AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ

-3 ದಿನದಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಬಹುದು. ಆದರೆ ಭಾರತದಲ್ಲಿ ಪ್ಲಾಂಟ್ ಅಳವಡಿಸುವುದಕ್ಕೆ ಆಗ್ತಿಲ್ಲ. ಏಕೆಂದರೆ ಪ್ಲಾಂಟ್ ನಿರ್ಮಾಣಕ್ಕೆ ಕೌಶಲ್ಯ ಹೊಂದಿದವರು ಇಲ್ಲ. ಹೀಗಾಗಿ ಭಾರತದಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಕೆಗೆ ತಡವಾಗುತ್ತಿದೆ....

ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ:  ಸಚಿವ ಜಗದೀಶ್ ಶೆಟ್ಟರ್ ಕಳವಳ
ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ
ಆಯೇಷಾ ಬಾನು
|

Updated on: May 20, 2021 | 2:30 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮಹಾಮಾರಿ ಕೊರೊನಾದ ಅಟ್ಟಹಾಸ ಮಿತಿ ಮೀರುತ್ತಿದೆ. ಈ ನಡುವೆ ಅದೆಷ್ಟೋ ಸೋಂಕಿತರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿದೆ. ಸದ್ಯ ಆಕ್ಸಿಜನ್ ಅಭಾವ ಕಡಿಮೆ ಮಾಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಬುಧವಾರ ವಿಧಾನಸೌಧದಲ್ಲಿ ಆಕ್ಸಿಜನ್ ಕುರಿತು ಹಿರಿಯ ಅಧಿಕಾರಿಗಳೋಂದಿಗೆ ಸಭೆ ನಡೆಸಿದ ಬಳಿಕ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ನೈಟ್ರೋಜನ್ ಪಿಎಸ್ಎ ಉತ್ಪಾದನಾ ಘಟಕಗಳನ್ನು ಆಮ್ಲಜನಕ ಉತ್ಪಾದನೆಗೆ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು. ಹೀಗೆ ಅನೇಕ ಕಡೆ ಆಕ್ಸಿಜನ್ ಪ್ಲಾಂಟ್ ಅಳವಡಿಕೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಪ್ಲಾಂಟ್ ನಿರ್ಮಾಣಕ್ಕೆ ಕೌಶಲ್ಯ ಹೊಂದಿದವರು ಇಲ್ಲ ಎಂಬ ಮಾಹಿತಿ ಸಿಕ್ಕಿದೆ.

2-3 ದಿನದಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಬಹುದು. ಆದರೆ ಭಾರತದಲ್ಲಿ ಪ್ಲಾಂಟ್ ಅಳವಡಿಸುವುದಕ್ಕೆ ಆಗ್ತಿಲ್ಲ. ಏಕೆಂದರೆ ಪ್ಲಾಂಟ್ ನಿರ್ಮಾಣಕ್ಕೆ ಕೌಶಲ್ಯ ಹೊಂದಿದವರು ಇಲ್ಲ. ಹೀಗಾಗಿ ಭಾರತದಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಕೆಗೆ ತಡವಾಗುತ್ತಿದೆ. ಉತ್ತರ ಪ್ರದೇಶದ ನೋಯ್ಡಾದ ಆಸ್ಪತ್ರೆಯಲ್ಲಿ 48 ಗಂಟೆಯಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಕೆ ಮಾಡಲಾಗಿದೆ. ಇಟಲಿ ತಜ್ಞರಿಂದಲೇ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಭಾರತದಲ್ಲಿ ಕೌಶಲ್ಯ ಹೊಂದಿದವರು ಇಲ್ಲದಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸುವುದು ತಡವಾಗುತ್ತಿದೆ.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

(Karnataka lacks expertise in setting up oxygen plant says minister jagadish shettar)