ಭವ್ಯವಾದ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಈ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿ

ಬೇಸಿಗೆಯಲ್ಲೂ ನೀವು ಈ ಭವ್ಯವಾದ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದು. ಹಂಪಿ, ಪಟ್ಟದಕಲ್ಲು, ಐಹೊಳೆ, ಬಾದಾಮಿ ಈ ಸ್ಥಳಗಳಿಗೆ ಕುಟುಂಬ ಸಮೇತ ಭೇಟಿ ನೀಡಬಹುದು. ರೈಲಿನ ಮೂಲಕ ಈ ಸ್ಥಳಿಗಳಿಗೆ ಹೋಗುವುದು ಹೇಗೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಭವ್ಯವಾದ ವಾಸ್ತುಶಿಲ್ಪಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಈ ನಾಲ್ಕು ಸ್ಥಳಗಳಿಗೆ ಭೇಟಿ ನೀಡಿ
ಬಾದಾಮಿ
Follow us
ನಯನಾ ರಾಜೀವ್
|

Updated on:May 08, 2024 | 2:41 PM

ಭವ್ಯವಾದ ವಾಸ್ತುಶಿಲ್ಪ(Architecture)ವನ್ನು ನೀವು ಕಣ್ತುಂಬಿಕೊಳ್ಳಲು ಕರ್ನಾಟಕದ ಈ ನಾಲ್ಕು ಸ್ಥಳಗಳಿಗೆ ನೀವು ಭೇಟಿ ನೀಡಲೇಬೇಕು. ಬೇಸಿಗೆ, ಮಳೆಗಾಲ, ಚಳಿಗಾಲ ಯಾವ ಸಮಯದಲ್ಲಿ ಬೇಕಾದರೂ ಈ ಪ್ರದೇಶಗಳಿಗೆ ನೀವು ಹೋಗಬಹುದು. ಕರ್ನಾಟಕದಲ್ಲಿ ಪ್ರವಾಸಿಗರು ಬಯಸುವ ಎಲ್ಲಾ ತಾಣಗಳು ಇವೆ. ಬಾದಾಮಿ – ಐಹೊಳೆ- ಪಟ್ಟದಕಲ್ಲು, ಹಂಪಿ ಯುನೆಸ್ಕೊ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ.

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಯು ವಿಶ್ವಪ್ರಸಿದ್ಧವಾಗಿದೆ. ಅಂದಿನ ಕಾಲದಲ್ಲಿ ದಕ್ಷಿಣ ಭಾರತದಾದ್ಯಂತ ಪ್ರಾಬಲ್ಯ ಹೊಂದಿದ್ದ ವಿಜಯ ನಗರ ಸಾಮ್ರಾಜ್ಯವು ಭಾರತೀಯ ಉಪಖಂಡದಲ್ಲಿ ಪ್ರಬಲ ಸಾಮ್ರಾಜ್ಯವಾಗಿತ್ತು. ವಿಜಯನಗರ ಸಾಮ್ರಾಜ್ಯವನ್ನು ಸಂಸ್ಕೃತಿ ಮತ್ತು ಕಲಿಕೆಯ ಸುವರ್ಣಯುಗವೆಂದು ಪರಿಗಣಿಸಲಾಗಿದೆ. ಐಹೊಳೆ-ಪಟ್ಟದಕಲ್ಲು, ಹಂಪಿ, ಬಾದಾಮಿಯನ್ನು ನೋಡಲು ತಲಾ ಒಂದು ದಿನ ಸಾಕಾಗುತ್ತದೆ. ಆದರೆ ನೀವು ಪರಂಪರೆಯ ತಾಣಗಳನ್ನು ಆಳವಾಗಿ ಅಧ್ಯಯನ ಮಾಡಲು ಬಯಸಿದರೆ ನಿಮಗೆ ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು.

ಹಂಪಿ

ಇಲ್ಲಿರುವ ವಿರೂಪಾಕ್ಷ ದೇವಾಲಯವು ಬಹಳ ಪ್ರಸಿದ್ಧಿ ಪಡೆದಿದೆ, ಇದನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿನ ಕಮಲ ಮಹಲ್, ಉಗ್ರ ನರಸಿಂಹ ವಿಗ್ರಹ, ಕಡಲೆಕಾಳು ಗಣೇಶ, ಸಾಸಿವೆ ಗಣೇಶ ,ವಿಜಯ ವಿಠ್ಠಲ ದೇವಾಲಯಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತವೆ. ವಿಜಯನಗರ ಸಾಮ್ರಾಜ್ಯದ ವೈಭವದ ರಾಜಧಾನಿಯಾಗಿದ್ದ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದೆ. ಹಂಪಿಯು ತನ್ನ ಐತಿಹಾಸಿಕ ಪ್ರಾಮುಖ್ಯತೆ, ಪರಂಪರೆ, ದೇವಾಲಯಗಳು, ಅವಶೇಷಗಳು ಮತ್ತು ಸೊಗಸಾದ ಕರಕುಶಲತೆಗೆ ಹೆಸರುವಾಸಿಯಾಗಿದೆ. ನೀವು ಐವತ್ತು ರೂಪಾಯಿಯ ನೋಟಿನ ಮೇಲೆ ಕಲ್ಲಿನ ರಥವನ್ನು ನೋಡಿರಬಹುದು. ಅದು ಹಂಪಿಯಲ್ಲಿರುವ ಕಲ್ಲಿನ ರಥದ ಚಿತ್ರವಾಗಿದೆ. ಇದು ಅದ್ಭುತ ಕರಕುಶಲತೆಯನ್ನು ಹೊಂದಿದೆ.

