ಬೆಂಗಳೂರು, ಮೇ 08: ರಾಜಾಧಾನಿ ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ (Temperature) ಏರಿಕೆಯಾಗುತ್ತಿದ್ದು, ರೈತರಿಗೆ ಸಾಕಷ್ಡು ಹೊಡೆತ ಬೀಳುತ್ತಿದ್ದು, ಇದರಿಂದಾಗಿ ತರಕಾರಿಗಳ ಬೆಲೆ (Vegetables Price) ದುಬಾರಿಯಾಗುದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ 10 ರೂ. ಏರಿಕೆಯಾಗಿವೆ. ಬಿಸಿಲಿನ ಪ್ರಮಾಣ ಹೆಚ್ಚಾದಂತೆ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳು ಹೆಚ್ಚಿನ ಬೆಲೆ ಏರಿಕೆ, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಾಗಿದ್ದರೆ ಇವತ್ತಿನ ತರಕಾರಿಗಳ ಬೆಲೆ ಎಷ್ಟು ಅಂತ ನೋಡುವುದಾದರೇ..
ತರಕಾರಿ ಬೆಲೆ (ಕೆಜಿ) | ||
ತರಕಾರಿ | ಹಿಂದಿನ ಬೆಲೆ (ರೂ) | ಇಂದಿನ ಬೆಲೆ (ರೂ) |
ಗಜ್ಜರಿ | 80 | 100 |
ಬೀನ್ಸ್ | 120 | 250 |
ನವಿಲುಕೋಸು | 60 | 80 |
ಬದನೆಕಾಯಿ | 40 | 60 |
ದಪ್ಪ ಮೆಣಸಿನಕಾಯಿ | 60 | 80 |
ಬಟಾಣಿ | 160 | 200 |
ಬೆಂಡೆಕಾಯಿ | 50 | 60 |
ಟೊಮಾಟೋ | 20 | 30 |
ಆಲೂಗೆಡ್ಡೆ | 30 | 49 |
ಹಾಗಲಕಾಯಿ | 60 | 76 |
ಸೋರೆಕಾಯಿ | 40 | 52 |
ಬೆಳ್ಳುಳ್ಳಿ | 300 | 320 |
ಶುಂಠಿ | 180 | 195 |
ಪಡವಲಕಾಯಿ | 30 | 46 |
ಹೀರೆಕಾಯಿ | 50 | 62 |
ಹಸಿರುಮೆಣಸಿಕಾಯಿ | 80 | 92 |
ಬಿಟ್ರೋಟ್ | 40 | 45 |
ಈರುಳ್ಳಿ | 20 | 24 |
ಇದು ಒಂದು ಕಡೆಯಾದರೆ ಮತ್ತೊಂದೆಡೆ ಸೌತೆಕಾಯಿ ಹಾಗೂ ನಿಂಬೆಹಣ್ಣಿನ ದರ ದಿನದಿಂದ ದಿನಕ್ಕೆ ಕೈಗೆಟುಕಲಾರದಷ್ಟು ಏರಿಕೆಯಾಗುತ್ತಿದೆ. ಬೇಸಿಗೆ ಆರಂಭದಿಂದಲೂ ನಿಂಬೆ ಹಾಗೂ ಸೌತೆಕಾಯಿಗಳ ಬೆಲೆ ಏರಿಕೆಯಾಗಿದ್ದು, ಒಂದು ಕೆಜಿ ಸೌತೆಕಾಯಿ ಬೆಲೆ ಬರೋಬ್ಬರಿ 62 ರೂಪಾಯ ಇದೆ. ಬಿಸಿಲು ಹೆಚ್ಚಿರುವ ಕಾರಣ ಸೌತೆಕಾಯಿ ಬಳ್ಳಿ ಹಬ್ಬುತ್ತಿಲ್ಲ. ಹೂ ಬಿಟ್ಟರೂ ಮೊಗ್ಗು ಬಾರದೆ ಒಣಗಿ ಹೋಗುತ್ತಿವೆ. ಇದರಿಂದ ಮಾರುಕಟ್ಟೆಗೆ ಸೌತೆಕಾಯಿ ಪೂರೈಕೆಯಾಗುತ್ತಿಲ್ಲ. ಈ ಹಿಂದೆ ಚಿಕ್ಕಬಳ್ಳಾಪುರ, ಕೋಲಾರ, ಅನೇಕಲ್, ಸರ್ಜಾಪುರ ಸೇರಿ ಬೆಂಗಳೂರು ಸುತ್ತ- ಮುತ್ತಲಿನ ಪ್ರದೇಶದಿಂದ ನಗರಕ್ಕೆ ಸೌತೆಕಾಯಿ ಬರುತ್ತಿತ್ತು. ಆದರೆ ಈಗ, ಈ ಭಾಗದಿಂದ ಬರುತ್ತಿದ್ದ ಸೌತೆಕಾಯಿ ಕಡಿಮೆಯಾಗಿದ್ದು ಬೆಲೆ ಏರಿಕೆಯಾಗಿದೆ. ಜೊತೆಗೆ ನಿಂಬೆ ಹಣ್ಣಿನ ಬೆಲೆಯೂ ಏರಿಕೆಯಾಗಿದ್ದು ಒಂದು ನಿಂಬೆ ಹಣ್ಣಿಗೆ 9 ರೂ. ಇದೆ.
ಇದನ್ನೂ ಓದಿ: Vegetable Price Hike; ತರಕಾರಿ ಬೆಲೆ ದಿಢೀರ್ ಏರಿಕೆ, ಜನ ಹೈರಾಣು
ಬಿಸಿಲು ತುಂಬ ಜಾಸ್ತಿ ಇದೆ. ಈ ಬಿಸಿಲಿನಿಂದಾಗಿ ತರಕಾರಿಗಳ ಬೆಲೆ ತುಂಬ ದುಬಾರಿಯಾಗಿದೆ. ಸೌತೆಕಾಯಿ ಹಾಗೂ ನಿಂಬೆ ಹಣ್ಣಿನ ಬೆಲೆಯಂತೂ ಕೇಳುವ ಹಾಗೆ ಇಲ್ಲ. ಅಷ್ಟೊಂದು ಜಾಸ್ತಿಯಾಗಿದೆ. ಸೌತೆಕಾಯಿ ಇವತ್ತು ಕೆಜಿಗೆ 60 ರೂ. ಆಗಿದೆ. ನಿಂಬೆಹಣ್ಣು 3 ರೂಪಾಯಿಂದ 8 ರೂ. ಏರಿಕೆಯಗಿದೆ. ಹೀಗಾಗಿ ಬೆಲೆ ಕೇಳಿಯೇ ಸುಸ್ತಾಗುತ್ತಿದೆ ಎಂದು ಗ್ರಾಹಕರು ಹೇಳಿದರು.
ಒಟ್ಟಿನಲ್ಲಿ ಬಿಸಿಲಿನ ಪರಿಣಾಮ ತರಕಾರಿಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ಬೆಲೆ ದುಪ್ಪಟ್ಟಾಗುವ ಸಾಧ್ಯಾತೆ ಇದೆ. ವರುಣ ದಯೆ ತೋರಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Wed, 8 May 24