AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋ ಪ್ರಕರಣ: ಬೆಂಗಳೂರಿನಲ್ಲೇ ಇದ್ದಾನೆ ಕಾರ್ತಿಕ್, ಡಿಕೆಶಿಯಿಂದಲೇ ರಕ್ಷಣೆ; ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ಪ್ರಜ್ವಲ್ ಪೆನ್​​ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದರಂತೆ ದಿನಕ್ಕೊಂದು ತಿರುವು ಕೂಡ ಪಡೆಯುತ್ತಿದೆ. ಈ ಕುರಿತು ಇಂದು(ಮೇ.08) ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ‘ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ. ಆತನನ್ನು ಡಿಕೆ ಶಿವಕುಮಾರ್​ ರಕ್ಷಣೆ ಮಾಡುತ್ತಿದ್ದಾರೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣ: ಬೆಂಗಳೂರಿನಲ್ಲೇ ಇದ್ದಾನೆ ಕಾರ್ತಿಕ್, ಡಿಕೆಶಿಯಿಂದಲೇ ರಕ್ಷಣೆ; ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
ಹೆಚ್​ಡಿ ಕುಮಾರಸ್ವಾಮಿ
Malatesh Jaggin
| Updated By: ಕಿರಣ್ ಹನುಮಂತ್​ ಮಾದಾರ್|

Updated on:May 08, 2024 | 3:25 PM

Share

ಬೆಂಗಳೂರು, ಮೇ.08: ಪ್ರಜ್ವಲ್ ಪೆನ್​​ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅದರಂತೆ ಈ ಕೇಸ್​ನಲ್ಲಿ ಪ್ರಮುಖವಾದ ಪ್ರಜ್ವಲ್​ ಮಾಜಿ ಕಾರು ಚಾಲಕ ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ. ಜೊತೆಗೆ ಆತನನ್ನ ಡಿಕೆ ಶಿವಕುಮಾರ್(DK Shivakumar)​ ರಕ್ಷಣೆ ಮಾಡುತ್ತಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ(H. D. Kumaraswamy) ಅವರು ಹೊಸ ಬಾಂಬ್​ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ನಿಮ್ಮ ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ಮೇಲೆ ಮಾತ್ರ ಯಾಕೆ ಟಾರ್ಗೆಟ್ ಆಗಿದೆ. ವಿಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಗೃಹ ಸಚಿವರಿಗೆ ಪ್ರಶ್ನಿಸಿದ್ದಾರೆ.

ಇನ್ನು ಎಸ್​ಐಟಿ ರಚನೆ ಆಗಿದೆ. ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು. ಆದ್ರೆ, ಇದುವರೆಗೂ ಏನು ಮಾಡಿಲ್ಲ. ನವೀನ್, ಕಾರ್ತಿಕ್, ಶ್ರೇಯಸ್ ನೋಟಿಸ್ ಕೊಟ್ಟಿಲ್ಲ, ರೇವಣ್ಣಗೆ ಮಾತ್ರ ನೋಟಿಸ್ ‌ಕೊಟ್ಟಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲೇ ಪ್ರಜ್ವಲ್​ ಮಾಜಿ ಡ್ರೈವರ್​ ಕಾರ್ತಿಕ್ ಇದ್ದಾನೆ. ನಾನು ಗಲಭೆಗೆ ಪ್ರಚೋದನೆ ಮಾಡೋದಿಲ್ಲ. ಕಾರ್ತಿಕ್​ನನ್ನು ಖಾಸಗಿ ಚಾನೆಲ್​ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮಿಸ್ಟರ್ ಪರಮೇಶ್ವರ ಏನ್ ಮಾಡ್ತಾ ಇದ್ದಾರೆ. ನುಗ್ಗಿಸಿ ಹೊಡೆಸೋದಿಲ್ಲ ಎಂದು ಸುಮ್ಮನೆ ಇದ್ದೀನಿ. 14 ವರ್ಷದಿಂದ ಕಾರ್ತಿಕ್​ ಕೆಲಸದಲ್ಲಿ ಇದ್ದವನು, ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಇದೀಗ ಬಂಡೆ ರಕ್ಷಣೆ ಮಾಡುತ್ತೆ ಎಂದು ಕಾಯ್ತಾ ಇದ್ದಾನೆ.

