Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,875 ಕೊರೊನಾ ಕೇಸ್ ಪತ್ತೆ; 25 ಮಂದಿ ಸಾವು

| Updated By: ganapathi bhat

Updated on: Aug 01, 2021 | 8:38 PM

ಬೆಂಗಳೂರು ನಗರ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕೊರೊನಾ ಹಾಟ್​ಸ್ಪಾಟ್ ಆಗಿ ಕಂಡುಬರುತ್ತಿದೆ. ದಕ್ಷಿಣ ಕನ್ನಡದಲ್ಲಿ ಇಂದು ಬೆಂಗಳೂರಿಗಿಂತಲೂ ಅಧಿಕ ಅಂದರೆ 410 ಕೊವಿಡ್19 ಪ್ರಕರಣಗಳು ವರದಿಯಾಗಿವೆ. ಹಾಗೇ ಉಡುಪಿ ಜಿಲ್ಲೆಯಲ್ಲಿ ಕೂಡ ಕೊರೊನಾ ಏರಿಕೆಯಾಗಿದೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,875 ಕೊರೊನಾ ಕೇಸ್ ಪತ್ತೆ; 25 ಮಂದಿ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಆಗಸ್ಟ್ 1) ಹೊಸದಾಗಿ 1,875 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,06,999 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 28,46,244 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 25 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 36,587 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 24,144 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 409 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,27,748 ಕ್ಕೆ ಏರಿಕೆಯಾಗಿದೆ. 12,27,748 ಸೋಂಕಿತರ ಪೈಕಿ 12,03,314 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 15,880 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 8,553 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 0, ಬಳ್ಳಾರಿ 13, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 37, ಬೆಂಗಳೂರು ನಗರ 409, ಬೀದರ್ 1, ಚಾಮರಾಜನಗರ 33, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 65, ಚಿತ್ರದುರ್ಗ 32, ದಕ್ಷಿಣ ಕನ್ನಡ 410, ದಾವಣಗೆರೆ 17, ಧಾರವಾಡ 23, ಗದಗ 12, ಹಾಸನ 108, ಹಾವೇರಿ 2, ಕಲಬುರಗಿ 9, ಕೊಡಗು 83, ಕೋಲಾರ 35, ಕೊಪ್ಪಳ 1, ಮಂಡ್ಯ 42, ಮೈಸೂರು 146, ರಾಯಚೂರು 1, ರಾಮನಗರ 7, ಶಿವಮೊಗ್ಗ 65, ತುಮಕೂರು 52, ಉಡುಪಿ 162, ಉತ್ತರ ಕನ್ನಡ 46, ವಿಜಯಪುರ 1, ಯಾದಗಿರಿ ಜಿಲ್ಲೆಯಲ್ಲಿ 1 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರು ನಗರ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಇದೀಗ ಕೊರೊನಾ ಹಾಟ್​ಸ್ಪಾಟ್ ಆಗಿ ಕಂಡುಬರುತ್ತಿದೆ. ದಕ್ಷಿಣ ಕನ್ನಡದಲ್ಲಿ ಇಂದು ಬೆಂಗಳೂರಿಗಿಂತಲೂ ಅಧಿಕ ಅಂದರೆ 410 ಕೊವಿಡ್19 ಪ್ರಕರಣಗಳು ವರದಿಯಾಗಿವೆ. ಹಾಗೇ ಉಡುಪಿ ಜಿಲ್ಲೆಯಲ್ಲಿ ಕೂಡ ಕೊರೊನಾ ಏರಿಕೆಯಾಗಿದೆ. ಉಡುಪಿಯಲ್ಲಿ 162 ಕೊರೊನಾ ಕೇಸ್ ದಾಖಲಾಗಿದೆ.

ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 8 ಮಂದಿ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ 6 ಮತ್ತು ಹಾಸನದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ಕೋಲಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 2, ಚಾಮರಾಜನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಉಡುಪಿ ಜಿಲ್ಲೆಯಲ್ಲಿ ತಲಾ 1 ಕೊವಿಡ್ ಮರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 36,587 ಜನರ ಸಾವು ಸಂಭವಿಸಿದೆ.

ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿಗೆ ಪೂರ್ಣ ಸ್ವಾತಂತ್ರ್ಯ; ಮಹಾನಗರ ಪಾಲಿಕೆ ಮುಂದಿರುವ ಯೋಚನೆಗಳೇನು?

Corona Virus: ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಠಿಣ ಸೂತ್ರ; ಮುಖ್ಯಾಂಶಗಳು ಇಲ್ಲಿದೆ

(Karnataka New Corona Cases Death Toll Total Covid19 Active Coronavirus Cases on August 1)