ಐಹೊಳೆ ಐಹೊಳೆಯು ಇತಿಹಾಸ, ಪುರಾತತ್ವ, ವಾಸ್ತುಶಿಲ್ಪ, ಪರಂಪರೆ ಮತ್ತು ಪ್ರಾಚೀನ ದೇವಾಲಯಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದೆ. ಇದು ಹಂಪಿಯಿಂದ ಕೇವಲ 140 ಕಿ.ಮೀ ದೂರದಲ್ಲಿರುವ ಐಹೊಳೆಯು ಕೇವಲ ಎರಡು ಗಂಟೆಗಳ ಪಯಣವಾಗಿದೆ. ಐಹೊಳೆಯಲ್ಲಿ ನೀವು ಸುಮಾರು ನೂರಕ್ಕಿಂತಲೂ ಹೆಚ್ಚು ದೇವಾಲಯಗಳನ್ನು ನೋಡಬಹುದು. ಐಹೊಳೆ ಉತ್ತರ ಕರ್ನಾಟಕದ ಮಲಪ್ರಭಾ ನದಿ ದಡದ ಮೇಲೆ ಇರುವ ಒಂದು ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇಲ್ಲಿ ನೀವು ಜೈನ ಮತ್ತು ಬೌದ್ಧ ದೇವಾಲಯಗಳನ್ನು ಸಹ ನೋಡಬಹುದು. ಇಲ್ಲಿರುವ ದುರ್ಗಾ ದೇವಾಲಯದ ಕಾಂಪ್ಲೆಕ್ಸ್ ಆರ್ಟ್ ಗ್ಯಾಲರಿ ಮತ್ತು ಪುರಾತತ್ವ ವಸ್ತುಸಂಗ್ರಹಾಲಯವನ್ನು ಹೊಂದಿದ್ದು ಇಲ್ಲಿ ಉತ್ಖನನ ಮಾಡಲಾದ ಸೊಗಸಾದ ಪ್ರಾಚೀನ ವಸ್ತುಗಳ ಸಂಗ್ರಹವನ್ನು ವೀಕ್ಷಿಸಬಹುದು. ಇಲ್ಲಿನ ಲಾಡ್ ಖಾನ್ ದೇವಾಲಯದಲ್ಲಿ ಹಿಂದೂ ಧರ್ಮದ ಶೈವ, ವೈಷ್ಣವ ಮತ್ತು ಶಕ್ತಿ ಅಥವಾ ದುರ್ಗಾ ಪ್ರತಿಮೆಗಳಿದ್ದು ಪೂಜಿಸಲ್ಪಡುತ್ತವೆ.

ಮತ್ತಷ್ಟು ಓದಿ: ಭೂಮಿಯ ಮೇಲಿರುವ ಕೈಲಾಸವೆಂದೇ ಕರೆಸಿಕೊಂಡಿರುವ ಗೋಕರ್ಣ, ಬೇಸಿಗೆ ರಜೆಯಲ್ಲಿ ಭೇಟಿ ನೀಡಲು ಉತ್ತಮ ತಾಣ

ಪಟ್ಟದಕಲ್ಲು ಐಹೊಳೆ ಪಟ್ಟದಕಲ್ಲುನಿಂದ ಕೇವಲ 13 ಕಿಮೀ ದೂರದಲ್ಲಿದ್ದು ತಲುಪಲು ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿರುವ ದೇವಾಲಯಗಳನ್ನು ಕ್ರಿ.ಶ 7 ನೇ ಮತ್ತು 8 ನೇ ಶತಮಾನಗಳ ನಡುವೆ ನಿರ್ಮಿಸಲಾಗಿದ್ದು ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ. ಇಲ್ಲಿ ನೀವು ಹಿಂದೂ ಮತ್ತು ಜೈನ ದೇವಾಲಯಗಳನ್ನು ನೋಡಬಹುದು. ಚಾಲುಕ್ಯರು ಪಟ್ಟದಕಲ್ಲನ್ನು ಪಟ್ಟಾಭಿಷೇಕ ಸಮಾರಂಭಗಳಿಗೆ ಬಳಸುತ್ತಿದ್ದರು. ವಿರೂಪಾಕ್ಷ ದೇವಾಲಯವು ಪಟ್ಟದಕಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇದನ್ನು ಪಲ್ಲವರ ಮೇಲೆ ತನ್ನ ಪತಿ ಮತ್ತು ರಾಜ ವಿಕ್ರಮಾದಿತ್ಯನ ವಿಜಯವನ್ನು ಆಚರಿಸಲು 8 ನೇ ಶತಮಾನದಲ್ಲಿ ರಾಣಿ ಲೋಕಮಹಾದೇವಿ ನಿರ್ಮಿಸಿದಳು. ಪಾಪನಾಥ ದೇವಾಲಯ, ಗಳಗನಾಥ ದೇವಾಲಯ, ಸಂಗಮೇಶ್ವರ ದೇವಾಲಯ, ಚಂದ್ರಶೇಖರ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಜಂಬು ಲಿಂಗೇಶ್ವರ ದೇವಾಲಯ, ಮತ್ತು ಕಾಡಸಿದ್ದೇಶ್ವರ ದೇವಾಲಯಗಳು ಇಲ್ಲಿ ಇರುವ ಇತರ ಜನಪ್ರಿಯ ದೇವಾಲಯಗಳಾಗಿವೆ.

