Karnataka High Court Decision on Hijab Highlights: ಕರ್ನಾಟಕ ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷ ಹೆಚ್ಚಾಗುತ್ತಿದೆ. ನಿನ್ನೆ ಕರ್ನಾಟಕ ಹೈಕೋರ್ಟ್ (High Court) ಹಿಜಾಬ್ (Hijab) ವಿವಾದದ ಬಗ್ಗೆ ವಿಚಾರಣೆ ನಡೆಸಿದೆ. ಅದರಂತೆ, ಇಂದು ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ನಿನ್ನೆ ಕರ್ನಾಟಕ ಹೈಕೋರ್ಟ್ (High Court) ಹಿಜಾಬ್ (Hijab) ವಿವಾದದ ಬಗ್ಗೆ ವಿಚಾರಣೆ ನಡೆಸಿದೆ. ಅದರಂತೆ, ಇಂದು ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ.ವಿಚಾರಣೆ ನಡೆಸಿದ ಹೈಕೋರ್ಟ್ ವಿಸ್ತೃತ ಪೀಠ ಶಾಲು, ಹಿಜಾಬ್ ಧರಿಸಿ ಶಾಲೆಗೆ ಹೋಗುವಂತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಕೆಲವೇ ದಿನಗಳಲ್ಲಿ ತೀರ್ಪು ನೀಡಲಾಗುವುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಕಳೆದೆರಡು ದಿನಗಳಿಂದ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ನೀಡಿತ್ತು. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ಮುಕ್ತಾಯಗೊಂಡು ಮಾತನಾಡಿದರು. ಸೋಮವಾರದಿಂದ ಹೈಸ್ಕೂಲ್ ಹಾಗೂ ಕಾಲೇಜು ಆರಂಭವಾಗಲಿದೆ. ಆಮೇಲೆ ಎರಡನೇ ಹಂತದಲ್ಲಿ ಉಳಿದ ತರಗತಿ ಆರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಎಲ್ಲ ಜಿಲ್ಲೆಗಳಲ್ಲೂ ಮತದಾನ ಮುಕ್ತಾಯವಾಗಿದ್ದು, 6 ಗಂಟೆವರೆಗೆ 57.79ರಷ್ಟು ಮತದಾನವಾಗಿದೆ ಎನ್ನಲಾಗಿದೆ. ಶಾಮ್ಲಿಯಲ್ಲಿ ಸಂಜೆ 5ಗಂಟೆ ಹೊತ್ತಿಗೆ ಶೇ.61.78ರಷ್ಟು ಮತದಾನವಾಗಿತ್ತು.
Electronic Voting Machines being sealed after conclusion of first phase of UP Assembly elections; Visuals from Public Inter College polling station in Kairana, Shamli
The district has recorded 61.78% voter turnout till 5 pm pic.twitter.com/eIN9yrGSNJ
— ANI UP/Uttarakhand (@ANINewsUP) February 10, 2022
ಉಡುಪಿ: ಸೋಮವಾರ ತೀರ್ಪು ಹಿಜಬ್ ಪರವಾಗಿ ಬರುತ್ತೆ ಅನ್ನೊ ವಿಶ್ವಾಸ ಇದೆ ಎಂದು ಟಿವಿ9 ಗೆ ಪಿ.ಎಫ್.ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಹೇಳಿಕೆ ನೀಡಿದ್ದಾರೆ. ಅಲ್ಲಿಯವರೆಗೂ ಶಾಲಾ-ಕಾಲೇಜು ಓಪನ್ ಮಾಡಿ ಅನ್ನೊದು ನಮ್ಮ ಬೇಡಿಕೆ ಕೂಡ ಆಗಿದ್ದು, ಹಿಜಾಬ್ ತಗೆದಿಟ್ಟು ಶಾಲಾ-ಕಾಲೇಜುಗಳಿಗೆ ಹೋಗೊದು ವಿದ್ಯಾರ್ಥಿನಿಯರ ವೈಯಕ್ತಿಕ ವಿಚಾರವಾಗಿದೆ ಎಂದಿದ್ದಾರೆ. ಅವರು ಹಿಜಬ್ ತೆಗೆದಿಟ್ಟು ಹೋಗುವುದಾದ್ರೆ ಹೋಗಬಹುದು. ನಾವು ಯಾರಿಗೂ ಬಲವಂತ ಮಾಡಲ್ಲ. ಯಾರು ನಮ್ಮ ಸಹಾಯ ಕೇಳುತ್ತಾರೆ ಅವರಿಗೆ ನಾವು ಸಹಕಾರ ನೀಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಶಾಲೆಗಳನ್ನು ಪ್ರಾರಂಭಿಸುವುದಾ ಬೇಡವಾ ಗೊಂದಲದಲ್ಲಿದ್ದು, ಸದ್ಯ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭಗೊಂಡಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಸಭೆ ನಡೆಯುತ್ತಿದೆ. ಸಿಎಂ ನೇತೃತ್ವದ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭಾಗಿಯಾಗಿದ್ದಾರೆ.
ಮುಂದಿನ ಆದೇಶದವರೆಗೂ ಯಾವುದೇ ಧಾರ್ಮಿಕ ಗುರುತು ಬಳಸದಂತೆ ಕೋರ್ಟ್ ಆದೇಶ ನೀಡಿದೆ. ಅಂದ್ರೆ ಸರ್ಕಾರದ ಆದೇಶವನ್ನು ಮುಂದುವರಿಸಿದೆ. ನಾಳೆಯಿಂದ ಯಥಾಸ್ಥಿತಿ ಮುಂದುವರಿಯಬಹುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಪೊಲೀಸರಿಗೆ ಕೆಲಸ ಕೊಡದಂತೆ ಶಾಂತಿಯುತವಾಗಿ. ವಿದ್ಯಾರ್ಥಿಗಳು ಪರೀಕ್ಷೆಗಳ ಕಡೆ ಗಮನ ಹರಿಸಬೇಕು. ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ತೆರೆಯುತ್ತೇವೆ ಎಂದು ಹೇಳಿದ್ದಾರೆ.