ಇದನ್ನೂ ಓದಿ:ಪ್ರಜ್ವಲ್ ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ಮಾಹಿತಿ ಇದ್ದಂತಿದೆ-HD ಕುಮಾರಸ್ವಾಮಿ

ಡಿಕೆ ಸಂಸ್ಕೃತಿ ಎಲ್ಲರಿಗೂ ಗೊತ್ತಾಗಿದೆ. ಡಿಕೆ ದೇವರಾಜೇಗೌಡ ಜೊತೆ ಯಾಕಪ್ಪ ಮಾತಾನಾಡಿದೆ ನೀನು..?. 5 ಜನ ಇಟ್ಟಕೊಂಡಿದ್ದೀನಿ ಎಂದು ಹೇಳಿದ್ದೀಯ ನೀನು, ನಿನಗೇನಿತ್ತು ಕೆಲಸ ಡಿಕೆ ?. ಪರಮೇಶ್ವರ ಮತ್ತು ಮುಖ್ಯಮಂತ್ರಿ  ಸಿದ್ದರಾಮಯ್ಯಗೆ ಮಾನಮರ್ಯಾದೆ ಇದೆಯಾ, ಎಸ್​ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಇದ್ಯಾ ಎಂದು ಕಿಡಿಕಾರಿದರು.  ಇನ್ನು ಪ್ರಜ್ವಲ್​ದು 2900 ಪ್ರಕರಣ ಅಂದಿದ್ದಾರೆ. ಇದೂವರೆಗೂ ಯಾವುದೇ ಕೇಸ್ ಆಗಿಲ್ಲ, ಎಷ್ಟು ಜನ ಬಂದಿದ್ದಾರೆ ಗೊತ್ತಿಲ್ಲ. ಸಂತ್ರಸ್ತೆಯನ್ನು ಇನ್ನೂ ಮಹಜರು ಮಾಡಿದ್ದಾರಾ?, ತೋಟದ ಮನೆಯಲ್ಲಿ ಅಲ್ಲೇ ಹಿಡಿದ್ರಾ, ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ, ಪವಿತ್ರ ಅವರ ಮನೆಯಿಂದ ಕರೆದುಕೊಂಡು ಬಂದಿದ್ದು, ಅವರನ್ನು ನಿಧಾನವಾಗಿ ಬಿಡ್ತಾರೆ. 12 ಜನರನ್ನು ಕುಮಾರಕೃಪದಲ್ಲಿ ಇಟ್ಟಿದ್ದಾರೆ.

ಇವಾಗ ಸಂತ್ರಸ್ಥೆಯರ ಮೇಲೆ ಯಾಕೆ ಅನುಕಂಪ

ಇನ್ನು ಹುಣಸೂರಿನಲ್ಲಿ ಸಿಡಿ ಬಿಡುವಾಗ ಮುಖ ತೋರಿಸಿದ್ದೀರಿ. ಈಗ ಅನುಕಂಪ ಇವಾಗ ತೋರಿಸ್ತಾ ಇದ್ದೀರಿ, ಈಗ ಯಾಕೆ ಅನುಕಂಪ ನಿಮ್ಮ ಯೋಗ್ಯತೆಗೆ, ನಾನು ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡ್ತೀನಿ. ಪ್ರಜ್ವಲ್ ರೇವಣ್ಣ ಬಗ್ಗೆ ಅಲ್ಲ, ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಅಂತ ಗೊತ್ತಿಲ್ಲ. ನೀವು ತೋರಿಸಿದ್ದಷ್ಟೇ ನಮಗೆ ಗೊತ್ತು. ಅದನ್ನು ಹೊರತು ಪಡಿಸಿ ಬೇರೆ ಏನು ಗೊತ್ತಿಲ್ಲ. 15 ತಾರೀಖು ಬರ್ತಾನೆ ಅಂತ ಹೇಳಿದ್ದಾರೆ ಬರ್ತಾನಾ ನೋಡೋಣ. ನಾಳೆ ಅದರ ಬಗ್ಗೆ ಉತ್ತರ ಕೊಡ್ತೀನಿ. ರೇವಣ್ಣ ಅವರ ಪರವಾಗಿ ಶಾಸಕಾಂಗ ಪಕ್ಷದ ನಾಯಕನಾಗಿ ಹೋರಾಟ ಮಾಡ್ತೀನಿ ಆದರೆ, ಸಂಬಂಧಿಯಾಗಿ ಅಲ್ಲ ಎಂದು ಖಡಕ್​ ಆಗಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Wed, 8 May 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