ಬಾದಾಮಿ ಹಿಂದಿನಕಾಲದಲ್ಲಿ ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯನ್ನು ವಾತಾಪಿ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಗುಹಾ ದೇವಾಲಯಗಳು ಮತ್ತು ಇತರ ಸ್ಮಾರಕಗಳನ್ನು ಕ್ರಿ.ಶ 6 ಮತ್ತು 8 ನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ಬಾದಾಮಿ ಗುಹೆ ದೇವಾಲಯದ ಸಂಕೀರ್ಣವು ಜೈನ ದೇವಾಲಯ ಮತ್ತು ಮೂರು ಹಿಂದೂ ದೇವಾಲಯಗಳಿಗೆ ನೆಲೆಯಾಗಿದೆ. ಬಾದಾಮಿಯಲ್ಲಿನ ಗುಹೆಗಳ ಮೇಲೆ ಶಿವ, ಭಗವಾನ್ ವಿಷ್ಣು ಮತ್ತು ಅವನ ತಾಂಡವ ನೃತ್ಯದ ಶಿಲ್ಪಕಲೆಗಳನ್ನು ನೀವು ನೋಡಬಹುದು. ಅಗಸ್ತ್ಯ ಸರೋವರ ಮತ್ತು ಗುಹೆ ದೇವಾಲಯದ ಬೆರಗುಗೊಳಿಸುವ ಭೂದೃಶ್ಯಗಳು ಮತ್ತು ಮೋಡಿಮಾಡುವ ಹಿನ್ನೆಲೆ, ಈ ಸ್ಮಾರಕಗಳು ಮಹತ್ತರವಾದ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿವೆ.

ಹೋಗುವುದು ಹೇಗೆ? ವಿಮಾನದ ಮೂಲಕ ಹೋಗುವುದಾದರೆ ಹಂಪಿ ಅಥವಾ ಬಾದಾಮಿಯನ್ನು ಬೆಂಗಳೂರು ಅಥವಾ ಮಂಗಳೂರಿನಿಂದ ವಿಮಾನದ ಮೂಲಕ ತಲುಪಬಹುದು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಂಪಿಯಿಂದ 340 ಕಿಮೀ ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬಾದಾಮಿಯಿಂದ 460 ಕಿಮೀ ದೂರದಲ್ಲಿದೆ.

ರೈಲಿನ ಮೂಲಕ ಹಂಪಿ ಮತ್ತು ಬಾದಾಮಿಯು ಕರ್ನಾಟಕದ ಎಲ್ಲಾ ಪ್ರಮುಖ ಪಟ್ಟಣಗಳಿಂದ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಿಂದ ಬರುವ ರೈಲುಗಳಿಗೆ ಗುಂತಕಲ್ ಪ್ರಮುಖ ರೈಲು ಜಂಕ್ಷನ್ ಆಗಿದೆ. ಹಂಪಿ ತಲುಪಲು ಹೊಸಪೇಟೆ ಮುಖ್ಯ ನಿಲ್ದಾಣವಾಗಿದೆ.

ಬಸ್ ಮೂಲಕ ಈ ನಗರಗಳಿಗೆ ಕರ್ನಾಟಕದ ಬಹುತೇಕ ಪ್ರಮುಖ ಬಸ್ ನಿಲ್ದಾಣಗಳಿಂದ ಕರ್ನಾಟಕ ರಾಜ್ಯದ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ. ಈ ಹೆಚ್ಚಿನ ಸ್ಥಳಗಳಲ್ಲಿ ಸಿಟಿ ಕ್ಯಾಬ್‌ಗಳು ಸಹ ಲಭ್ಯವಿವೆ. ಹಂಪಿಗೆ ಹತ್ತಿರದ ಬಸ್ ನಿಲ್ದಾಣವೆಂದರೆ ಹೊಸಪೇಟೆ ಅಲ್ಲಿಂದ ಹಂಪಿ ಕೇವಲ 12 ಕಿಮೀ ದೂರದಲ್ಲಿದೆ. ಆಟೋ ಮೂಲಕವೂ ತಲುಪಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:40 pm, Wed, 8 May 24

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್