ಕೋರ್ಟ್ ಸೂಚನೆಯಂತೆ ಸರ್ಕಾರ ತೀರ್ಮಾನ ಮಾಡಲಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳು ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತವಾಗಿರಬೇಕೆಂದು ಬೆಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಎಲ್ಲರು ಪಾಲನೆ ಮಾಡಬೇಕು. ಸಮವಸ್ತ್ರ ಬಿಟ್ಟು, ಬೇರೆ ಏನು ಧರಿಸದಂತೆ ಕೋರ್ಟ್ ಸೂಚಿಸಿದೆ ಅದರಂತೆ ಸರ್ಕಾರ ಮುಂದಿನ ತೀರ್ಮಾನ ಮಾಡಲಿದೆ. ವಿದ್ಯಾರ್ಥಿಗಳು ಶಾಂತಿಯುತವಾಗಿರಬೇಕು. ಯಾವುದೇ ರೀತಿಯ ಪ್ರಚೋದನೆಗೆ ಒಳಗಾಗದೆ, ಶಾಂತ ರೀತಿಯಲ್ಲಿ ಇರಬೇಕು. ವಿದ್ಯೆ ಸಿಕ್ಕರೆ ಸರ್ವಸ್ವವನ್ನೂ ಸಿಕ್ಕಿದಂತಾಗುತ್ತದೆ ಎಂದು ಹೇಳಿದ್ದಾರೆ.
ಸಿಎಂ ನೇತೃತ್ವದ ಸಭೆ ಬಳಿಕ ಶಾಲೆ ಆರಂಭ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗುವುದು ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ. ಕೋರ್ಟ್ ಆದೇಶದ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ನಂತರ ಶಾಲೆ ಪ್ರಾರಂಭ ಬಗ್ಗೆ ಕೂಡ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಉಡುಪಿ: ಕೋರ್ಟ್ ಉತ್ತಮ ಆದೇಶ ನೀಡಿದೆ. ನಾವೆಲ್ಲರೂ ಕೋರ್ಟ್ ಆದೇಶವನ್ನು ಪಾಲಿಸೋಣ. ಇದೊಂದು ಜವಾಬ್ದಾರಿಯುತ ನಿರ್ಣಯವಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಮುಂದಿನ ವಾರದಿಂದ ಪ್ರತಿದಿನ ವಿಚಾರಣೆ ನಡೆಯುತ್ತದೆ. ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಇನ್ನೂ ಹೆಚ್ಚು ರಜೆ ನೀಡಿದರೆ ಮಕ್ಕಳ ಭವಿಷ್ಯ ಕ್ಕೆ ತೊಂದರೆ ಆಗುತ್ತದೆ ಎಂಬ ಹಿನ್ನಲೆ ಈ ಆದೇಶ ನೀಡಲಾಗಿದೆ ಎಂದರು. ಮುಂದಿನ ಒಂದು ತಿಂಗಳಿನಲ್ಲಿ ಪರೀಕ್ಷೆ ಪ್ರಾರಂಭ ಆಗಲಿದ್ದು, ಹಿಂದೆ ನಡೆದ ಘಟನೆಗಳನ್ನು ಮರೆತು, ಕಾಲೇಜು ಪ್ರಾರಂಭಿಸಲು ಸಹಕರಿಸೋಣ. ನಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆ ಆಗಿದೆ. ನಾವು ಏನೇ ಇದ್ದರೂ ಒಟ್ಟಗಿದ್ದೆವೆ ಎಂಬ ಸಂದೇಶ ನೀಡೋಣ. ಕೇಸರಿ ಶಾಲು ಮತ್ತು ಹಿಜಾಬ್ನ್ನು ಕ್ಲಾಸ್ನ ಒಳಗೆ ಹಾಕಬೇಡಿ ಎಂದು ರಘುಪತಿ ಭಟ್ ಮನವಿ ಕೂಡ ಮಾಡಿಕೊಂಡಿದ್ದಾರೆ. ಜೊತೆಗೆ ತಕ್ಷಣವೇ ತರಗತಿಗಳನ್ನು ಪ್ರಾರಂಭಿಸಲು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯದೆಲ್ಲೆಡೆ ಹಿಜಾಬ್-ಕೇಸರಿ ಶಾಲು ಸಂಘರ್ಷವಾಗಿ ಈಗ ಮಧ್ಯಂತರ ಆದೇಶ ನೀಡಬಯಸುತ್ತೇವೆ. ವಿಚಾರಣೆ ಮುಗಿವವರೆಗೆ ಧಾರ್ಮಿಕ ಗುರುತುಗಳನ್ನು ಬಳಸಬಾರದು. ನಾವು ಈಗ ಆದೇಶ ಹೊರಡಿಸುತ್ತೇವೆ. ಕೆಲವೇ ದಿನಗಳಲ್ಲಿ ತೀರ್ಪು ನೀಡಲಾಗುವುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ವಿದ್ಯಾರ್ಥಿಗಳು ವರ್ಷಗಳಿಂದ ಹಿಜಾಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದಾರೆ. ಫೆಬ್ರವರಿ 3 ನೇ ತಾರೀಖಿನಿಂದ ಮಾತ್ರ ಹಿಜಾಬ್ ಗೆ ನಿರ್ಬಂಧವಿದ್ದು, ಸರ್ಕಾರದ ಸಮವಸ್ತ್ರ ಆದೇಶ ವಿವೇಚನಾರಹಿತವಾಗಿದೆ. ಸರ್ಕಾರಿ ಆದೇಶದ ಎರಡನೇ ಪೇಜ್ನ್ನು ತಾವು ಓದಬೇಕು. ಸುಪ್ರೀಂಕೋರ್ಟ್ ಹೈಕೋರ್ಟ್ ಗಳ ತೀರ್ಪನ್ನು ಉಲ್ಲೇಖಿಸಲಾಗಿದೆ. ಹಿಜಾಬ್ ಧರಿಸುವುದು ಸಂವಿಧಾನದ 25(1) ರಡಿ ಹಕ್ಕಲ್ಲ ಎಂದಿದ್ದಾರೆ. ಕಾನೂನಿಗೆ ವಿರುದ್ಧವಾದ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಸರ್ಕಾರ ಉಲ್ಲೇಖಿಸಿರುವ ಮೂರೂ ತೀರ್ಪುಗಳು ಅದರ ವಿರುದ್ಧವಿದೆ. ಪೇಜ್ 35 ಅನ್ನು ಪರಾಂಬರಿಸುವಂತೆ ಮನವಿ ಮಾಡಲಾಗಿದ್ದು, ಖಾಸಗಿ ಶಾಲೆಯಲ್ಲಿ ಧಾರ್ಮಿಕ ವಸ್ತ್ರ ಧರಿಸುವ ಪ್ರಕರಣ ಇದಾಗಿದೆ. ಸರ್ಕಾರಿ ಶಾಲೆಯಲ್ಲಿ ಹಿಜಾಬ್ ಧರಿಸುವ ವಿಚಾರವಲ್ಲ. ಖಾಸಗಿ ಶಾಲೆಗೂ ಅದರದ್ದೇ ಆದ ಮೂಲಭೂತ ಹಕ್ಕಿದೆ. ಸಂವಿಧಾನದ 30 ನೇ ವಿಧಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳಿಗೆ ಹಕ್ಕಿದೆ. ವೈಯಕ್ತಿಕ ಹಕ್ಕು ಹಾಗೂ ಶಾಲೆಗಳ ಹಕ್ಕಿನ ನಡುವೆ ಸ್ಪರ್ಧೆಯಿತ್ತು ಎಂದು ದೇವದತ್ ಕಾಮತ್ ವಾದಮಂಡನೆ ಮಾಡುತ್ತಿದ್ದಾರೆ. ಖಾಸಗಿ ಅಲ್ಪಸಂಖ್ಯಾತ ಶಾಲೆಯ ಹಕ್ಕನ್ನು ಎತ್ತಿಹಿಡಿದಿತ್ತು. ಇದಕ್ಕೂ ಮೊದಲ ತೀರ್ಪಿನಲ್ಲಿ ಹಿಜಾಬ್ ಹಕ್ಕನ್ನು ಎತ್ತಿ ಹಿಡಿಯಲಾಗಿದೆ. ಖುರಾನ್, ಹದೀಸ್ನ್ನು ಉಲ್ಲೇಖಿಸಿ ಕೋರ್ಟ್ ತೀರ್ಪು ನೀಡಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವೆಂದು ಹೇಳಿದೆ ಎಂದು ಕೇರಳ ಹೈಕೋರ್ಟ್ನ 2016 ರ ತೀರ್ಪುನ್ನು ದೇವದತ್ ಓದುತ್ತಿದ್ದಾರೆ.
ಕೇರಳ ಹೈಕೋರ್ಟ್ ಹಿಜಾಬ್ ಧರಿಸಿ ಪರೀಕ್ಷೆಗೆ ತೆರಳಲು ಅನುಮತಿ ನೀಡಿತ್ತು. ಹಿಜಾಬ್ ತಪಾಸಣೆ ನಡೆಸಿ ಪ್ರವೇಶ ನೀಡುವಂತೆ ಸೂಚಿಸಲಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು ಎಂದು ನ್ಯಾ. ಮೊಹಮ್ಮದ್ ಮುಷ್ತಾಕ್ ರ ತೀರ್ಪುನ್ನು ಹೆಗ್ಡೆ ಓದುತ್ತಿರುವುದು. ಕೇರಳ ಪ್ರಕರಣದ ಬಗ್ಗೆ ಸಂಜಯ್ ಹೆಗ್ಡೆ ಉಲ್ಲೇಖ ಮಾಡಿದ್ದಾರೆ.
ಸರ್ಕಾರ ಧಾರ್ಮಿಕ ಸ್ವಾತಂತ್ರ್ಯವನ್ನು ಕೆಲವೊಮ್ಮ ಮಾತ್ರ ನಿರ್ಬಂಧಿಸಬಹುದು. ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ, ನೈತಿಕತೆ ದೃಷ್ಟಿಯಿಂದ ನಿರ್ಬಂಧಿಸಬಹುದು. ಅದೂ ಕೂಡಾ ಉಡುಪಿಯದ್ದೇ ಆದ ಶಿರೂರು ಮಠದ ಕೇಸ್ ಕೇರಳದ ಬಿಜಾಯ್ ಎಮ್ಯಾನುಯಲ್ ಪ್ರಕರಣದ ಉಲ್ಲೇಖ ಮಾಡಲಾಗುತ್ತಿದ್ದು, ರಾಷ್ಟ್ರಗೀತೆ ವೇಳೆ ವ್ಯಕ್ತಿ ಸುಮ್ಮನೇ ನಿಂತಿದ್ದ ಬಗ್ಗೆ ದೂರಲಾಗಿತ್ತು. ಲಿಂಕನ್ ನ ಗೊಂದಲ ಸರ್ಕಾರ, ಎಜಿ ಗೂ ಇರಬಹುದು ಎಂದು
ನ್ಯಾ. ಜಾಕ್ಸನ್ ರ ಅಮೆರಿಕಾ ಕೋರ್ಟ್ ನ ತೀರ್ಪು ಓದುತ್ತಿರುವ ಹೆಗ್ಡೆ.
ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಇಚ್ಚಾನುಸಾರ ಬಟ್ಟೆ ತೊಡುವ ಹಕ್ಕಿದೆ. ಸಮವಸ್ತ್ರ ಧರಿಸದಿದ್ದರೆ ದಂಡ ವಿಧಿಸಲು ಅವಕಾಶವಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಅವಕಾಶವಿಲ್ಲ. ಬಟ್ಟೆ ಧರಿಸುವುದು ಸಂವಿಧಾನದ 19(1)ಎ ಅಡಿ ಬರುತ್ತದೆ. ದಿವ್ಯಾ ಯಾದವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ಧರಿಸಿದೆ. ಬಟ್ಟೆ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಾಗಿದೆ ಎಂದು ಸಂಜಯ್ ಹೆಗ್ಡೆ ವಾದ ಮಂಡನೆ.
ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವಕಾಶ ನೀಡಬೇಕು. ಕೃಪಾಣ್ ಧರಿಸಲು ಸಿಖ್ಖರಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಹಿಜಾಬ್ನೊಂದಿಗೆ ವಿದ್ಯಾರ್ಥಿನಿ ಹಾಜರಾಗಲು ಅನುಮತಿ ನೀಡಬೇಕು ಎಂದು ಮಧ್ಯಂತರ ಅರ್ಜಿದಾರ ಕಾಳೀಶ್ವರಮ್ ರಾಜ್ ವಾದ ಮಂಡನೆ.
ಅಂತಿಮ ತೀರ್ಪಿಗೆ ವಾದ ಕೇಳಲು ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ. ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಇದರಿಂದ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಗಲಭೆ ವಾತಾವರಣ ಇದೆ. ಹೀಗಾಗಿ ಸರ್ಕಾರ ಹೈಸ್ಕೂಲ್ ಕಾಲೇಜುಗಳಿಗೆ ನಾಳೆವರೆಗೆ ರಜೆ ನೀಡಿದೆ. ನಾವು ಕಾಲೇಜುಗಳನ್ನು ಆರಂಭಿಸಲು ಸಿದ್ದರಾಗಿದ್ದೇವೆ, ಆದರೆ ಒಬ್ಬರು ಹಿಜಾಬ್ ಮತ್ತೊಬ್ಬರಿಂದ ಕೇಸರಿ ಶಾಲಿಗೆ ಒತ್ತಾಯ ಕೇಳಿಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಕಾಲೇಜು ಆರಂಭಿಸುವುದು ಕಷ್ಟ. ಶಾಲಾ ಅಭಿವೃದ್ದಿ ಸಮಿತಿಯ ವಸ್ತ್ರಸಂಹಿತೆಗೆ ಬದ್ದವಾಗಿರಬೇಕು. ವಿವಾದಕ್ಕೆ ಸಂಬಂಧಿಸದ ದೊಡ್ಡ ಸಂಖ್ಯೆ ವಿದ್ಯಾರ್ಥಿಗಳಿದ್ದಾರೆ, ಅವರೆಲ್ಲಾ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.
ಸಮವಸ್ತ್ರ ಹಾಗೂ ಹಿಜಾಬ್ ಧರಿಸಿ ತೆರಳಲು ಅನುಮತಿ ನೀಡಬೇಕು. ಹಿಜಾಬ್ ಧರಿಸುವುದು ಅವರವರ ಸಂಪ್ರದಾಯವಾಗಿದೆ. ಹಿಜಾಬ್ನಿಂದ ಬೇರೆಯವರಿಗೆ ಯಾವುದೇ ಸಮಸ್ಯೆ ಇಲ್ಲ. ಅದೇ ಬಣ್ಣದ ಹಿಜಾಬ್ ಧರಿಸಿ ತೆರಳಲು ಅನುಮತಿ ನೀಡಿ. ರಾಜ್ಯ ಸರ್ಕಾರ ಬೆಂಕಿಯೊಂದಿಗೆ ಆಟವಾಡುತ್ತಿದ್ದು, ಸರ್ಕಾರದ ಆದೇಶದಲ್ಲಿ ಹಿಜಾಬ್ ಹಕ್ಕಲ್ಲ ಎಂದಿದೆ ಎಂದು ದೇವದತ್ ಕಾಮತ್ ವಾದ ಮಂಡಿಸಿದ್ದಾರೆ.
