Karnataka News Highlights: ವಿಪಕ್ಷ ನಾಯಕರ ಆಯ್ಕೆ ಸಂಬಂಧ ಕೇಂದ್ರದಿಂದ ಇಬ್ಬರು ವೀಕ್ಷಕರ ನೇಮಕ

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 02, 2023 | 10:42 PM

Karnataka Breaking News Highlights Updates: ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

Karnataka News Highlights: ವಿಪಕ್ಷ ನಾಯಕರ ಆಯ್ಕೆ ಸಂಬಂಧ ಕೇಂದ್ರದಿಂದ ಇಬ್ಬರು ವೀಕ್ಷಕರ ನೇಮಕ
ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ

ಕರ್ನಾಟಕದಲ್ಲಿ ಅನ್ನಭಾಗ್ಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರ ನೀಡಿದ ಭರವಸೆಯಂತೆ ಅಕ್ಕಿ ಕೊಡಲು ಮುಂದಾಗಿದ್ದರೂ ಅಕ್ಕಿ ಸಿಗದೆ ಪರದಾಡುತ್ತಿದೆ. ಈ ಹಿನ್ನೆಲೆ ಪ್ರತಿ ಕೇಜಿಗೆ 34 ರೂ. ರಂತೆ ಹಣ ನೀಡಲು ಮುಂದಾಗಿದೆ. ಇನ್ನು ಬಿಜೆಪಿ ಪಾಳಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ತು ರಾಜ್ಯಾಧ್ಯಕ್ಷನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಇಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪ್ಡೇಟ್ಸ್​​

LIVE NEWS & UPDATES

The liveblog has ended.
  • 02 Jul 2023 10:14 PM (IST)

    Karnataka News Live: ವೀಕ್ಷಕರು ನೀಡುವ ವರದಿ ಆಧರಿಸಿ ವಿಪಕ್ಷ ನಾಯಕರ ನೇಮಕ

    ವೀಕ್ಷಕರಾಗಿ ವಿನೋದ್​ ತಾವಡೆ, ಮನ್ಸುಖ್​ ಮಾಂಡವೀಯ ಬರಲಿದ್ದಾರೆ. ಶಾಸಕರ ಜೊತೆ ಚರ್ಚಿಸಿ ಎಲ್ಲಾ ವಿವರ ವರಿಷ್ಠರಿಗೆ ತಿಳಿಸಲಿದ್ದಾರೆ. ವೀಕ್ಷಕರು ನೀಡುವ ವರದಿ ಆಧರಿಸಿ ವಿಪಕ್ಷ ನಾಯಕರ ನೇಮಕ ಮಾಡಲಾಗುವುದು. ಇನ್ನೆರಡು ಮೂರು ದಿನಗಳಲ್ಲಿ ವಿಪಕ್ಷ ನಾಯಕರ ಆಯ್ಕೆಯಾಗಲಿದೆ. ಅಗತ್ಯವಿದ್ದರೆ ಮತ್ತೊಮ್ಮೆ ದೆಹಲಿಗೆ ಕರೆಸಿಕೊಳ್ಳುತ್ತೇವೆ ಎಂದಿದ್ದಾರೆ ಎಂದರು.

  • 02 Jul 2023 10:13 PM (IST)

    Karnataka News Live: ಅಮಿತ್ ಶಾ ಭೇಟಿ ಬಳಿಕ ಯಡಿಯೂರಪ್ಪ ಹೇಳಿದಿಷ್ಟು

    ಬಿಜೆಪಿ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಶಾ ಭೇಟಿಯಾಗಿದ್ದೇನೆ. ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ನವದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಪಕ್ಷ ನಾಯಕರ ಆಯ್ಕೆ ಸಂಬಂಧ ವೀಕ್ಷಕರನ್ನು ಕಳುಹಿಸುತ್ತಾರೆ. ಕೇಂದ್ರದಿಂದ ಇಬ್ಬರು ವೀಕ್ಷಕರು ನಾಳೆ ಬೆಂಗಳೂರಿಗೆ ಬರುತ್ತಾರೆ ಎಂದರು.

  • 02 Jul 2023 09:54 PM (IST)

    Karnataka News Live: ಜೆಪಿ ನಡ್ಡಾ ಜತೆ ಯಡಿಯೂರಪ್ಪ ಚರ್ಚೆ ಅಂತ್ಯ

    ದೆಹಲಿಯ ಮೋತಿಲಾಲ್​ ನೆಹರು ಮಾರ್ಗದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಯಡಿಯೂರಪ್ಪ ಚರ್ಚೆ ಅಂತ್ಯವಾಗಿದೆ. ವಿಧಾನಸಭೆ, ವಿಧಾನಪರಿಷತ್​ ವಿಪಕ್ಷ ನಾಯಕರ ಆಯ್ಕೆ ಸಂಬಂಧ ಚರ್ಚೆ ಮಾಡಿದ್ದು, ಜೆ.ಪಿ.ನಡ್ಡಾ ನಿವಾಸದಿಂದ ಯಡಿಯೂರಪ್ಪ ನಿರ್ಗಮಿಸಿದ್ದಾರೆ.

  • 02 Jul 2023 09:43 PM (IST)

    Karnataka News Live: ಜೆ.ಪಿ.ನಡ್ಡಾ ಮನೆಗೆ ತೆರಳಿದ ಯಡಿಯೂರಪ್ಪ

    ದೆಹಲಿಯ ಮೋತಿಲಾಲ್​ ನೆಹರು ಮಾರ್ಗದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ತೆರಳಿದ್ದಾರೆ. ವಿಧಾನಸಭೆ, ವಿಧಾನಪರಿಷತ್​ ವಿಪಕ್ಷ ನಾಯಕರ ಆಯ್ಕೆ ಸಂಬಂಧ ಚರ್ಚೆ ಮಾಡಲಿದ್ದಾರೆ.

  • 02 Jul 2023 09:04 PM (IST)

    Karnataka News Live: ಹಿಂಬಾಕಿ ಇದ್ದರೂ ದೊರಕಲಿದೆ ಗೃಹಜ್ಯೋತಿಯ ಪ್ರಯೋಜನ

    ಬೆಂಗಳೂರು: ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹ ಜ್ಯೋತಿ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್​ 30ರೊಳಗೆ ವಿದ್ಯುತ್​ ಬಾಕಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಜುಲೈ 25ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಆಗಸ್ಟ್​​ ಬಿಲ್​ನಲ್ಲಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

    Gruha Jyothi Scheme: ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು: ಬೆಸ್ಕಾಂ

  • 02 Jul 2023 08:31 PM (IST)

    Karnataka News Live: ಒಳ್ಳೆಯ ಬೆಳವಣಿಗೆ ಎಂದ ಬಿಎಸ್​ ಯಡಿಯೂರಪ್ಪ

    ಮಹಾರಾಷ್ಟ್ರದಲ್ಲಿ ವಿಪಕ್ಷ ನಾಯಕರಾಗಿದ್ದ ಅಜಿತ್ ಪವಾರ್​ ಎನ್​ಡಿಎ ಸರ್ಕಾರಕ್ಕೆ ಸೇರ್ಪಡೆಯಾಗಿರುವುದು  “ಬಹಳ ಒಳ್ಳೆಯ ಬೆಳವಣಿಗೆ” ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

  • 02 Jul 2023 08:06 PM (IST)

    Karnataka News Live: ಅಮಿತ್ ಶಾ ಜೊತೆಗಿನ ಬಿಎಸ್​ ಯಡಿಯೂರಪ್ಪ ಸಭೆ ವಿಳಂಬ

    ಅಮಿತ್ ಶಾ ಇನ್ನೊಂದು ಸಭೆಯಲ್ಲಿ ಭಾಗಿಯಾಗಿದ್ದರಿಂದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಜೊತೆಗಿನ ಸಭೆ ವಿಳಂಬವಾಗುತ್ತಿದೆ. ಆ ಸಭೆ ಬಳಿಕ ಕರೆಯುವುದಾಗಿ ಅಮಿತ್ ಶಾ ಹೇಳಿದ್ದು, ಹಾಗಾಗಿ ಪುತ್ರ ರಾಘವೇಂದ್ರ ನಿವಾಸಕ್ಕೆ ಬಿಎಸ್​ ಯಡಿಯೂರಪ್ಪ ವಾಪಾಸ್ ಬಂದಿದ್ದಾರೆ.

