ತುಂಗಾ ನದಿ ಶುದ್ಧೀಕರಣಕ್ಕೆ ನಟ ಒತ್ತಾಯ: ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಅನಿರುದ್ಧ
ಮಲೀನಗೊಳ್ಳುತ್ತಿರುವ ತುಂಗಾ ನದಿಗೆ ಇತ್ತೀಚೆಗೆ ಚಿತ್ರ ನಟ ಅನಿರುದ್ಧ ಭೇಟಿ ನೀಡಿದ್ದರು. ಮಲೀನಗೊಳ್ಳುತ್ತಿರುವ ನದಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ವಿಚಾರವಾಗಿ ಸರ್ಕಾರದ ಕಣ್ಣುತೆರೆಸುವ ಕೆಲಸಕ್ಕೆ ಮುಂದಾಗಿರುವ ಅನಿರುದ್ಧ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ತುಂಗಾ ನದಿ ನೀರು ಸ್ವಚ್ಛತೆಗೆ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ, ಜೂನ್ 26: ಶೃಂಗೇರಿಯಲ್ಲಿ ಹುಟ್ಟಿ ಶಿವಮೊಗ್ಗ ಜಿಲ್ಲೆಯಲ್ಲಿ ಹರಿದು ಹೋಗುವ ತುಂಗಾ ನದಿಯ ದಶಕಗಳಿಂದ ಮಲೀನಗೊಳ್ಳುತ್ತಿದೆ. ಜೂ. 19 ಕ್ಕೆ ಶಿವಮೊಗ್ಗದ ತುಂಗಾ ನದಿ ತೀರಕ್ಕೆ ಚಿತ್ರ ನಟ ಅನಿರುದ್ಧ (Actor Aniruddha) ಭೇಟಿ ನೀಡಿದ್ದರು. ಈ ವೇಳೆ ತುಂಗಾ ನದಿ ಕಲುಷಿತಗೊಳ್ಳುತ್ತಿರುವುದು ನೋಡಿ ಬೇಸರ ಹೊರಹಾಕಿದ್ದರು. ಇದೀಗ ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿರುವ ಅವರು, ತುಂಗಾ ನದಿ ನೀರು ಸ್ವಚ್ಛತೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ನಟ ಅನಿರುದ್ಧ ಮನವಿ ಸಲ್ಲಿಸಿದ್ದಾರೆ. ಇದನ್ನು ಸಿಎಂ ಆಫ್ ಕರ್ನಾಟಕ ಟ್ವೀಟ್ ಮಾಡಿದ್ದು, ನಟ ಅನಿರುದ್ಧ್ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತುಂಗಾ ನದಿ ನೀರು ಸ್ವಚ್ಛತೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
ಸಿಎಂ ಆಫ್ ಕರ್ನಾಟಕ ಟ್ವೀಟ್
ನಟ ಅನಿರುದ್ಧ್ ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ @siddaramaiah ಅವರನ್ನು ಭೇಟಿಯಾಗಿ ತುಂಗಾ ನದಿ ನೀರು ಸ್ವಚ್ಛತೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆಮಾಡಿ ತುಂಗಾ ನದಿ ಸ್ವಚ್ಚತೆ ಕಡೆಗೆ ಗಮನ ಹರಿಸುವಂತೆ ಸೂಚಿಸಿದರು. pic.twitter.com/xTrnHNb2aC
— CM of Karnataka (@CMofKarnataka) June 26, 2024
ಈ ವೇಳೆ ಮುಖ್ಯಮಂತ್ರಿಗಳು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ತುಂಗಾ ನದಿ ಸ್ವಚ್ಚತೆ ಕಡೆಗೆ ಗಮನ ಹರಿಸುವಂತೆ ಸೂಚಿಸಿದರು ಎಂದು ಬರೆಯಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಬರಿದಾಗುತ್ತಿದೆ ತುಂಗಾ ನದಿ; ಶೃಂಗೇರಿ ಮಠಕ್ಕೂ ತಟ್ಟಲಿದೆ ನೀರಿನ ಬಿಸಿ
ಮಲೀನ ನೀರು ನದಿಗೆ ಬಿಡದಂತೆ ಜಿಲ್ಲಾಡಳಿತ ಗಮನ ಹರಿಸಲು ನಟ ಅನಿರುದ್ಧ ಒತ್ತಾಯಿಸಿದ್ದರು. ಇದೇ ತುಂಗಾ ನೀರು ಹರಿಹರ, ಹೊಸಪೇಟೆ, ಮಂತ್ರಾಲಯಕ್ಕೆ ಹೋಗುತ್ತದೆ. ತುಂಗಾ ನದಿ ನೀರು ಪವಿತ್ರವಾಗಿದೆ ಎಂದು ಎಲ್ಲರೂ ಪೂಜೆ ಮಾಡುತ್ತಾರೆ. ಆದರೆ ಇಂತಹ ಮಲೀನ ನೀರು ಮುಂದಿನ ಜಿಲ್ಲೆಗಳಿಗೆ ಹೋಗುತ್ತಿರುವುದು ಸರಿಯಲ್ಲ.
ಶಿವಮೊಗ್ಗದ ತುಂಗಾ ನದಿಗೆ ನೇರವಾಗಿ ಮಲೀನ ನೀರು ಸೇರ್ಪಡೆ ಆಗುತ್ತದೆ. ಶಿವಮೊಗ್ಗ ನಗರದ ತ್ಯಾಜ್ಯ ಮತ್ತು ಮಲೀನ ನೀರು ನೇರವಾಗಿ ನದಿಗೆ ಸೇರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಗಂಗಡಿಕಲ್ಲು ಗ್ರಾಮದಲ್ಲಿ ತುಂಗಾ ನದಿ ಉಗಮ ಸ್ಥಾನವಾಗಿದೆ. ಶೃಂಗೇರಿ ಮತ್ತು ತೀರ್ಥಹಳ್ಳಿ ಪಟ್ಟಣದ ಮತ್ತು ಸುತ್ತುಮುತ್ತಿನ ಗ್ರಾಮದ ಮಲೀನ ನೀರು ನೇರವಾಗಿ ತುಂಗಾ ನದಿಗೆ ಸೇರುತ್ತಿದೆ. ಶಿವಮೊಗ್ಗ ನಗರದಲ್ಲಿ ಹರಿದು ಹೋಗಿರುವ ತುಂಗೆ ನದಿಗೆ ದಶಕಗಳಿಂದ ಸೇರುತ್ತಿರುವ ಮಲೀನ ನೀರು ನಗರದಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಹಿನ್ನಲೆ ಮಲೀನ ನೀರು ತುಂಗಾ ನದಿಗೆ ಬಿಡುತ್ತಿರುವ ಪಾಲಿಕೆ ಮತ್ತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಇದನ್ನೂ ಓದಿ: ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ 9 ದಿನಗಳ ಕಾಲ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ
ತುಂಗಾ ನದಿ ನೋಡಲು ಮಾತ್ರ ತುಂಬಾ ಸುಂದರವಾಗಿದೆ. ಆದರೆ ನದಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ತುಂಗಾ ನದಿಗೆ ಸೇರುತ್ತಿರುವ ತ್ಯಾಜ್ಯ ಮತ್ತು ಮಲೀನ ನೀರು ಬಿಡದಂತೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ. ಮಲೀನ ನೀರು ಸೂಕ್ತ ರೀತಿಯಲ್ಲಿ ನಿರ್ವಹಣೆಗೆ ಜಿಲ್ಲಾಡಳಿತವು ಗಮನ ಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.