AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್ಡೌನ್ ಉಲ್ಲಂಘಿಸಿ ರಂಜಾನ್ ಕಿಟ್ ವಿತರಣೆ; ಮಾಸ್ಕ್ ಧರಿಸದೆ ಬಂದ ಯುವಕನ ವಿರುದ್ಧ ಗರಂ ಆದ ಸಿದ್ಧರಾಮಯ್ಯ

ಮಾಸ್ಕ್ ಧರಿಸದೆ ಬಂದ ಯುವಕನ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಐದೇ ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಕಿಟ್ ಸ್ವೀಕರಿಸುವವರ ಮಧ್ಯೆ ದೈಹಿಕ ಅಂತರ ಇತ್ತು. ಆದರೆ ಕಿಟ್ ನೀಡುವವರು ಮಾತ್ರ ಅಂತರ ಪಾಲಿಸಿಲ್ಲ.

ಲಾಕ್ಡೌನ್ ಉಲ್ಲಂಘಿಸಿ ರಂಜಾನ್ ಕಿಟ್ ವಿತರಣೆ; ಮಾಸ್ಕ್ ಧರಿಸದೆ ಬಂದ ಯುವಕನ ವಿರುದ್ಧ ಗರಂ ಆದ ಸಿದ್ಧರಾಮಯ್ಯ
ಸಿದ್ದರಾಮಯ್ಯ
ಆಯೇಷಾ ಬಾನು
|

Updated on: May 10, 2021 | 2:24 PM

Share

ಬೆಂಗಳೂರು: ಕೊರೊನಾ ಲಾಕ್ಡೌನ್ ನಡುವೆಯೂ ನಗರದ ಕಾವಲ್ ಭೈರಸಂದ್ರದಲ್ಲಿ ರಂಜಾನ್ ಪ್ರಯುಕ್ತ ಶಾಸಕ ಅಖಂಡ ಶ್ರೀನಿವಾಸಮೂರ್ತಿರಿಂದ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಖಾನ್, ಕೃಷ್ಣಭೈರೇಗೌಡ, ಬೆಂಬಲಿಗರು ಭಾಗಿಯಾಗಿದ್ದಾರೆ. ಆದ್ರೆ ಕಾರ್ಯಕ್ರಮದಲ್ಲಿ ಕೊವಿಡ್ ನಿಯಮಗಳ ಉಲ್ಲಂಘನೆ ಮಾಡಲಾಗಿದೆ.

ಇನ್ನು ಇದೇ ವೇಳೆ ಮಾಸ್ಕ್ ಧರಿಸದೆ ಬಂದ ಯುವಕನ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಐದೇ ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ್ದಾರೆ. ಕಾರ್ಯಕ್ರಮದಲ್ಲಿ ಕಿಟ್ ಸ್ವೀಕರಿಸುವವರ ಮಧ್ಯೆ ದೈಹಿಕ ಅಂತರ ಇತ್ತು. ಆದರೆ ಕಿಟ್ ನೀಡುವವರು ಮಾತ್ರ ಅಂತರ ಪಾಲಿಸಿಲ್ಲ. ಕಿಟ್ ಪಡೆಯುವಾಗ ಮಾಸ್ಕ್ ಧರಿಸದ ಯುವಕರ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿ ಕಾರ್ಯಕ್ರಮದಿಂದ ವಾಪಸ್ ಆಗಿದ್ದಾರೆ.

ಎಲ್ಲರೂ ತಪ್ಪದೇ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಲ್ಲರೂ ತಪ್ಪದೇ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಲಸಿಕೆ ಮಾತ್ರ ಶಾಶ್ವತ ಪರಿಹಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ಕೊರತೆಯಾಗಿದೆ. ಇದರಿಂದಲೇ ಕೊರೊನಾ ಸೋಂಕಿತರು ಸಾಯುತ್ತಿದ್ದಾರೆ. ಸಕಾಲದಲ್ಲಿ ಆಕ್ಸಿಜನ್ ಸಿಕ್ಕಿದರೆ ಬದುಕಿಸಬಹುದು. ಈಗ ಜಾರಿ ಮಾಡಿರುವುದು ಸಂಪೂರ್ಣ ಲಾಕ್ಡೌನ್ ಅಲ್ಲ. ನನ್ನ ಪ್ರಕಾರ 2 ವಾರ ಸಂಪೂರ್ಣ ಲಾಕ್ಡೌನ್ ಬೇಕು. ಲಾಕ್ ಮಾಡಿದ ರಾಜ್ಯಗಳಲ್ಲಿ ಕೊರೊನಾ ಕಡಿಮೆಯಾಗಿದೆ. ಆಂಧ್ರ, ದೆಹಲಿಯಲ್ಲಿ ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಹಾಗೆಯೇ ರಾಜ್ಯದಲ್ಲೂ ಫುಲ್ ಲಾಕ್ಡೌನ್ ಆಗಬೇಕು. ರಾಜ್ಯದಲ್ಲಿ ಕೊರೊನಾ ಟೆಸ್ಟ್ ಸಮರ್ಪಕವಾಗಿ ಮಾಡ್ತಿಲ್ಲ ಎಂದು ಸಿದ್ದರಾಮಯ್ಯ ಸಂಪೂರ್ಣ ಲಾಕ್ಡೌನ್ ಕುರಿತು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸರ್ಕಾರದ ತುರ್ತು ಗಮನಕ್ಕೆ.. 4 ದಿನ ಹಿಂದೆಯೇ ಅಟೆಂಡೆನ್ಸ್​ ರಿಜಿಸ್ಟರ್‌ಗೆ ಸಹಿ ಹಾಕಿ, ನಿಗೂಢವಾಗಿ ನಾಪತ್ತೆಯಾದ ವೈದ್ಯ!