ಎಸ್​ಆರ್ ಬೊಮ್ಮಾಯಿ ಅಧಿಕಾರ ಕಳೆದವರು ಯಾರು: ವಿಧಾನಸಭೆಯಲ್ಲಿ ಏಟು-ಏದಿರೇಟು, ಸ್ವಾರಸ್ಯಕರ ಚರ್ಚೆ

ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸ್ಥಾನಚ್ಯುತಿಗೆ ಯಾರು ಕಾರಣ ಎಂಬ ಹಳೆಯ ಪ್ರಶ್ನೆಯ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ (ಡಿ.23) ಸ್ವಾರಸ್ಯಕರ ಚರ್ಚೆ ನಡೆಯಿತು

ಎಸ್​ಆರ್ ಬೊಮ್ಮಾಯಿ ಅಧಿಕಾರ ಕಳೆದವರು ಯಾರು: ವಿಧಾನಸಭೆಯಲ್ಲಿ ಏಟು-ಏದಿರೇಟು, ಸ್ವಾರಸ್ಯಕರ ಚರ್ಚೆ
ಕೆ.ಆರ್.ರಮೇಶ್​ಕುಮಾರ್ ಮತ್ತು ಎಚ್​.ಡಿ.ರೇವಣ್ಣ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 23, 2021 | 10:01 PM

ಬೆಳಗಾವಿ: ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರ ಸ್ಥಾನಚ್ಯುತಿಗೆ ಯಾರು ಕಾರಣ ಎಂಬ ಹಳೆಯ ಪ್ರಶ್ನೆಯ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ (ಡಿ.23) ಸ್ವಾರಸ್ಯಕರ ಚರ್ಚೆ ನಡೆಯಿತು. ಚರ್ಚೆಯಲ್ಲಿ ಮಾತನಾಡುವಾಗ ಜೆಡಿಎಸ್​ ಶಾಸಕ ಎಚ್​.ಡಿ.ರೇವಣ್ಣ ಅವರು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್​ ಕುಮಾರ್ ಅವರನ್ನು ಕಿಚಾಯಿಸಿದರು. ‘ಕುಮಾರಸ್ವಾಮಿ, ದೇವೇಗೌಡರನ್ನು ಹೇಗೆ ಇಳಿಸಿದಿರಿ ಎನ್ನುವುದು ಗೊತ್ತಿದೆ’ ಎಂಬ ರೇವಣ್ಣ ಮಾತಿದೆ, ‘ಎಸ್.ಆರ್.ಬೊಮ್ಮಾಯಿನಾ ಹೇಗೆ ಇಳಿಸಿದ್ರು ಅಂತ ಹೇಳಬೇಕಿಲ್ಲ’ ಎಂದು ಎದಿರೇಟು ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಎಸ್.ಆರ್.ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲು ದೇವೇಗೌಡರು ಕಾರಣ ಅಲ್ಲ’ ಎಂದು ಸಮರ್ಥನೆ ನೀಡಿದರು.

