AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ತಹಶೀಲ್ದಾರ್ ಅಜಿತ್ ರೈ ಕೋಟಿ ಒಡೆಯ, ಇಲ್ಲಿದೆ ಮನೆಯಲ್ಲಿ ಸಿಕ್ಕ ವಸ್ತುಗಳ ವಿವರ

ಐಷಾರಾಮಿ, ವೈಭೋಗದ ಜೀವನ ನಡೆಸಿದ್ದ ಅಜಿತ್ ರೈ ಮನೆಯಲ್ಲಿ ಲಕ್ಸುರಿ ವಸ್ತುಗಳು ಪತ್ತೆಯಾಗಿವೆ. ಇದನ್ನು ಕಂಡು ಅಧಿಕಾರಿಗಳೇ ಥಂಡಾ ಹೊಡೆದಿದ್ದಾರೆ.

ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ತಹಶೀಲ್ದಾರ್ ಅಜಿತ್ ರೈ ಕೋಟಿ ಒಡೆಯ, ಇಲ್ಲಿದೆ ಮನೆಯಲ್ಲಿ ಸಿಕ್ಕ ವಸ್ತುಗಳ ವಿವರ
ತಹಶೀಲ್ದಾರ್ ಅಜಿತ್ ರೈ
TV9 Web
| Edited By: |

Updated on: Jul 02, 2023 | 9:43 AM

Share

ಬೆಂಗಳೂರು: ತಹಶೀಲ್ದಾರ್ ಅಜಿತ್ ಕುಮಾರ್ ರೈ ಮೇಲಿನ‌ ಲೋಕಾಯುಕ್ತ ಪ್ರಕರಣದಲ್ಲಿ ಯಾರೂ ಊಹಿಸಲಾಗದಷ್ಟು ಸತ್ಯಗಳು ಹೊರ ಬರ್ತಿವೆ. ಅನುಕಂಪದ ಅಧಾರದಲ್ಲಿ ಹುದ್ದೆ ಗಿಟ್ಟಿಸಿದ್ದ ವ್ಯಕ್ತಿಯೊಬ್ಬ ಈ ಪರಿ ಅಕ್ರಮ ಸಂಪತ್ತು ಮಾಡಬಹುದಾ ಎಂದು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಸಲಿಗೆ ಅಜಿತ್ ರೈ ಮನೆಯಲ್ಲಿ ಏನೇನು ಸಿಕ್ತು? ಅಜಿತ್ ರೈ ಮನೆಯಲ್ಲಿ ಸಿಕ್ಕ ವಸ್ತುಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಐಷಾರಾಮಿ, ವೈಭೋಗದ ಜೀವನ ನಡೆಸಿದ್ದ ಅಜಿತ್ ರೈ ಮನೆಯಲ್ಲಿ ಲಕ್ಸುರಿ ವಸ್ತುಗಳು ಪತ್ತೆಯಾಗಿವೆ. ಇದನ್ನು ಕಂಡು ಅಧಿಕಾರಿಗಳೇ ಥಂಡಾ ಹೊಡೆದಿದ್ದಾರೆ. ಬ್ರಾಂಡೆಡ್ ವಾಚ್​​ಗಳು, ಸಾವಿರಾರು ರೂಪಾಯಿಯ ಚಪ್ಪಲಿಗಳು, ಐಷಾರಾಮಿ ವಸ್ತುಗಳು ಮನೆಯಲ್ಲಿ ಸಿಕ್ಕಿವೆ. ಅಜಿತ್ ರೈ ಹಾಲ್​ನಲ್ಲಿ ಬರೋಬ್ಬರಿ 4.53 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಸ್ಮಾರ್ಟ್ ಟಿವಿ, ಹೋಂ ಥಿಯೇಟರ್, ಸೋಫಾ ಸೆಟ್ ಸೇರಿ 4.53 ಲಕ್ಷ ಮೌಲ್ಯದ ವಸ್ತುಗಳು ಸಿಕ್ಕಿವೆ. ಮಕ್ಕಳ ಸ್ಟಡಿ ರೂಂನಲ್ಲಿ 3.81 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಜಿಮ್ ಇಕ್ವಿಪ್ಮೆಂಟ್ಸ್, ಲ್ಯಾಪ್ ಟಾಪ್, ಯೋಗ ಮ್ಯಾಟ್ ಸೇರಿ ಸುಮಾರು 35 ತರದ ವಸ್ತುಗಳು ಸಿಕ್ಕಿವೆ. ಇಬ್ಬರು ಮಕ್ಕಳ ಬೆಡ್ ರೂಂನಲ್ಲಿ 1.26 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ ಬರೆ, ಬ್ಯಾಗ್​ಗಳು ಸಿಕ್ಕಿವೆ.