  • 02 Jul 2023 07:55 PM (IST)

    Karnataka News Live: ಅಮಿತ್ ಶಾ ನಿವಾಸದಿಂದ ತೆರಳಿದ ಮಾಜಿ ಸಿಎಂ ಯಡಿಯೂರಪ್ಪ

    ದೆಹಲಿಯ ಕೃಷ್ಣಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸದಿಂದ ಮಾಜಿ ಸಿಎಂ ಯಡಿಯೂರಪ್ಪ ಅವರು ಕೇವಲ 8 ನಿಮಿಷದಲ್ಲಿ ಚರ್ಚಿಸಿ ವಾಪಸ್ಸಾಗಿದ್ದಾರೆ.

  • 02 Jul 2023 07:32 PM (IST)

    Karnataka News Live: ಚಾಮರಾಜನಗರಕ್ಕೆ ಹೋದ್ರೆ ಸಿಎಂ ಸ್ಥಾನ ಹೋಗುತ್ತೆ ಅನ್ನೋದು ಮೂಢನಂಬಿಕೆ

    ಚಾಮರಾಜನಗರಕ್ಕೆ ಹೋದ್ರೆ ಸಿಎಂ ಸ್ಥಾನ ಹೋಗುತ್ತೆ ಅನ್ನೋದು ಮೂಢನಂಬಿಕೆ ಎಂದು ವಚನ ಸಂಸ್ಕೃತಿ ಅಭಿಯಾನ‌ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು. ಚಾಮರಾಜನಗರಕ್ಕೆ ಹಿಂದಿನ ಮುಖ್ಯಮಂತ್ರಿಗಳು ಹೋಗುತ್ತಿರಲಿಲ್ಲ. ಭೇಟಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಅಂತಾ ನಂಬಿದ್ದರು ಎಂದರು.

  • 02 Jul 2023 07:07 PM (IST)

    Karnataka News Live: ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡೋದು ಇನ್ನೂ ಸಾಕಷ್ಟು ಇದೆ

    ಬೆಂಗಳೂರು: ಶಾಲಾ ಪಠ್ಯ ಬದಲಾವಣೆಯಲ್ಲಿ ಹಿಂದಿನ ಸರ್ಕಾರವಿದ್ದ ವೇಳೆ ಏನೇನು ಅನಾಹುತವಾಗಿದೆ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದ್ದಾರೆ. ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ವಚನ ಸಂಸ್ಕೃತಿ ಅಭಿಯಾನ‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡೋದು ಇನ್ನೂ ಸಾಕಷ್ಟು ಇದೆ ಎಂದರು.

    ಶಾಲಾ ಪಠ್ಯದಲ್ಲಿ ಬದಲಾವಣೆ ಮಾಡುವುದು ಸಾಕಷ್ಟಿದೆ, ಹಿಂದಿನ ಸರ್ಕಾರದಲ್ಲಾದ ಅನಾಹುತ ಗೊತ್ತಿದೆ ಎಂದ ಸಾಣೇಹಳ್ಳಿಶ್ರೀ

  • 02 Jul 2023 06:29 PM (IST)

    Karnataka News Live: ಎಷ್ಟು ಮಸೂದೆಗಳು ಮಂಡನೆ ಆಗಲಿದೆ ಎಂದು ನಾಳೆ ಗೊತ್ತಾಗಲಿದೆ

    ನಾಳೆಯಿಂದ ಜು.14ರವರೆಗೆ ವಿಧಾನಮಂಡಲ​ ಅಧಿವೇಶನ ನಡೆಯುತ್ತೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ನಾಳೆ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಎಷ್ಟು ಮಸೂದೆಗಳು ಮಂಡನೆ ಆಗಲಿದೆ ಎಂದು ನಾಳೆ ಗೊತ್ತಾಗಲಿದೆ. ಅಧಿವೇಶನ ಸೌಹಾರ್ದಯುತವಾಗಿ ನಡೆಸಬೇಕು ಎಂದರು.