ಶಾಲೆಗಳಲ್ಲಿ ಮೊದಲು ಸಮವಸ್ತ್ರ ಎಂಬುದು ಇರಲಿಲ್ಲ. ತಮಿಳುನಾಡಿನಲ್ಲಿ ಮೊದಲಿಗೆ ಅದು ಶುರುವಾಯಿತು. 1995 ರಲ್ಲಿ ಕರ್ನಾಟಕ ಸರ್ಕಾರ ನಿಯಮಗಳನ್ನು ರೂಪಿಸಿತು. ಶಾಲಾ ಪಠ್ಯಕ್ರಮ ಸಂಬಂಧ ಈ ನಿಯಮಗಳಿವೆ. ಆದರೆ ಸಮವಸ್ತ್ರ 5 ವರ್ಷಕ್ಕೊಮ್ಮ ಬದಲಿಸಬೇಕು. ಇಚ್ಚೆ ಬಂದ ಕಡೆ ಸಮವಸ್ತ್ರ ಹೊಲಿಸಲು ಅವಕಾಶ ನೀಡಿಲಾಗಿದೆ. ಕಾಯ್ದೆಯಲ್ಲಿ ಶಾಲೆಗಳಿಗೆ ಸಮವಸ್ತ್ರ ಸಂಬಂಧ ಕೆಲ ಸೂಚನೆಗಳಿವೆ. ಆದರೆ ಪಿಯು ಕಾಲೇಜುಗಳಿಗೆ ಸಮವಸ್ತ್ರ ಸಂಬಂಧ ಯಾವುದೇ ನಿಯಮಗಳಿಲ್ಲ. ಸರ್ಕಾರ, ಶಾಲೆ ಒಂದು ಗೊತ್ತುವಳಿ ಮೇಲೆ ಅವಲಂಬಿತವಾಗಿದ್ದು, ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಗೊತ್ತುವಳಿ ಅಂಗೀಕರಿಸಲಾಗಿದೆ. ಹೃದಯ ವೈಶಾಲ್ಯತೆ ಇಲ್ಲದೇ ಈ ದೇಶದ ಬೆಳವಣಿಗೆ ಸಾಧ್ಯವಿಲ್ಲ ಎಂದು ಸಂಜಯ್ ಹೆಗ್ಡೆ ತಮ್ಮ ವಾದಮಂಡನೆ ಮುಂದುವರಿಸಿದ್ದಾರೆ.
ನಮಗೆ ಅರ್ಥವಾಯಿತು ಈಗ ಕಾನೂನಿನ ವಾದ ಹೇಳಿ ಎಂದು ಅರ್ಜಿದಾರರಿಗೆ ಸಿಜೆ ರಿತುರಾಜ್ ಅವಸ್ತಿ ಸೂಚನೆ ನೀಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರ ಸಂಬಂಧ ನಿಯಮವಿಲ್ಲ. ಸಂಜಯ್ ಹೆಗ್ಡೆ ವಾದಕ್ಕೆ ಸಿಜೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ ಸಮವಸ್ತ್ರ ಧರಿಸುವ ಅಗತ್ಯವಿಲ್ಲವೇ. ನಮ್ಮ ಮೌಖಿಕ ಹೇಳಿಕೆಗಳನ್ನು ಬರೆಯಬೇಡಿ ಎಂದು ಮಾಧ್ಯಮಗಳಿಗೆ ಸಿಜೆ ಸೂಚನೆ.
ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದರು. ಅದಕ್ಕೆ ಶಾಲೆಯ ಟೀಚರ್ ಗಳು ಆಕ್ಷೇಪ ಎತ್ತಿದ್ದಾರೆ. ಜೊತೆಗೆ ಹಿಜಾಬ್ ಧರಿಸಿ ಬಂದಾಗ ಗದರುತ್ತಿದ್ದರು. ಅಟೆಂಡೆನ್ಸ್ ಕೊಡದೇ ಆಬ್ಸೆಂಟ್ ಹಾಕುತ್ತಿದ್ದರು. ಹಿಜಾಬ್ ಅನ್ನು ತೆಗೆಯುವಂತೆ ಕೆಲವರು ಸೂಚಿಸಿದ್ದರು. ಹಿಜಾಬ್ ಧರಿಸಿ ತರಗತಿಗೆ ಬರಲು ಟೀಚರ್ ಅವಕಾಶ ನೀಡಿಲ್ಲ. ಡಿಸೆಂಬರ್ 2021 ರಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿದ್ಯಾರ್ಥಿನಿಯರು ಶಾಲೆ ಅಭಿವೃದ್ದಿ ಸಮಿತಿಗೆ ದೂರು ನೀಡಿದ್ದಾರೆ ಎಂದು ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ.
ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿ ವಿಚಾರವಾಗಿ ಮೊದಲು ವಾದ ಮಾಡಲು ಸಂಜಯ್ ಹೆಗ್ಡೆ ಅವಕಾಶ ಕೋರಿದ್ದಾರೆ. ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕು. ಸಂವಿಧಾನದ ಪ್ರಶ್ನೆಗಳನ್ನು ಹೈಕೋರ್ಟ್ ನಿರ್ಧರಿಸಬೇಕಿದೆ ಎಂದು ವಾದ ಮಂಡನೆ. ಪ್ರಕರಣದ ಹಿನ್ನೆಲೆ ತಿಳಿಸಿ ವಾದಮಂಡನೆ ಆರಂಭಿಸುವಂತೆ ಸಿಜೆ ಆಗ್ರಹ.
ಶಾಲೆ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿ ವಿಚಾರವಾಗಿ ಇಡೀ ರಾಜ್ಯದ ಚಿತ್ತ ತ್ರಿಸದಸ್ಯ ಪೀಠದ ವಿಚಾರಣೆಯತ್ತ ಇದೆ. ಹೈಕೋರ್ಟ್ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್.ದೀಕ್ಷಿತ್
ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಪೂರ್ಣ ಪೀಠ ಒಳಗೊಂಡಿದೆ. ಹೈಕೋರ್ಟ್ ಹಾಲ್ ನಂಬರ್ 1 ರಲ್ಲಿ ಕಿಕ್ಕಿರಿದು ವಕೀಲರು ತುಂಬಿದ್ದಾರೆ. ಹೈಕೋರ್ಟ್ ಗೆ ಎಜಿ ಪ್ರಭುಲಿಂಗ್ ನಾವದಗಿ ಹಾಜರಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿದಾರರ ಪರ ವಕೀಲರು ಹಾಜರಾಗಿದ್ದಾರೆ.