ಈ ಮಾತು ಇಷ್ಟಕ್ಕೆ ನಿಲ್ಲಲಿಲ್ಲ. ‘ನಾನೆಲ್ಲಿ ಹಾಗೆ ಹೇಳಿದೆ’ ಎಂದು ರಮೇಶ್​ ಕುಮಾರ್ ಪ್ರಶ್ನಿಸಿದರೆ, ‘ನೀವೇ ಹಾಗೆ ಹೇಳುತ್ತಿದ್ದೀರಿ’ ಎಂದು ರೇವಣ್ಣ ಉತ್ತರಿಸಿದರು. ಎಂದ ಹೆಚ್.ಡಿ.ರೇವಣ್ಣ. ‘ಇಂದು ಹೇಳಲ್ಲ, ಮುಂದೆಯೂ ಹೇಳಲ್ಲ, ಇತಿಹಾಸ ಎಲ್ಲರಿಗೂ ಗೊತ್ತಿದೆ. ನಾನು ಯಾರ ಅನುಕಂಪದಲ್ಲಿಯೂ ಬದುಕಿಲ್ಲ. ನಿಮ್ಮಂಥವರ ನಡುವೆ ಯಾವ ಜಾತಿಯೂ ಇಲ್ಲದೆ ಜೀವಂತವಾಗಿದ್ದೇನೆ. ನಾನು ಮುಂದೆಯೂ ಹೀಗೆ ಇರುತ್ತೇನೆ ಎಂದು ರಮೇಶ್​ ಕುಮಾರ್ ತುಸು ಏರುದನಿಯಲ್ಲಿ ಪ್ರತಿಕ್ರಿಯಿಸಿದರು. ‘ನಮ್ಮ ಅನುಕಂಪದಲ್ಲಿ ನೀವಿದ್ರಿ ಎಂದು ನಾನು ಹೇಳಿಲ್ಲ’ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಎಚ್​.ಡಿ.ರೇವಣ್ಣ ನೀಡಿದ ಹೇಳಿಕೆಯೊಂದಕ್ಕೆ ಸಿದ್ದರಾಮಯ್ಯ ಸಹ ಖಾರವಾಗಿ ಪ್ರತಿಕ್ರಿಯಿಸಿದರು. ‘ಬಿಜೆಪಿ ಜತೆ ಮ್ಯಾಚ್ ಫಿಕ್ಸಿಂಗ್ ನೀವು ಮಾಡಿಕೊಂಡಿದ್ದು, ನಾನು‌ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಮ್ಯಾಚ್ ಫಿಕ್ಸಿಂಗ್ ಅನ್ನೋದೇ ಗೊತ್ತಿಲ್ಲ. ಮುಖ್ಯಮಂತ್ರಿ ಅಥವಾ ಸ್ಥಾನದಲ್ಲಿದ್ದವರ ಯಾರ ಮನೆಗೂ ಕೆಲಸ ಮಾಡಿಕೊಡಿ ಎಂದು ನಾನು ಮನೆಗೂ ಹೋಗಿಲ್ಲ. ಏನೋ ಫೋನ್​​ನಲ್ಲಿ ಮಾತಾಡಿ ಹೇಳಿರಬಹುದು ಅಷ್ಟೇ. ನನ್ನ ರಾಜಕೀಯ ಜೀವನದಲ್ಲಿ ಅದೇ ರೀತಿ ನಡೆದುಕೊಂಡಿದ್ದೇನೆ. ಬಿಜೆಪಿಯವರ ಜೊತೆ ಮ್ಯಾಚ್ ಫಿಕ್ಸಿಂಗ್​ ಮಾಡಿಕೊಂಡಿದ್ದು ನೀವು ಎಂದು ಸಿದ್ದರಾಮಯ್ಯ ಆಕ್ಷೇಪಿಸಿದರು.

ಮಾತಿನ ಭರದಲ್ಲಿ ‘ಬಸವರಾಜ ಸಹ ನನ್ನ ಗೆಳೆಯ. ಊಟಕ್ಕೆ ಕರೆದರೆ ಹೋಗಬಹುದು. ಆದರೆ ರಾಜಕೀಯಕ್ಕೆ ಹೋಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಯಾರ್ಯಾರು ಎಲ್ಲೆಲ್ಲಿ ಇರ್ತಾರೆ ಅಂತ ಗೊತ್ತಿಲ್ಲದ ಈ ಪರಿಸ್ಥಿತಿಯಲ್ಲಿ ಸಿದ್ದರಾಮಣ್ಣನವರು ಏನೇ ಇದ್ರೂ ನೇರ ರಾಜಕಾರಣಿ. ಅದರಲ್ಲಿ ನಮ್ಮನೆಗೆ ಬರೋಕೆ ಏನು ತೊಂದರೆ ಇಲ್ಲ. ನಾನು ಕೂಡ ತಾವು ಸಿಎಂ ಆಗಿದ್ದಾಗ ಎಂದಿಗೂ ನಿಮ್ಮ ಮನೆಗೆ ಬಂದಿಲ್ಲ. ಆದರೂ ನಮ್ಮ ಸ್ನೇಹದಲ್ಲಿ‌ ಏನು ಕೊರತೆ ಇಲ್ಲ. ರಾಜಕಾರಣ ರಾಜಕಾರಣ, ಸ್ನೇಹ ಸ್ನೇಹ ಅಷ್ಟೇ’ ಎಂದರು.

ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಮತಾಂತರ ನಿಷೇಧ ಮಸೂದೆ ಜಾರಿಗೆ ನಿರ್ಧರಿಸಿದ್ದರು; ಬಿಎಸ್​ ಯಡಿಯೂರಪ್ಪ ಇದನ್ನೂ ಓದಿ: Anti Conversion Bill Highlights: ಮತಾಂತರ ನಿಷೇಧ ಕಾಯ್ದೆಯ ಮುಖ್ಯ ಅಂಶಗಳು, ಪ್ರತಿಪಕ್ಷಗಳ ಆಕ್ಷೇಪಗಳಿವು

Published On - 10:00 pm, Thu, 23 December 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್