  • 02 Jul 2023 06:24 PM (IST)

    Karnataka News Live: ವೀಕೆಂಡ್​ನಲ್ಲಿ ಆದಿಯೋಗಿ ನೋಡಲು ಆಗಮಿಸಿರುವ ಸಾವಿರಾರು ಜನ

    ವೀಕೆಂಡ್​ನಲ್ಲಿ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಬಳಿಯ ಆದಿಯೋಗಿ ನೋಡಲು ಸಾವಿರಾರು ಜನ ಆಗಮಿಸಿದ್ದಾರೆ. ಬಸ್, ಕಾರು ಹಾಗೂ ಬೈಕ್​​ ಸೇರಿದಂತೆ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆ ಆದಿಯೋಗಿ ದರ್ಶನಕ್ಕಾಗಿ ಸಾವಿರಾರು ಮಹಿಳೆಯರು ಆಗಮಿಸಿದ್ದು, ಜನಸಂದಣಿ ನಿಭಾಯಿಸಲು ಸ್ವಯಂ ಸೇವಕರ ಹರಸಾಹಸ ಪಟ್ಟಿದ್ದಾರೆ.

  • 02 Jul 2023 05:46 PM (IST)

    Karnataka News Live: ಕಾಂಗ್ರೆಸ್ ವಿರೋಧ ಮಾಡುತ್ತಾ ಬಂದಿದ್ದೇನೆ

    ಜಯಪ್ರಕಾಶ ನಾರಾಯಣ​ ಕಾಲದಲ್ಲಿ ನಾವು ಹೋರಾಟ ಮಾಡಿದವರು. ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡುತ್ತಾ ಬಂದಿದ್ದೇನೆ. ಕಾಂಗ್ರೆಸ್​ ಸೇರುತ್ತೇನೆ ಅಂತಾ ಕಾರ್ಯಕರ್ತರು ತಲೆಕೆಡಿಸಿಕೊಂಡಿದ್ದರು ಎಂದು ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

  • 02 Jul 2023 05:25 PM (IST)

    Karnataka News Live: ಕಾಂಗ್ರೆಸ್​ ಪಕ್ಷಕ್ಕೆ ಹೋಗುವಂತಹ ದುಃಸ್ಥಿತಿ ನನಗೇನು ಬಂದಿದೆ

    ಕಾಂಗ್ರೆಸ್​ ಪಕ್ಷಕ್ಕೆ ಹೋಗುವಂತಹ ದುಃಸ್ಥಿತಿ ನನಗೇನು ಬಂದಿದೆ ಎಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ ಹೇಳಿದರು. ನಾನೇ ಕಾಂಗ್ರೆಸ್ ಸಿದ್ಧಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರ್ತಿನಾ ಎಂದು ಪ್ರಶ್ನಿಸಿದರು.

  • 02 Jul 2023 04:52 PM (IST)

    Karnataka News Live: ನನ್ನನ್ನು ಯಾರೂ ಟಾರ್ಗೆಟ್​ ಮಾಡಿಲ್ಲ

    ನನ್ನನ್ನು ಯಾರೂ ಟಾರ್ಗೆಟ್​ ಮಾಡಿಲ್ಲ, ನನಗೆ ಎಲ್ಲಾ ಗೌರವ ಸಿಕ್ಕಿದೆ. ಕೇಂದ್ರದ ನಾಯಕರು ನನ್ನ ಜತೆ ಒಳ್ಳೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ನವದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

  • 02 Jul 2023 04:34 PM (IST)

    Karnataka News Live: ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತ ಇಲ್ಲ

    ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತ ಇಲ್ಲ ಎಂದು ನವದೆಹಲಿಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಯಾರೂ ಪಕ್ಷದ ನಾಯಕರ ವಿರುದ್ಧ ಮಾತನಾಡಬೇಡಿ ಎಂದಿದ್ದೇವೆ. ಎಲ್ಲವೂ ಸರಿ ಹೋಗುತ್ತೆ, ನಾವು ಸರಿ ಮಾಡುತ್ತೇವೆ. M.P.ರೇಣುಕಾಚಾರ್ಯ ಮಾತಿಗೆ ಪ್ರತಿಕ್ರಿಯೆ ಕೊಡಲು ಇಷ್ಟಪಡಲ್ಲ ಎಂದು ಹೇಳಿದರು.