ದೇವದತ್ ಕಾಮತ್, ಸಂಜಯ್ ಹೆಗ್ಡೆ ಹಾಜರ್ ಮತ್ತು ಶಾಲಾ ಅಭಿವೃದ್ಧಿ ಸಮಿತಿ ಪರವಾಗಿ ಸಜನ್ ಪೂವಯ್ಯ ಹಾಜರಾಗಿದ್ದು, ವಿಚಾರಣೆ ಆರಂಭಗೊಂಡಿದೆ.
ಹುಬ್ಬಳ್ಳಿ: ಖುರ್ಚಿಗಾಗಿ ಕಿಮ್ಸ್ ನಲ್ಲಿ ಕೆಎಎಸ್ ಅಧಿಕಾರಿಗಳ ಕಿತ್ತಾಟ ಶುರುವಾಗಿದೆ. ಸಿಎಓ ಖುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿದೆ ಎನ್ನಲಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ನ ಆಡಳಿತಾಧಿಕಾರಿ ಹುದ್ದೆಗಾಗಿ ಈ ಬಿಗ್ ಫೈಟ್ ಶುರುವಾಗಿದೆ. 2019ರಿಂದ ರಾಜಶ್ರೀ ಜೈನಾಪುರ ಎನ್ನುವವರು ಕಿಮ್ಸ್ ಅಡಳಿತಾಧಿಕಾರಿಯಾಗಿದ್ದರು. ಆದರೆ ಫೆಬ್ರವರಿ 5 ರಂದು ಜೈನಾಪುರ ವರ್ಗಾವಣೆಯಾಗಿತ್ತು. ಜೈನಾಪುರ ರಿಂದ ತೆರವಾಗಿದ್ದ ಜಾಗಕ್ಕೆ ವರ್ಗಾವಣೆಯಾಗಿ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಬಂದಿದ್ದರು. ಕೃಷ್ಣಾ ಮೇಲ್ದಂಡೆ ಪುನರ್ವಸತಿ ಅಧಿಕಾರಿಯಾಗಿ ಬಾಗಲಕೋಟೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 3 ದಿನಗಳಿಂದ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಕಿಮ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತ ಅಧಿಕಾರ ಹಸ್ತಾಂತರ ಮಾಡದೆ ರಾಜಶ್ರೀ ಜೈನಾಪುರ ರಜೆ ಹೋಗಿದ್ದಾರೆ. ಕಿಮ್ಸ್ ಆಡಳಿತ ಭವನದಲ್ಲಿ ಇನ್ನು ಜೈನಾಪುರ ಹೆಸರನ್ನೇ ಆಡಳಿತ ಮಂಡಳಿ ನಾಮಫಲಕವಾಗಿ ಹಾಕಿದ್ದಾರೆ.
ಜಿಲ್ಲೆಯ ಪ್ರಭಾವಿ ರಾಜಾಕಾರಣಿ ಚಾರ್ಜ್ ಕೊಡಬಾರದೆಂದು ಹೇಳಿದ್ದಾರೆಂದು ಜೈನಾಪುರ ಹೇಳುತ್ತಿದ್ದಾರೆ. ಸರ್ಕಾರ ವರ್ಗಾವಣೆ ಮಾಡಿದ್ರು ಕೂಡ ಜೈನಾಪುರ ಕ್ಯಾರೆ ಎನ್ನುತ್ತಿಲ್ಲ. ಇನ್ನೂ ದಿನಾಲು ಅಧಿಕಾರಿ ಕಿಮ್ಸ್ಗೆ ಬರುತ್ತಿದ್ದಾರೆ.
ಹಿಜಾಬ್ ಗಲಾಟೆ ಮಾಡುವ ವಿಷಯ ಅಲ್ಲವೆಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬಹಳ ವರ್ಷಗಳಿಂದ ಮುಸ್ಲಿಂ ಯುವತಿಯರು ಹಿಜಾಬ್ ಧರಿಸುತ್ತಿದ್ದಾರೆ. ಈಗ ಇದ್ದಕ್ಕಿದ್ದಂತೆ ಇದನ್ನು ವಿವಾದ ಮಾಡಲಾಗಿದೆ. ಹಿಂದೂ ಧರ್ಮ ಗಟ್ಟಿಗೊಳಿಸಿ ಮತ ಕ್ರೋಡೀಕರಣಕ್ಕೆ ವಿವಾದ ಮಾಡಲಾಗಿದೆ. ಕೇಸರಿ ಶಾಲನ್ನು ವಿದ್ಯಾರ್ಥಿಗಳು ಖರೀದಿಸಿ ಹಾಕಿಕೊಂಡಿಲ್ಲ, ಸಂಘ ಪರಿವಾರದವರೇ ಅದನ್ನು ಖರೀದಿಸಿ ನೀಡಿದ್ದಾರೆ. ಮಕ್ಕಳಿಗೆ ಒತ್ತಾಯದಿಂದ ಕೇಸರಿ ಶಾಲು ಹಾಕಿ ಕಳಿಸಿದ್ದಾರೆ. ಸಮವಸ್ತ್ರದ ಹೆಸರಲ್ಲಿ ದ್ವೇಷದ ಭಾವನೆ ಹುಟ್ಟಿಸುವ ಉದ್ದೇಶ ಇದು ಎಂದು ಹೇಳಿದ್ದಾರೆ.
ದೇಶದಲ್ಲಿ 100 ನೂತನ ಸೈನಿಕ ಶಾಲೆಗಳ ಸ್ಥಾಪನೆ ಮತ್ತು ಅಭಿವೃದ್ಧಿ ಪಡಿಸುವ ವಿಚಾರವಾಗಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರೊಂದಿಗೆ ರಾಜನಾಥ್ ಸಿಂಗ್ ಸಭೆ ಭಾಗಿಯಾಗಿದ್ದರು. ವಿಕಾಸಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭಾಗಿವಹಿಸಿದ್ದರು.
