AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವು ತಿಂದ ಸೂರ್ಯ: ಕಮರಿದ ಬೆಳೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ

ಮಾರ್ಚ್, ಏಪ್ರಿಲ್‌ ಮತ್ತು ಮೇ ತಿಂಗಳು ಹಣ್ಣುಗಳ ರಾಜನ ಕಾಲ​. ಆದರೆ ಈ ವರ್ಷ ಎರಡು ತಿಂಗಳು ಕಳೆದರೂ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿಲ್ಲ.‌ ಅಲ್ಲದೇ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7ರಷ್ಟು ವ್ಯಾಪಾರ ಕುಸಿತವಾಗಿವಾಗಿದ್ದು. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.‌

ಮಾವು ತಿಂದ ಸೂರ್ಯ: ಕಮರಿದ ಬೆಳೆ, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ
ಮಾವು
Poornima Agali Nagaraj
| Updated By: ವಿವೇಕ ಬಿರಾದಾರ|

Updated on:May 01, 2024 | 7:37 AM

Share

ಬೆಂಗಳೂರು ಮೇ 01: ರಾಜ್ಯದಲ್ಲಿ ದಿನದಿಂದ‌ ದಿನಕ್ಕೆ‌ ಬಿಸಿಲಿನ ತಾಪಮಾನ (Summer) ಹೆಚ್ಚಾಗುತ್ತಿದೆ. ಈ ಬಿಸಿಲು ಮಾವು (Mango) ಮಾರುಕಟ್ಟೆ ಮೇಲೂ ಪರಿಣಾಮ‌ ಬೀರಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.‌ ಹಣ್ಣುಗಳ ರಾಜಾ ಮಾವಿನ‌ಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ.‌ ಪ್ರತಿಯೊಬ್ಬರ ಇಷ್ಟದ ಹಣ್ಣು ಮಾವು.‌ ಆದರೆ ಈ ವರ್ಷ ಮಳೆಯಾಗದ ಹಿನ್ನೆಲೆ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಾರುಕಟ್ಟೆಗೆ (Mango Market) ಬಂದಿಲ್ಲ.‌ ಹೀಗಾಗಿ ಮಾವುಗಳು ಬೆಲೆ ಜಾಸ್ತಿಯಾಗಿದೆ‌. ‌ಮತ್ತು ವ್ಯಾಪಾರ ಕೂಡ ಡಲ್ ಆಗಿದೆ.

ಮಾರ್ಚ್, ಏಪ್ರಿಲ್‌ ಮತ್ತು ಮೇ ತಿಂಗಳು ಹಣ್ಣುಗಳ ರಾಜನ ಕಾಲ​. ಆದರೆ ಈ ವರ್ಷ ಎರಡು ತಿಂಗಳು ಕಳೆದರೂ ಮಾರುಕಟ್ಟೆಗೆ ಮಾವಿನ ಹಣ್ಣುಗಳು ಬಂದಿಲ್ಲ.‌ ಅಲ್ಲದೇ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7 ರಷ್ಟು ವ್ಯಾಪಾರ ಕುಸಿತವಾಗಿವಾಗಿದ್ದು. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.‌ ಸದ್ಯ ಬಿಸಿಲಿನ ತಾಪಮಾನ ಜಾಸ್ತಿಯಾಗಿದ್ದು, ಬಿಸಿಗಾಳಿ ಸೇರಿದಂತೆ ಮತ್ತಿತರರ ಕಾರಣಗಳಿಂದಾಗಿ ಮಾವಿನ ಹಣ್ಣಿನ ವ್ಯಾಪಾರ ಹೇಳಿಕೊಳ್ಳುವಷ್ಟು ನಡೆಯುತ್ತಿಲ್ಲ.‌ ಮಾರುಕಟ್ಟೆಗೆ ಸಣ್ಣ ಗಾತ್ರದ ಮಾವಿನ ಹಣ್ಣುಗಳು ಬಂದಿದ್ದರೂ ಗ್ರಾಹಕರು ಕೊಂಡುಕೊಳ್ಳುತ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ವ್ಯಾಪಾರ ಕೂಡ ಅಂದುಕೊಂಡಷ್ಟು ಇಲ್ಲ.