  • 02 Jul 2023 03:56 PM (IST)

    Karnataka News Live: ಯಾರೆಲ್ಲ ವಂಚಿತರಾಗಿದ್ದಾರೋ ಅವರಿಗೆಲ್ಲ ನ್ಯಾಯ ದೊರಕಬೇಕು

    ಕಾನೂನುಬದ್ಧವಾಗಿ ಜಾತಿಗಣತಿ ಮಾಡುವಂತೆ ಸೂಚನೆ ನೀಡುತ್ತೇನೆ. ಯಾರೆಲ್ಲ ವಂಚಿತರಾಗಿದ್ದಾರೋ ಅವರಿಗೆಲ್ಲ ನ್ಯಾಯ ದೊರಕಬೇಕು. ನನಗೆ ಎರಡನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. 5 ಗ್ಯಾರಂಟಿಗಳ ಜೊತೆಗೆ ಬೇರೆ ಭರವಸೆಗಳನ್ನು ಕೂಡ ಕೊಟ್ಟಿದ್ದೇನೆ. ಗ್ಯಾರಂಟಿ ಬಗ್ಗೆ ರಾಜಕೀಯಕ್ಕಾಗಿ ಕೆಲವರು ಟೀಕೆ ಮಾಡಬಹುದು. 2013ರಲ್ಲಿ 6 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

  • 02 Jul 2023 03:30 PM (IST)

    Karnataka News Live: ಆಗಸ್ಟ್ 16ರಿಂದ ‘ಗೃಹಲಕ್ಷ್ಮೀ’ ಯೋಜನೆ ಜಾರಿಯಾಗಲಿದೆ

    ಆಗಸ್ಟ್ 16ರಿಂದ ‘ಗೃಹಲಕ್ಷ್ಮೀ’ ಯೋಜನೆ ಜಾರಿಯಾಗಲಿದೆ. ಪ್ರತಿ ಕುಟುಂಬದ ಮಹಿಳಾ ಯಜಮಾನಿ ಖಾತೆಗೆ ಹಣ ಹಾಕುತ್ತೇವೆ. ನಾವು ನುಡಿದಂತೆ ನಡೆಯುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ. ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ನನ್ನ ಹೆಂಡ್ತಿ ಹೋಗ್ಬಹುದು, ಈಶ್ವರಪ್ಪ ಮನೆಯವರೂ ಹೋಗಬಹುದು ಎಂದರು.

  • 02 Jul 2023 03:19 PM (IST)

    Karnataka News Live: ರಾತ್ರಿ ಎಂಟು ಗಂಟೆಗೆ ಬಿಎಸ್​ ಯಡಿಯೂರಪ್ಪ ಮೀಟಿಂಗ್ ಫಿಕ್ಸ್!

    ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ದೆಹಲಿಗೆ ಹಾರಿದ್ದು, ರಾತ್ರಿ ಎಂಟು ಗಂಟೆಗೆ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಮೀಟಿಂಗ್​ ಫಿಕ್ಸ್​ ಆಗಿದೆ. ಸಭೆಯಲ್ಲಿ ಜೆ‌.ಪಿ ನಡ್ಡಾ ಭಾಗಿಯಾಗಲಿದ್ದಾರೆ.

  • 02 Jul 2023 02:53 PM (IST)

    Karnataka News Live: 5 ಕೆಜಿ ಅಕ್ಕಿ ಬದಲು ಹಣ: ಸಿದ್ದರಾಮಯ್ಯ

    ಅನ್ನಭಾಗ್ಯ ವಿಳಂಬ ಆಯ್ತು, ಅದಕ್ಕೆ ಹಣ ಕೊಡಲು ಹೇಳಿದ್ದೇನೆ. 5 ಕೆಜಿ ಅಕ್ಕಿ ಬದಲು ಹಣ ನೀಡಲು ಹೇಳಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕೇಂದ್ರ ಕೊಡಲಿಲ್ಲ, ಅದಕ್ಕೆ ಓಪನ್ ಮಾರ್ಕೆಟ್​ನಲ್ಲಿ‌ ಅಕ್ಕಿ ಖರೀದಿ ಮಾಡುತ್ತೇವೆ ಎಂದು ಹೇಳಿದರು.

  • 02 Jul 2023 02:34 PM (IST)

    Karnataka News Live: ವಿಪಕ್ಷನಾಯಕನ ಆಯ್ಕೆಗೆ ಇಂದೆ ಮಹೂರ್ಥ ಫಿಕ್ಸ್..!

