ಮೊಟ್ಟೆ v/s ಬಾಳೆಹಣ್ಣು: ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆಗೆ ಬಾಳೆಹಣ್ಣು ಪರ್ಯಾಯವೇ, ತಜ್ಞರು ಹೇಳುವುದೇನು?

karnataka mid day meals: ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಊಟದ ಕುರಿತು ನಡೆದಿರುವ ಚರ್ಚೆಗಳು ಕುತೂಹಲಕಾರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮಿತಿಯು ಬಾಳೆಹಣ್ಣು ಅಥವಾ ಇತರ ಪೌಷ್ಟಿಕಾಂಶಗಳ ಬದಲಿಸಿ ಮೊಟ್ಟೆ ವಿತರಿಸುವ ಕುರಿತಾದ ಸಲಹೆಯು ರಾಜಕೀಯವಾಗಿ ಕೋಲಾಹಲ ಹುಟ್ಟುಹಾಕಿದೆ.

ಮೊಟ್ಟೆ v/s ಬಾಳೆಹಣ್ಣು:  ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆಗೆ ಬಾಳೆಹಣ್ಣು ಪರ್ಯಾಯವೇ, ತಜ್ಞರು ಹೇಳುವುದೇನು?
ಕೋಳಿ ಮೊಟ್ಟೆಗೆ ಬಾಳೆಹಣ್ಣು ಪರ್ಯಾಯವೇ? ತಜ್ಞರು ಹೇಳುವುದೇನು?
TV9kannada Web Team

| Edited By: sadhu srinath

Jul 20, 2022 | 7:19 PM

ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಊಟದ (karnataka mid day meals) ಕುರಿತು ನಡೆದಿರುವ ಚರ್ಚೆಗಳು ಕುತೂಹಲಕಾರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮಿತಿಯು ಬಾಳೆಹಣ್ಣು (Banana) ಅಥವಾ ಇತರ ಪೌಷ್ಟಿಕಾಂಶಗಳ ಬದಲಿಸಿ ಮೊಟ್ಟೆ (Egg) ವಿತರಿಸುವ ಕುರಿತಾದ ಸಲಹೆಯು ರಾಜಕೀಯವಾಗಿ ಕೋಲಾಹಲ ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಊಟದ ಕುರಿತು ನಡೆದಿರುವ ಚರ್ಚೆಗಳು ಕುತೂಹಲಕಾರಿಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮಿತಿಯು ಬಾಳೆಹಣ್ಣು ಅಥವಾ ಇತರ ಪೌಷ್ಟಿಕಾಂಶಗಳ ಬದಲಿಸಿ ಮೊಟ್ಟೆ ವಿತರಿಸುವ ಕುರಿತಾದ ಸಲಹೆಯು ರಾಜಕೀಯವಾಗಿ ಕೋಲಾಹಲ ಹುಟ್ಟುಹಾಕಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಗದಗ) ನಡೆಸಿದ ಈ ಅಧ್ಯಯನದಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಶಾಲೆಗಳಲ್ಲಿ ಮಧ್ಯಾಹ್ನ ಊಟದ (Mid Day Meals) ಭಾಗವಾಗಿ ಬಾಳೆಹಣ್ಣುಗಳನ್ನು ತಿನ್ನುವ ಮಕ್ಕಳಲ್ಲಿ ದೈಹಿಕ ತೂಕ ಹೆಚ್ಚಾಗುತ್ತದೆ. ಹಾಗಾಗಿ ಇದು ಮೊಟ್ಟೆಗೆ ಪರ್ಯಾಯವಾಗಿ ಇಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಸಮಿತಿಯು ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ಮೊಟ್ಟೆಯ ಬದಲು ಬಾಳೆಹಣ್ಣು ನೀಡುವ ವಿಷಯವನ್ನು ಮರುಪರಿಶೀಲಿಸುವಂತೆ ಸೂಚಿಸಿದೆ.

