದಮಾಪಕ ಅಗತ್ಯವಿದೆ. ಗ್ರಾಮೀಣ ಭಾಗದ ಠಾಣೆಗಳಿಗೆ ತಲಾ ಒಂದು ಶಬ್ದಮಾಪಕ ಬೇಕಿದೆ. ಶಬ್ದ ಮಾಲಿನ್ಯ ಮಾಪಕ ಇಲ್ಲದಿರುವುದರಿಂದ ನಿಯಮ ಪಾಲನೆ ಸಾಧ್ಯವಾಗುತ್ತಿಲ್ಲ.

ಪ್ರತಿ ಪೊಲೀಸ್ ಠಾಣೆಗೆ 2 ಶಬ್ದ ಮಾಪಕ ಅಗತ್ಯ: ಹೈಕೋರ್ಟ್​ಗೆ ಪೊಲೀಸ್ ಇಲಾಖೆ ಮಾಹಿತಿ
ಕರ್ನಾಟಕ ಹೈಕೋರ್ಟ್
Edited By:

Updated on: Jun 22, 2021 | 5:49 PM

ಬೆಂಗಳೂರು: ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೈಕೋರ್ಟ್​ ಸೂಚನೆ ನೀಡಿದೆ. ರಾಜ್ಯಕ್ಕೆ ಎಷ್ಟು ಶಬ್ದ ಮಾಲಿನ್ಯ ಮಾಪಕಗಳ ಅಗತ್ಯವಿದೆ? ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೈಕೋರ್ಟ್​ ಹೇಳಿದೆ.

ಶಬ್ದಮಾಲಿನ್ಯದ ಪ್ರಮಾಣ ತಿಳಿದುಕೊಳ್ಳಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಮಾಪಕ ಬೇಕು ಎಂದು ಕೋರ್ಟ್ ಪ್ರಶ್ನಿಸಿತು. ಬೆಂಗಳೂರಿನ ಪ್ರತಿ ಪೊಲೀಸ್ ಠಾಣೆಗೆ 2 ಶಬ್ದಮಾಪಕ ಅಗತ್ಯವಿದೆ. ಗ್ರಾಮೀಣ ಭಾಗದ ಠಾಣೆಗಳಿಗೆ ತಲಾ ಒಂದು ಶಬ್ದಮಾಪಕ ಬೇಕಿದೆ. ಶಬ್ದ ಮಾಲಿನ್ಯ ಮಾಪಕ ಇಲ್ಲದಿರುವುದರಿಂದ ನಿಯಮ ಪಾಲನೆ ಸಾಧ್ಯವಾಗುತ್ತಿಲ್ಲ. ಇದನ್ನು ಪೊಲೀಸ್ ಮಹಾನಿರ್ದೇಶಕರು ಗಮನಿಸಬೇಕು. ಕಾಯ್ದೆ ಜಾರಿಯಾದ 20 ವರ್ಷಗಳ ಬಳಿಕ ಮಾಪಕ ಖರೀದಿಸಲಾಗುತ್ತಿದೆ. ವಿಳಂಬ ನೀತಿಯ ಮೂಲಕ ಸರ್ಕಾರ ಇತಿಹಾಸ ಸೃಷ್ಟಿಸಿದೆ ಎಂದು ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿತು.

ವಕ್ಫ್ ಆಸ್ತಿ ಕಬಳಿಕೆ: ಕ್ರಮದ ಮಾಹಿತಿಗೆ ಹೈಕೋರ್ಟ್​ ಸೂಚನೆ
ರಾಜ್ಯದ ವಕ್ಫ್​ ಆಸ್ತಿಗಳ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್​ ಸರ್ಕಾರವನ್ನು ಪ್ರಶ್ನಿಸಿದೆ. ರಾಜ್ಯ ಅಲ್ಪಸಂಖ್ಯಾತರ ಆಯೋಗದ ವರದಿಯನ್ನು ಶಾಸನ ಸಭೆಯ ಉಭಯ ಸದನಗಳಲ್ಲಿ ಮಂಡಿಸಲಾಗಿದೆಯೇ? 2016ರಲ್ಲಿ ಸಲ್ಲಿಸಿದ ಲೋಕಾಯುಕ್ತ ವರದಿಯಂತೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ಕಲಬುರಗಿಯ ಎಸ್.ಕೆ.ಕಾಂತಾ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಂಡ್ಯದಲ್ಲಿ ಎತ್ತಿನಬಂಡಿ ಸ್ಪರ್ಧೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ
ಮಂಡ್ಯದಲ್ಲಿ ನಡೆಯುತ್ತಿರುವ ಎತ್ತಿನಬಂಡಿ ಸ್ಪರ್ಧೆಯು ನ್ಯಾಯಾಲಯದ ತೀರ್ಪಿನ ಆಶಯಗಳಿಗೆ ಅನುಗುಣವಾಗಿಲ್ಲ ಎಂದು ದೂರಿ ಮೈಸೂರಿನ ಪೀಪಲ್ ಫಾರ್ ಅನಿಮಲ್ಸ್‌ ಸಂಸ್ಥೆಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು.

ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿ ಎತ್ತಿನಬಂಡಿ ಸ್ಪರ್ಧೆ ನಡೆಸಲಾಗುತ್ತಿದೆ. ಜಲ್ಲಿಕಟ್ಟು ಸ್ಪರ್ಧೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಈ ವಿಚಾರದಲ್ಲಿಯೂ ಅನ್ವಯವಾಗುತ್ತದೆ. ಮಂಡ್ಯದಲ್ಲಿ ನಡೆಯುತ್ತಿರುವ ಎತ್ತಿನಬಂಡಿಯಿಂದ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಆಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

(Karnataka High Court Questions State Govt Stand on Sound Pollution)

ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್​ಸ್ಪೀಕರ್​ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ

ಇದನ್ನೂ ಓದಿ: ಥಣಿಸಂದ್ರದ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಆರೋಪ: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್