    ವಿಪಕ್ಷನಾಯಕನ ಆಯ್ಕೆಗೆ ಇಂದೆ ಮಹೂರ್ಥ ಫಿಕ್ಸ್​ ಆಗುವ ಸಾಧ್ಯತೆ ಇದೆ. ವಿಪಕ್ಷನಾಯಕನ ಆಯ್ಕೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಲಹೆಯನ್ನು ಹೈಕಮಾಂಡ್ ಪಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನಡ್ಡಾ ನಿವಾಸದಲ್ಲಿ ಸಭೆ ನಡೆಯಲಿದೆ.

  • 02 Jul 2023 01:20 PM (IST)

    Kannada News Live: ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ 8 ರಾಜ್ಯಗಳ ಸಿಎಂ ಮಾತಾಡಿದ್ರು- ನಿರಂಜನಾನಂದಪುರಿಶ್ರೀ

    ಬೆಂಗಳೂರು: ಕುರುಬ ಸಮಾಜದ ವ್ಯಕ್ತಿ ಸಿಎಂ ಆಗಬೇಕು ಎಂಬುವುದರಲ್ಲಿ ಏನಿಲ್ಲ. ಸಿದ್ದರಾಮಯ್ಯ ಪರ 8 ರಾಜ್ಯಗಳ ಮುಖ್ಯಮಂತ್ರಿಗಳು ಮಾತಾಡಿದರು. ಸಿದ್ದರಾಮಯ್ಯ ಸಿಎಂ ಆಗಬೇಕು ಅಂದ್ರಲ್ಲ ಅದು ಕುರುಬರ ಗತ್ತು ಎಂದು ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಿರಂಜನಾನಂದಪುರಿಶ್ರೀ ಹೇಳಿದ್ದಾರೆ.

  • 02 Jul 2023 01:03 PM (IST)

    Kannada News Live: ಹಳ್ಳದಲ್ಲಿ ಈಜುಲು ಹೋಗಿ ಇಬ್ಬರು ಬಾಲಕರು ನೀರು ಪಾಲು

    ಮಂಡ್ಯ: ಜಿಲ್ಲೆಯ ಮದ್ದೂರು‌ ನಗರದ ಮದ್ದೂರಮ್ಮ ದೇವಾಲಯದ ಹಿಂಭಾಗದ ಹಳ್ಳದಲ್ಲಿ ಈಜುಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

  • 02 Jul 2023 12:19 PM (IST)

    Kannada News Live: ಇಂದು ಸ್ವಪಕ್ಷದ ಶಾಸಕರ ಸಭೆ ಕರೆದ ಹೆಚ್ ಡಿ ಕುಮಾರಸ್ವಾಮಿ

    ಬೆಂಗಳೂರು: ನಾವು ಹೇಗೆ ಸಂಘಟನೆ ಮಾಡಬೇಕು, ಅಧಿವೇಶನದಲ್ಲಿ ನಮ್ಮ ಪಕ್ಷದ ನಿಲುವೇನು. ಸರ್ಕಾರದ ನಡವಳಿಕೆಯಿಂದ ಜನರ ಅಭಿಪ್ರಾಯ ಏನು. ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಇಂದು (ಜುಲೈ.02) ಇಂದು ಸಭೆ ಕರೆಯಲಾಗಿದೆ. ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು. ನಾನು ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

  • 02 Jul 2023 12:16 PM (IST)

    Kannada News Live: ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ: ಕಾಂಗ್ರೆಸ್​ ವಿರುದ್ಧ ಬಿಜೆಪಿ ಪ್ರತಿಭಟನೆ

    ಬೆಂಗಳೂರು: ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ನಾವು ಹೋರಾಟ ಮಾಡುತ್ತೇವೆ. ಗ್ಯಾರಂಟಿ ಆಧಾರದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕೊಟ್ಟು ಮಾತು ತಪ್ಪಿದೆ. ಹೀಗಾಗಿ ಬಿಜೆಪಿ ಸದನದ ಹೊರಗಡೆ ಮತ್ತು ಒಳಗಡೆ ಹೊರಟ ಮಾಡಲಿದೆ. ಸದನದ ಹೊರಗಡೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹೋರಾಟ ಮಾಡಲಿದ್ದಾರೆ. ಬಿಎಸ್​ ಯಡಿಯೂರಪ್ಪ ಅವರು ಫ್ರೀಡಂ ಪಾರ್ಕ್​ನಲ್ಲಿ ಜುಲೈ 4 ರಂದು ಪ್ರತಿಭಟನೆ ಮಾಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್​ ನಾರಾಯಣ್ ಹೇಳಿದ್ದಾರೆ.