ಬಾಳೆಹಣ್ಣು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ದೇಹಕ್ಕೆ ಸುಮಾರು 110 kcal/100 g ಶಕ್ತಿಯನ್ನು ನೀಡುತ್ತದೆ. ಬಾಳೆಹಣ್ಣು ಪೊಟ್ಯಾಷಿಯಂ ಸಮೃದ್ಧವಾಗಿರುವ ಆಹಾರಗಳಲ್ಲಿ ಒಂದಾಗಿದೆ. 100 ಗ್ರಾಂ ಬಾಳೆಹಣ್ಣಿನಲ್ಲಿ ಸುಮಾರು 358 ಮಿಲಿಗ್ರಾಂ ಪೊಟ್ಯಾಷಿಯಂ ಲಭ್ಯವಿದೆ. ಆದರೆ ಈ ಹಣ್ಣಿನಲ್ಲಿ ಯಾವುದೇ ಪ್ರೊಟೀನ್ ಇರುವುದಿಲ್ಲ. ಆದರೆ ಅವು ಪೊಟ್ಯಾಷಿಯಂ ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ. ಬಾಳೆಹಣ್ಣು ತಿನ್ನುವ ಮಕ್ಕಳಲ್ಲಿ ಬಿಎಂಐ ಸೂಚ್ಯಂಕವೂ ಹೆಚ್ಚಾಗುತ್ತದೆ ಎಂದು ಸಮಿತಿ ಸಲಹೆ ನೀಡಿದೆ. ಈ ಯೋಜನೆಯಲ್ಲಿ ಬಾಳೆಹಣ್ಣುಗಳು ಮೊಟ್ಟೆಗಳಿಗೆ ಉತ್ತಮ ಪರ್ಯಾಯವಲ್ಲ. ಬದಲಿಗೆ ಕಡಲೆಕಾಯಿ, ಹಾಲಿನ ಉತ್ಪನ್ನಗಳು ಅಥವಾ ದ್ವಿದಳ ಧಾನ್ಯಗಳನ್ನು ನೀಡಬೇಕು ಎಂದು ಸಮಿತಿ ಸೂಚಿಸಿದೆ.

ಚಿಕ್ಕಿ ರೂಪದಲ್ಲಿ.. ಇದೇ ವಿಷಯವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಎನ್ ಇಪಿ ಅನುಷ್ಠಾನ ಕಾರ್ಯಪಡೆಯ ಸದಸ್ಯ ವೈ.ಮರಿಸ್ವಾಮಿ ಅವರು ಶಾಲಾ ಮಕ್ಕಳಿಗೆ ಮೊಟ್ಟೆಗಳ ಬದಲು ಶೇಂಗಾದಿಂದ ತಯಾರಿಸಿದ ಚಿಕ್ಕಿ ನೀಡುವುದು ಉತ್ತಮ ಎಂದು ಸಲಹೆ ನೀಡುತ್ತಾರೆ. ಅದೇ ರೀತಿ ಸಾರ್ವಜನಿಕ ಆರೋಗ್ಯ ವೈದ್ಯೆ ಹಾಗೂ ಸಂಶೋಧಕಿ ಡಾ.ಸಿಲ್ವಿಯಾ ಕರ್ಪಗಂ ಮಾತನಾಡಿ, ‘ಹಾಲಿನ ಉತ್ಪನ್ನಗಳಲ್ಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ವ್ಯಾಪಕವಾಗಿ ಲಭ್ಯವಿವೆ ಎನ್ನುತ್ತಾರೆ.

ಅದಕ್ಕಾಗಿಯೇ ಮೊಟ್ಟೆಯ ಬದಲಿಗೆ ಒಂದು ಲೋಟ ಹಾಲು/ಮೊಸರು ಅಥವಾ ಪನ್ನೀರ್ ಅನ್ನು ಉಣಬಡಿಸಬೇಕು ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಬಾಳೆಹಣ್ಣುಗಳನ್ನು ನೀಡಬೇಕು. ‘ಮೊಟ್ಟೆಯು ಲಘುವಾಗಿ ಪ್ಯಾಕ್ ಮಾಡಲಾದ ಪ್ರೋಟೀನ್‌ಗೆ ಹತ್ತಿರದ ವಸ್ತುವಾಗಿದೆ. ಇದನ್ನು ಮಕ್ಕಳು ತಿನ್ನಬಹುದು. ಸಾಂಬಾರ್ ಮತ್ತು ಬೇಳೆಕಾಳುಗಳು ಪ್ರೋಟೀನ್ ಅಂಶದ ದೃಷ್ಟಿಯಿಂದ ಮಕ್ಕಳಿಗೆ ಉತ್ತಮ ಎಂದು ಒನ್ ಬಿಲಿಯನ್ ಲಿಟರೇಟ್ಸ್​​ ಫೌಂಡೇಶನ್‌ನ ಸಾರ್ವಜನಿಕ ಆರೋಗ್ಯ ಸಲಹೆಗಾರ್ತಿ ಡಾ.ರೂಪಾ ದೇವಸದನ್ ಅವರು ಸಲಹೆ ನೀಡಿದ್ದಾರೆ.

To read more in Telugu click here

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada