ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಜಂಬೋ ಪ್ಯಾಕೆಟ್ ಹಾಲಿನ(jumbo packet milk price) ದರ 3 ರೂ. ಹೆಚ್ಚಿಸಿದೆ. ಇದರೊಂದಿಗೆ 6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ 231 ರೂ.ಯಿಂದ 234 ರೂ.ಗೆ ಹೆಚ್ಚಳವಾಗಲಿದೆ. ನಾಳೆಯಿಂದಲೇ(ಫೆಬ್ರವರಿ 11) ಪರಿಷ್ಕೃತ ಜಂಬೋ ಪ್ಯಾಕೆಟ್ ಹಾಲಿನ ದರ ಜಾರಿಗೆ ಬರಲಿದೆ.
ಬಮೂಲ್ ಕೆಎಂಎಫ್ ಅಂಗ ಸಂಸ್ಥೆಯಿಂದ ಪ್ರಕಟಣೆ ಹೊರಬಿದ್ದಿದ್ದು, ನಾಳೆಯಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ. ಈಗಾಗಲೇ ಬೆಲೆ ಮುದ್ರಿತ ಪ್ಯಾಕೆಟ್ಗಳು ಹಳೇ ಬೆಲೆಯಲ್ಲಿಯೇ ಮಾರಾಟ ಮಾಡಬೇಕು ಎಂದು ರಿಟೇಲ್, ಫ್ರಾಂಚೈಸಿ, ಔಟ್ಲೆಟ್ದಾರರಿಗೆ ಬಮೂಲ್ ಪ್ರಕಟಣೆ ಮೂಲಕ ತಿಳಿಸಿದೆ.
ಕಳೆದ ವರ್ಷ ನವೆಂಬರ್ನಲ್ಲಿಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿತ್ತು. ಇದೀಗ ಕೆಎಂಎಫ್ 6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರವನ್ನು ಹೆಚ್ಚಳ ಮಾಡಿದೆ.
Published On - 4:36 pm, Fri, 10 February 23