  • 02 Jul 2023 10:55 AM (IST)

    Kannada News Live: ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ

    ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಿರಿಸಿದ್ದೇವೆ. ನಾಡಿದ್ದು ಸಾವಿರಾರು ಕಾರ್ಯಕರ್ತರ ಜತೆ ಪ್ರತಿಭಟನೆ ನಡೆಸುತ್ತೇವೆ. ಗ್ಯಾರಂಟಿ ಅನುಷ್ಠಾನದ ಬಗ್ಗೆ ಬಿಜೆಪಿಯಿಂದ ಪ್ರತಿಭಟನೆ ನಡೆಸುತ್ತೇವೆ. ಪ್ರತಿಭಟನೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ‌ ಪಿ ನಡ್ಡಾ ದೆಹಲಿಗೆ ಬರಲು ಹೇಳಿದ್ದಾರೆ.  ವಿಷಯ ಏನು ಅಂತ ಗೊತ್ತಿಲ್ಲ. ಹೋಗಿ ಮಾತಾಡಿ ಸಾಧ್ಯ ಆದರೆ ಇಂದೇ ಬರುತ್ತೇನೆ. ನಾಡಿದ್ದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಹೀಗಾಗಿ ಅದರಲ್ಲಿ ಭಾಗವಹಿಸಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

  • 02 Jul 2023 10:21 AM (IST)

    Kannada News Live: ಹೈಕಮಾಂಡ್​​ ಬಳಿ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ

    ಬೆಂಗಳೂರು: ಹೈಕಮಾಂಡ್​​ ಬಳಿ ಯಾವುದೇ ಹುದ್ದೆಗೆ ಬೇಡಿಕೆ ಇಟ್ಟಿಲ್ಲ. ಪಕ್ಷ ನನ್ನ ನಡವಳಿಕೆ, ಶಕ್ತಿ ಬಗ್ಗೆ ತಿಳಿದುಕೊಂಡಿದೆ. ಹಿಂದೆ ಕೂಡ ಗೃಹ ಸಚಿವ ಸ್ಥಾನಕ್ಕೂ ನಾನು ಬೇಡಿಕೆ ಇಟ್ಟಿರಲಿಲ್ಲ. ಪಕ್ಷ ಜವಾಬ್ದಾರಿ ನೀಡಿದರೂ, ನೀಡದಿದ್ದರೂ ಪಕ್ಷದ ಕೆಲಸ ಮಾಡುವೆ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

  • 02 Jul 2023 09:55 AM (IST)

    Kannada News Live: ದೆಹಲಿಗೆ ತೆರಳಿದ ಮಾಜಿ ಸಿಎಂ ಯಡಿಯೂರಪ್ಪ

    ಬೆಂಗಳೂರು: ವಿಪಕ್ಷ ನಾಯಕ ಆಯ್ಕೆ ಸಂಬಂಧ ಇಂದು (ಜು.02) ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿದ್ದಾರೆ.

  • 02 Jul 2023 09:41 AM (IST)

    Kannada News Live: ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧದ ಮಧ್ಯೆಯೂ ಹರಿದು ಬಂದ ಜನ

    ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧದ ಮಧ್ಯೆಯೂ ಜನರು ಆಗಮಿಸಿದ್ದಾರೆ. ನಾಳೆ (ಜು.02) ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಹಿನ್ನೆಲೆ ಇಂದಿನಿಂದ 2 ದಿನ ನಂದಿಬೆಟ್ಟ, ಸ್ಕಂದಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.  ಪ್ರವೇಶ ನಿರ್ಬಂಧ ಬಗ್ಗೆ ಮಾಹಿತಿ ಇಲ್ಲದೇ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗರನ್ನು ವಾಪಸ್ ಕಳುಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

