AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ 9 ದಿನಗಳ ಕಾಲ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ

ಸಂಪೂರ್ಣ ಖಾಲಿಯಾದ ತುಂಗಭದ್ರ ನದಿಗೆ (Tungabhadra River)  ಇಂದಿನಿಂದ(ಮಾ.29) ಒಂಬತ್ತು‌ದಿನಗಳ ಕಾಲ ಶಿವಮೊಗ್ಗ‌ ಭದ್ರಾ ಡ್ಯಾಂ ನಿಂದ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಜಲಸಂಪನ್ಮೂಲ‌‌ ಇಲಾಖೆ ಆದೇಶಿಸಿದೆ. ಈ ಹಿನ್ನಲೆ ತುಂಗಭದ್ರ ನದಿ ಪಾತ್ರದ ದಾವಣಗೆರೆ ಜಿಲ್ಲೆಯ‌ ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ‌ 80ಕ್ಕೂ ಹೆಚ್ಚು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಭದ್ರಾ ಡ್ಯಾಂನಿಂದ ತುಂಗಭದ್ರ ನದಿಗೆ 9 ದಿನಗಳ ಕಾಲ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶ
ಭದ್ರಾ ಡ್ಯಾಂ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Mar 29, 2024 | 10:36 PM

Share

ದಾವಣಗೆರೆ, ಮಾ.29: ಸಂಪೂರ್ಣ ಖಾಲಿಯಾದ ತುಂಗಭದ್ರ ನದಿಗೆ (Tungabhadra River)  ಇಂದಿನಿಂದ(ಮಾ.29) ಒಂಬತ್ತು‌ದಿನಗಳ ಕಾಲ ಶಿವಮೊಗ್ಗ‌ ಭದ್ರಾ ಡ್ಯಾಂ ನಿಂದ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಜಲಸಂಪನ್ಮೂಲ‌‌ ಇಲಾಖೆ ಆದೇಶಿಸಿದೆ. ಈ ಹಿನ್ನಲೆ ತುಂಗಭದ್ರ ನದಿ ಪಾತ್ರದ ದಾವಣಗೆರೆ ಜಿಲ್ಲೆಯ‌ ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ‌ 80ಕ್ಕೂ ಹೆಚ್ಚು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನಿಂದ ಎಪ್ರೀಲ್ 6 ರವರೆಗೆ ಒಟ್ಟು ಹತ್ತು ಸಾವಿರ ಕ್ಯೂಸೆಕ್ಸ್ ನೀರು ಹರಿಯಲಿದ್ದು, ಇದರಿಂದ ಸಂಕಷ್ಟದಲ್ಲಿ ಇರುವ ಹರಿಹರ ಸೇರಿದಂತೆ ಸುತ್ತಮುತ್ತಲಿನ ಹಲವು‌ ಕಡೆ ಕುಡಿಯುವ ನೀರಿಗೆ ಆಸರೆಯಾಗಲಿದೆ.

ಸಂಕಷ್ಟದಲ್ಲಿದ್ದ ಗ್ರಾಮಸ್ಥರು

ಐದು ದಶಕಗಳ ಬಳಿಕ ತುಂಗಭದ್ರ ನದಿ ಸಂಪೂರ್ಣ ಭತ್ತಿಗೆ ಹೋಗಿದ್ದು, ಶಿವಮೊಗ್ಗ ಭದ್ರಾ ಡ್ಯಾಂನಲ್ಲಿ ನೀರು ನಂಬಿ ಅಡಿಕೆ ತೋಟ ಉಳಿಸಿಕೊಳ್ಳಲು ಪ್ರಯತ್ನ ಶುರುವಾಗಿದೆ. ಆದರೆ, ಡ್ಯಾಂ ನಿಂದ ಬಂದ ನೀರು ಮೇಲ್ಭಾಗದವ ಪಾಲಾಗುತ್ತಿದೆ. ಉಳಿದವರಿಗೆ ನೀರಿನ ಬದಲು ಕಣ್ಣೀರೇ ಗ್ಯಾರೆಂಟಿ ಆಗಿದೆ. ಇದೇ ಕಾರಣ ನಿಷೇಧಾಜ್ಞೆ ಜಾರಿಗೆ ಕಾಲುವೆಗೆ ಪೊಲೀಸ್ ಕಾವಲು ಇಟ್ಟು ನೀರು ತರುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಇದನ್ನೂ ಓದಿ:ಬರಗಾಲದ ಪರಿಣಾಮ: ತುಂಗಭದ್ರಾ ನದಿ ಖಾಲಿ, ಹುಲಿಗೆಮ್ಮ ದೇವಸ್ಥಾನಕ್ಕೆ ಬಂದ ಭಕ್ತರಿಂದ ಸ್ನಾನಕ್ಕಾಗಿ ಪರದಾಟ!