ಇದನ್ನೂ ಓದಿ:Lokayukta: ಕುಬೇರ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು

ತಹಶೀಲ್ದಾರ್ ಅಜಿಲ್ ಬೆಡ್ ರೂಂನಲ್ಲಿ 4.28 ಲಕ್ಷ ಮೌಲ್ಯದ ವಸ್ತುಗಳು ಪತ್ತೆ

ಎಸಿ, ಟಿವಿ, ಬಟ್ಟೆ ಬರೆ ಬ್ಯಾಗ್ ಗಳು ಸೇರಿ ತಹಶೀಲ್ದಾರ್ ಅಜಿಲ್ ಬೆಡ್ ರೂಂನಲ್ಲಿ 4.28 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಯಲ್ಲಿ 5.83 ಲಕ್ಷ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದು 50 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ. ಒಂದು ಕಡ 100 ಗ್ರಾಂ, 183 ಗ್ರಾಂ ತೂಕದ ಚೈನ್, 108 ಗ್ರಾಂ ಲಾಂಗ್ ಚೈನ್, ಮುತ್ತಿನ ಹಾರ, ಉಂಗುರ, ಬ್ರಾಸ್ ಲೇಟ್ ಸೇರಿ 795 ಗ್ರಾಂ ಚಿನ್ನಾಭರಣ ಹಾಗೂ ಅದೇ ರೀತಿ 7ಕೆಜಿ 520 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ. ಮೂರು ರ್ಯಾಡೋ, ಮೆಸಾರಿಟಿ, ಟೈಟಾನ್, ಟೆಸ್ಲಾಟ್, ಸಿಕೋ ಕಂಪನಿಯ ಒಟ್ಟು 7.63 ಲಕ್ಷ ಮೌಲ್ಯದ 27 ವಾಚ್​ಗಳು ಸಿಕ್ಕಿವೆ. ಅಜಿತ್ ರೈ ಹಾಗೂ ಪತ್ನಿ ಹೆಸರಲ್ಲಿ ಮೂರು ಬ್ಯಾಂಕ್ ಖಾತೆಗಳಿದ್ದು ಒಟ್ಟು 16 ಮೊಬೈಲ್ ಫೋನ್ ಪತ್ತೆಯಾಗಿದೆ. 16 ಮೊಬೈಲ್​ನಲ್ಲಿ 9 ಬಳಕೆಯಲ್ಲಿವೆ.

ಚಾಲನೆಯಲ್ಲಿ ಇರದ ಫೋನ್ ಹೊರತುಪಡಿಸಿ ಐದು ಫೋನ್ ಸೀಜ್ ಮಾಡಲಾಗಿದೆ. ಸುಮಾರು 70 ಸಾವಿರ ಮೌಲ್ಯದ ವಿವಿಧ ಕಂಪನಿಗಳ ಬ್ರಾಂಡೆಡ್ ಶೂಗಳು ಸಿಕ್ಕಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ವಸ್ತುಗಳ ಪಂಚನಾಮೆ ಮಾಡಿದ್ದಾರೆ. ಇಬ್ಬರು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಿ ಮಹಜರು ಹಾಕಲಾಗಿದೆ. ಕೆಲವು ಅಗತ್ಯ ವಸ್ತುಗಳನ್ನ ವಶಕ್ಕೆ ಪಡೆದು ಉಳಿದವು ವಾಪಸ್ ನೀಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳಿಂದ ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