  • 02 Jul 2023 09:19 AM (IST)

    Kannada News Live: ಕರ್ನಾಟಕ ಮುಕ್ತ ವಿವಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಗೌರವ ಡಾಕ್ಟರೇಟ್

    ಮೈಸೂರು: ಇಂದು (ಜೂ.02) ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ನಡೆಯಲಿದ್ದು, ರಾಷ್ಟ್ರಪತಿ ದ್ರೌಪತಿ ಮುರ್ಮು ಸೇರಿದಂತೆ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಶಿಕ್ಷಣ ತಜ್ಞರಾದ ಎನ್ ರಾಮಚಂದ್ರಯ್ಯ ಹಾಗೂ ವೆಂಕಟ ಲಕ್ಷ್ಮಿ ನರಸಿಂಹರಾಜು ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಇಂದು ಬೆಳಗ್ಗೆ 11 ಗಂಟೆಗೆ ವಿವಿಯ ಘಟಿಕೋತ್ಸವ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ.

  • 02 Jul 2023 09:09 AM (IST)

    Kannada News Live: ಟೋಲ್ ಸಿಬ್ಬಂದಿ ಜೊತೆ ವಾಹನ ‌ಸವಾರರ ಮಾತಿನ ಚಕಮಕಿ

    ಮಂಡ್ಯ: ನೂತನ ದಶಪಥ ರಸ್ತೆಯ ಶ್ರೀರಂಗಪಟ್ಟಣ ‌ತಾಲೂಕಿನ ಗಣಂಗೂರು ಟೋಲ್ ಪ್ಲಾಜಾ ಬಳಿ ಎರಡನೇ ಹಂತದ ಟೋಲ್ ಸಂಗ್ರಹ ಆರಂಭವಾಗಿದೆ.  ಟೋಲ್ ಪ್ಲಾಜಾ ಬಳಿ ಡಿಎಆರ್ ವಾಹನ ನಿಯೋಜನೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಟೋಲ್ ದರ ವಿರೋಧಿಸಿ ನಿನ್ನೆ (ಜೂ.1) ರಂದು ಕನ್ನಡಪರ ಸಂಘಟನೆ ಕಾರ್ಯಕರ್ತರು  ಪ್ರತಿಭಟನೆ ನಡೆಸಿದ್ದರು. ಇಂದು (ಜೂ.02) ಟೋಲ್ ಪ್ಲಾಜಾದಲ್ಲಿ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದೆ. ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗಲು ವಿಳಂಬವಾಗುತ್ತಿದೆ. ಇದರಿಂದ ಟೋಲ್ ಪ್ಲಾಜಾದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಹೀಗಾಗಿ ಟೋಲ್ ಸಿಬ್ಬಂದಿ ಜೊತೆ ವಾಹನ ‌ಸವಾರರ ಮಾತಿನ ಚಕಮಕಿ ನಡೆದಿದೆ.

  • 02 Jul 2023 08:21 AM (IST)

    Kannada News Live: ಬಾರದ ಮಳೆ, ಕುಡಿಯುವ ನೀರಿಗಾಗಿ ಜನರ ಹಾಹಾಕಾರ

    ಯಾದಗಿರಿ: ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಭೀಕರ ಬರ ಎದುರಾಗಿದ್ದಕ್ಕೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಗ್ರಾಮಕ್ಕೆ ಬೋರವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮಳೆ ಬಾರದ್ದಕ್ಕೆ ಅಂತರ್ಜಲ ಕುಸಿತವಾಗಿ ಬೋರವೆಲ್ ಬತ್ತಿ ಹೋಗಿವೆ. ಬೋರವೆಲ್​ಗಳು ಬತ್ತಿ ಹೋಗಿದ್ದಕ್ಕೆ ಪಂಚಾಯಿತಿ ಅಧಿಕಾರಿಗಳು ಟ್ಯಾಂಕರ್ ಮೂಲಕ ಅಲ್ಪ ಸ್ವಲ್ಪ ನೀರು ಪೂರೈಸುತ್ತಿದ್ದಾರೆ. ಕಳೆದ 15 ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

  • Published On - Jul 02,2023 8:19 AM

    Follow us
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