ಶಿವಮೊಗ್ಗದ ಭದ್ರಾ ಡ್ಯಾಂನಿಂದ 14ದಿನಗಳ ಕಾಲ ಕಾಲುವೆಗೆನೀರು ಹರಿಸಲು ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಧರಿಸಿತ್ತು. ಹೀಗೆ ನೀರು ಬಿಟ್ಟು ಎಂಟು ದಿನಗಳಾದರೂ ಕೊನೆಯ ಭಾಗವಾದ ದಾವಣಗೆರೆ ಹರಿಹರ ತಾಲೂಕುಗಳಿಗೆ ನೀರೇ ಬಂದಿಲ್ಲ.  ಕಳೆದ ಹಲವಾರು ದಿನಗಳಿಂದ ಇದೇ ರೀತಿ ಹೋರಾಟ ಆಗುತ್ತಿದೆ. ಕಳೆದ ಎಂಟು ದಿನಗಳ ಹಿಂದೆ ಭದ್ರಾ ಡ್ಯಾಂನಿಂದ ನೀರು ಬಿಡಲಾಗಿದೆ. ಚನ್ನಗಿರಿ ತಾಲೂಕಿನ ಹಿರೇಮಳಲಿ ಬಳಿಯಿಂದ ನೇರವಾಗಿ ದಾವಣಗೆರೆ ತಾಲೂಕಿನ ನಲ್ಕುಂದ ಸೇರಿದಂತೆ ಕೆಲ ಗ್ರಾಮಗಳಿಗೆ ನೀರು ಬಂದಿದೆ. ಆದ್ರೆ, ಅಲ್ಲಿ ಪಂಪ್ ಸೆಟ್ ಗಳನ್ನ ಬಳಸಿ ನೀರು ತಮ್ಮ ಅಡಿಕೆ ತೋಟಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದೇ ಕಾರಣಕ್ಕೆ ದಾವಣಗೆರೆ ತಹಶೀಲ್ದಾರ ನೇರವಾಗಿ ದಾವಣಗೆರೆ ಅಕ್ರಮ ಪಂಪ್ ಸೆಟ್ ಗಳಿಗೆ ಕಲ್ಪಿಸಲಾದ ವಿದ್ಯುತ್ ಸಂಪರ್ಕವನ್ನು ಕಿತ್ತು ಹಾಕಿದ್ದಾರೆ.

ಹೀಗೆ ಒಂದಿಲ್ಲೊಂದು ಕಾರಣಕ್ಕೆ ನಿತ್ಯ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಮಧ್ಯೆ ಒಂಬತ್ತು‌ದಿನಗಳ ಕಾಲ ಶಿವಮೊಗ್ಗ‌ ಭದ್ರಾ ಡ್ಯಾಂ ನಿಂದ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಜಲಸಂಪನ್ಮೂಲ‌‌ ಇಲಾಖೆ ಆದೇಶಿಸಿದೆ. ಈ ಹಿನ್ನಲೆ ತುಂಗಭದ್ರ ನದಿ ಪಾತ್ರದ ದಾವಣಗೆರೆ ಜಿಲ್ಲೆಯ‌ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