ತುಮಕೂರು: ಕಲ್ಲುಗಣಿಗಾರಿಕೆ ವಿರೋಧಿಸಿ ತುರುವೇಕೆರೆ ತಾಲೂಕಿನ ಕಚೇರಿ ಬಳಿ ಕೋಳಘಟ್ಟ ಗ್ರಾಮಸ್ಥರಿಂದ ಪ್ರತಿಭಟನೆ ಮುಂದುವರೆದಿದೆ. ಕ್ರಷರ್ ನಿಲ್ಲಿಸುವಂತೆ ಸತತ ನಾಲ್ಕನೇ ದಿನವೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ 206 ಅಭಿವೃದ್ಧಿಗಾಗಿ ಕಲ್ಲುಗಣಿಗಾರಿಕೆಗೆ ಅನುಮತಿ ನೀಡಿರುವ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿ.ಎಂ ಬಸವರಾಜ್ ಬೊಮ್ಮಾಯಿ ಬರುವವರೆಗೂ ಹೋರಾಟ ನಿಲ್ಲೋಲ್ಲ ಎಂದು ರೈತರು ಹೇಳುತ್ತಿದ್ದಾರೆ.
ಉಡುಪಿ: ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷದ ಮಧ್ಯೆ ಇಂದು ಉಡುಪಿಯಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ಪ್ರಕರಣದ ಬಗ್ಗೆ ಕಾಪುವಿನಲ್ಲಿ ಸಭೆ ನಡೆದಿದ್ದು, ಶಿಸ್ತಿನ ಹೆಸರಿನಲ್ಲಿ ಸಂವಿಧಾನತ್ಮಕ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸದಂತೆ ಮುಸ್ಲಿಮ್ ಒಕ್ಕೂಟದಿಂದ ಠರಾವು ಮಂಡನೆ ಮಾಡಲಾಗಿದೆ. ವಿವಿಧ ಸಾಮುದಾಯಿಕ ವಿಷಯಗಳೊಂದಿಗೆ ವಿದ್ಯಾರ್ಥಿನಿಯರ ಶಿರವಸ್ತ್ರದ ವಿವಾದದ ಕುರಿತೂ ಚರ್ಚೆ ಮಾಡಲಾಗಿದೆ. ಪ್ರೌಢಾವಸ್ಥೆಗೆ ತಲುಪಿದ ಹೆಣ್ಣು ಮಕ್ಕಳಿಗೆ ಇಸ್ಲಾಮ್ ಧರ್ಮದಲ್ಲಿ ಶಿರವಾಧಾರಣೆ ಧಾರ್ಮಿಕ ಕರ್ತವ್ಯವಾಗಿದೆ. ಇದಕ್ಕೆ ದೇಶದ ಸಂವಿಧಾನವೂ ಮುಕ್ತ ಅವಕಾಶ ನೀಡಿದ್ದು ಇದಕ್ಕೆ ಯಾವುದೇ ಸಂಸ್ಥೆ ಅಡ್ಡಿಯುಂಟು ಮಾಡಬಾರದು ಎಂದು ಸಭೆಯಲ್ಲಿ ಹೇಳಲಾಗಿದೆ.
ಮಂಡ್ಯ: ಅವಹೇಳನಕಾರಿ ಹೇಳಿಕೆ ನೀಡಿ, ಜೈನ ಸಮುದಾಯದ ಕೆಂಗಣ್ಣಿಗೆ ನ್ಯೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆಯೂಬ್ ಖಾನ್ ಗುರಿಯಾಗಿದ್ದಾರೆ. ಮೈಸೂರಿನ ಸ್ಥಳಿಯ ಚಾನೆಲ್‌ನಲ್ಲಿ ಹಿಜಾಬ್ ಪರ ಹೇಳಿಕೆ ನೀಡುವಾಗ ಗೊಮ್ಮಟೇಶ್ವರನ ವಿರುದ್ಧ ಹೇಳಿಕೆ ನೀಡಲಾಗಿದೆ. ಬೆಟ್ಟದ ಮೇಲೆ ಗೊಮ್ಮಟೇಶ್ವರನನ್ನು ನಿಲ್ಲಿಸಿದ್ದೀರಿ, ನೀವು ಮೊದಲು ಗೊಮ್ಮಟೇಶ್ವರಿಗೆ ಚಡ್ಡಿಹಾಕಿ. ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರತಕ್ಕಂತ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಹೇಳಿಕೆ ನೀಡಿದ್ದಾರೆನ್ನುವ ಆರೋಪಿಸಲಾಗಿದೆ. ಈ ಹೇಳಿಕೆ ಅನಂತನಾಥಸ್ವಾಮಿ ದಿಗಂಬರ ಜೈನ ಧರ್ಮದ ಅನುಯಾಯಿಗಳಿಗೆ ನೋವಾಗಿದ್ದು, ನಾವು ಆರಾಧಿಸುವ ಬಾಹುಬಲಿಸ್ವಾಮಿಗೆ ಅವಹೇಳನಕಾರಿಯಾಗಿ ನಿಂದಿಸಿರುವುದು ಸರಿಯಲ್ಲ ಎಂದು ಜೈನ ಸಮಾಜದ ಮುಖಂಡರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಮೈಸೂರು ನಿವಾಸಿ ಆಯೂಬ್ ಖಾನ್ ಮೇಲೆ ಧಾರ್ಮಿಕ ನಿಂದನೆ, ಜಾತಿನಿಂದನೆ ಅಪರಾಧದಡಿ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದ್ದು, ಮೈಸೂರಿನ ಸ್ಥಳಿಯ ಚಾನಲ್ ನಲ್ಲಿ ಪ್ರಸಾರವಾದ ಬೈಟ್ ಆಧಾರದ ಮೇಲೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಮುಂದುವರೆದಿದೆ. ಹಿಜಾಬ್ ಹಾಕಿಕೊಂಡೆ ನಾವು ಕಾಲೇಜಿಗೆ ಬರುವುದು ಎಂದು ಪಟ್ಟು ಹಿಡಿದಿರುವ ಮುಸ್ಲಿಂ ವಿದ್ಯಾರ್ಥಿನಿಯರು ಒಂದು ಕಡೆಯಾದರೆ, ನಾವು ಕೂಡ ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಶಾಂತಿ ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದ್ದು, ಸ್ವಯಂ ನಿಯಂತ್ರಣ ಅಗತ್ಯವಾಗಿದೆ. ಹೊರಗಿನವರಿಂದ ಪ್ರಚೋದಿಸುವಂತಹ ಕೆಲಸವಾಗಬಾರದು. ಕಾನೂನು ಸುವ್ಯವಸ್ಥೆಯನ್ನ ಎಲ್ಲರೂ ಪಾಲನೆ ಮಾಡಬೇಕು ಎಂದಿದ್ದಾರೆ. ಇಂಥ ಘಟನೆ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ನಂತರ ಲೋಕಲ್ಗೆ ಬರುತ್ತವೆ ಎಂದು ಹೇಳಿದ್ದಾರೆ.