ನೆರೆಯ ತಮಿಳುನಾಡು ಮಾವಿನ ಫಸಲಿಗೆ ಹೆಸರುವಾಸಿ. ಮಾವು ಬೆಳೆಗಾರರು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಇಲ್ಲಿ ಬೆಳೆಯುತ್ತಾರೆ. ಕೃಷ್ಣಗಿರಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ. ಆದರೆ ಹೀಗೆ ಪೂರೈಕೆ ಆಗಿರುವ ಕೆಲ ಮಾವಿನ ಹಣ್ಣಿನಲ್ಲಿ ರುಚಿಯಿಲ್ಲ. ಕೆಲವರು ರಾಸಾಯಿನಿಕಗಳನ್ನು ಬಳಕೆ ಮಾಡಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಅವುಗಳು ರುಚಿ ಕಳೆದುಕೊಂಡಿವೆ. ತಿಂದರೆ ಆ ಹಣ್ಣುಗಳಲ್ಲಿ ರುಚಿಯಿರುವುದಿಲ್ಲ. ಕೃತಕವಾಗಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಹಣ್ಣಿನಲ್ಲಿ ರುಚಿ ಸಿಗುವುದಿಲ್ಲ. ಹೀಗಾಗಿ ಗ್ರಾಹಕರು ಹಣ್ಣುಗಳನ್ನ ಖರೀದಿ ಮಾಡುಲು ಹಿಂದು-ಮುಂದು ನೋಡುತ್ತಿದ್ದಾರೆ ಅಂತ ವ್ಯಾಪಾರಸ್ಥರು ಹೇಳಿದರು.

ಇದನ್ನೂ ಓದಿ: ಕೋಲಾರ: ಸುಡು ಬಿಸಿಲಿಗೆ ಉದುರಿದ ಮಾವು! ಬಾಡಿದ ರೈತರ ಬದುಕು 

ಮಹಾರಾಷ್ಟ್ರದ ರತ್ನಾಗಿರಿ ಮೂಲದ ಅಲ್ಫೋನ್ಸೊ, ಸೆಂಧೂರ ಮತ್ತು ಬಾದಾಮಿ ಕಳೆದ ವರ್ಷ ಕೆಜಿಗೆ 100 ರೂ.ಗೆ ಮಾರಾಟ ಆಗಿದ್ದವು. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಜಿಗೆ 150-200 ರೂಪಾಯಿ ಮಾರಾಟವಾಗುತ್ತಿದ್ದು, ಉಳಿದ ಹಣ್ಣುಗಳಿಗಿಂತ ಬೆಲೆ ಜಾಸ್ತಿಯಾಗಿದ್ದು, ಗ್ರಾಹಕರು ಜೇಬಿಗೆ ಕತ್ತರಿ ಬೀಳುತ್ತಿದೆ.

ಮಾವಿನ ಸೀಸನ್ ಅಂತ ಹಣ್ಣುಗಳನ್ನ ಖರೀದಿ ಮಾಡುವುದಕ್ಕೆ ಬಂದಿದ್ವಿ. ಮಾವಿನ ಹಣ್ಣುಗಳ ಬೆಲೆ ತುಂಬಾ ದುಬಾರಿಯಾಗಿದೆ. ಆದರೆ ಹಣ್ಣುಗಳು ರುಚಿ ಸಹ ಇಲ್ಲ. ಆದರೂ ಸೀಸನ್ ಅಂತ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಗ್ರಾಹಕ ಮೋಹನ್ ಹೇಳಿದರು.

ವಿವಿಧ ಜಾತಿಯ ಮಾವಿನ ಹಣ್ಣಗಳು ಬೆಲೆ

ಹಿಮಾಯತ್ ಜಾತಿ – 300 ರೂ.

ಬಾದಾಮಿ ಜಾತಿ – 250 ರೂ.

ಸಕ್ಕರೆಗುತ್ತಿ ಜಾತಿ – 150 ರೂ.

ಬಾಗಾನ್ ಪಲ್ಲಿ ಜಾತಿ – 150 ರೂ.

ಸಿಂಧೂರ ಜಾತಿ – 150 ರೂ.

ಕೇಸರಿ ಜಾತಿ – 200 ರೂ.

ಕಸ್ತೂರಿ ಜಾತಿ – 200 ರೂ.

ಅಲ್ಪಾನ್ಸಾ ಜಾತಿ – 300 ರೂ.

ರಸ್ಪುರಿ ಜಾತಿ – 160 ರೂ.

ಈ ಬಾರಿಯ ಮಾವಿನ ಸೀಸನ್ ಡಲ್ ಇದ್ದು, ನಿರೀಕ್ಷೆ ಮಾಡಿದಷ್ಟು ಹಣ್ಣುಗಳು ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಗ್ರಾಹಕರಿಗೆ ಒಂದು ಕಡೆ ನಿರಾಸೆಯಾದರೆ, ವ್ಯಾಪಾರಸ್ಥರು ವ್ಯಾಪಾರ ಇಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:36 am, Wed, 1 May 24