ಕರ್ನಾಟಕದ ಹಿಜಾಬ್ ವಿವಾದಕ್ಕೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿದ್ದು, ಭಾರತದ ಪಾಕ್ ರಾಯಭಾರಿಗೆ ಪಾಕಿಸ್ತಾನದಿಂದ ಸಮನ್ಸ್ ನೀಡಲಾಗಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಬರುವಂತೆ ಸಮನ್ಸ್ ನೀಡಲಾಗಿದ್ದು, ಮುಸ್ಲಿಮರ ವಿರುದ್ಧ ತಾರತಮ್ಯದ ನೀತಿ ಅನುಸರಿಸಲಾಗುತ್ತಿದೆ ಎಂದು ಪಾಕಿಸ್ತಾನದ ಸರ್ಕಾರ ಹೇಳಿದೆ. ಪಾಕ್ನ ಈ ಕ್ರಮಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ಘನತೆಗೆ ಧಕ್ಕೆ ತರಲು ಪಾಕ್ನಿಂದ ಷಡ್ಯಂತ್ರ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಹಿಜಾಬ್ V/S ಕೇಸರಿ ಗಲಾಟೆ ದಿನದಿಂದ ದಿನಕ್ಕೆ ತಾರಕ್ಕೇರಿತ್ತಿರುವ ಹೊತ್ತಲ್ಲಿ ಭಕ್ತನೊಬ್ಬ ದೇವರ ಮೊರೆ ಹೋಗಿದ್ದಾನೆ. ಹೌದು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನ ಹಳ್ಳಿ ದುರ್ಗಾಂಬಿಕೆಯ ರಥೋತ್ಸವ ನಡೆಯುತ್ತಿದ್ದು, ಯುವಕನೊಬ್ಬ ಬಾಳೆ ಹಣ್ಣು ಸಮರ್ಪಣೆ ಮಾಡಿದ್ದಾನೆ. ಜಾತ್ರೆಯಲ್ಲಿ ಸಾಮರಸ್ಯ ಸಂದೇಶ ಸಾರುವ ಬಾಳೆಹಣ್ಣನ್ನು ಯುವಕ ರಥಕ್ಕೆ ಎಸೆದಿದ್ದು, ಜಾತಿಯತೆ ಅಳಿಯಲಿ, ಸಮಾನತೆ ಬೆಳಗಲಿ ಅಂತ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯಲಾಗಿದೆ.
ಕರ್ನಾಟಕದೆಲ್ಲೇಡೆ ಹಿಜಾಬ್ ವಿವಾದ ತಾರಕ್ಕೆರಿದೆ. ಈ ಕುರಿತಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕದ ಹಿಜಾಬ್ ವಿವಾದದ ಬಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ ರಿಂದ ಅರ್ಜಿ ಸಲ್ಲಿಸಲಾಗಿದೆ. ಕರ್ನಾಟಕ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ಆದೇಶ ನೀಡುವ ಮುನ್ನವೇ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಮೊದಲು ಹೈಕೋರ್ಟ್ ತೀರ್ಪು ನೀಡಲಿ. ಅಲ್ಲಿಯವರೆಗೂ ಕಾಯುವಂತೆ ಕಪಿಲ್ ಸಿಬಲ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹಿಜಾಬ್ ಪ್ರಕರಣವನ್ನು ವಿಚಾರಣಾ ಪಟ್ಟಿಗೆ ಸೇರಿಸಿ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ.
ಬೆಂಗಳೂರು: ಇಂದು ಕೆಂಪೇಗೌಡರ ಲೋಗೋ, ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ. ಕೆಂಪೇಗೌಡರ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಲೋಗೋ ಮತ್ತು ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದಾರೆ. ಇದೇವೇಳೆ ಸಚಿವರಾದ ಆರ್.ಅಶೋಕ್, ಆರಗ ಜ್ಞಾನೇಂದ್ರ, ಡಾ.ಸಿಎನ್ ಅಶ್ವಥ್ ನಾರಯಣ್, ಶಾಸಕರಾದ ರಾಜೂ ಗೌಡ, ಉದಯ ಗರುಡಾಚಾರ್ ಉಪಸ್ಥಿತರಿದ್ದರು.
Published On - 10:30 am, Thu, 10 February 22