AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡದ ಹಿನ್ನೆಲೆ: ವಿಧೇಯಕ ಮಂಡನೆಗೆ ಸಭಾಪತಿ ನಿರಾಕರಣೆ

ಸದನದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ವಿಧೇಯಕಗಳ ಮಂಡನೆ ಇದ್ದರೂ ಕುರುಬ ಮೀಸಲಾತಿ ಪಾದಯಾತ್ರೆ ಸ್ವಾಗತಕ್ಕಾಗಿ ಸಚಿವ ಎಂಟಿಬಿ ನಾಗರಾಜ್ ಮತ್ತು ಭೈರತಿ ಬಸವರಾಜ ಹೊರ ಹೋಗಿದ್ದರು.

ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡದ ಹಿನ್ನೆಲೆ: ವಿಧೇಯಕ ಮಂಡನೆಗೆ ಸಭಾಪತಿ ನಿರಾಕರಣೆ
TV9 Web
| Updated By: ganapathi bhat|

Updated on:Apr 06, 2022 | 8:15 PM

Share

ಬೆಂಗಳೂರು: ಪೂರ್ವ ನಿಗದಿಯಂತೆ ವಿಧೇಯಕ ಮಂಡನೆಗೆ ಸದನಕ್ಕೆ ಬಾರದ ಸಚಿವರ ನಡತೆಯ ಬಗ್ಗೆ ಸಭಾಪತಿ ವಿಶ್ವೇಶ್ವರ ಹಗೆಡೆ ಕಾಗೇರಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಬುಧವಾರ ನಡೆಯಿತು.

ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಭೈರತಿ ಬಸವರಾಜ್ ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವಿಧೇಯಕಗಳನ್ನು ಮಂಡಿಸಬೇಕಿತ್ತು. ಆದರೆ ಅವರಿಬ್ಬರೂ ಕುರುಬ ಮೀಸಲಾತಿ ಪಾದಯಾತ್ರೆ ಸ್ವಾಗತಿಸಲೆಂದು ಸದನಕ್ಕೆ ಗೈರು ಹಾಜರಾಗಿದ್ದರು. ಈ ಕುರಿತು ಸ್ಪೀಕರ್​ಗೆ ಮಾಹಿತಿಯನ್ನೂ ನೀಡಿರಲಿಲ್ಲ.

ಗೈರು ಹಾಜರಾಗಿದ್ದ ಸಚಿವರ ಪರವಾಗಿ ವಿಧೇಯಕ ಮಂಡನೆಗೆ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮುಂದಾದರು. ಆದರೆ ಸ್ಪೀಕರ್ ಅನುಮತಿ ನಿರಾಕರಿಸಿದರು. ಬೊಮ್ಮಾಯಿ ಈ ಸಂಬಂಧ ಮಾಡಿದ ಮನವಿಯನ್ನೂ ಸ್ಪೀಕರ್ ಪುರಸ್ಕರಿಸಲಿಲ್ಲ.

ಇಬ್ಬರೂ ಸಚಿವರು ಸದನಕ್ಕೆ ಗೈರಾಗುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು, ವಿಧಾನಸಭಾ ಸಭಾಪತಿ ವಿಧೇಯಕ ಮಂಡನೆಗೆ ಅವಕಾಶ ನಿರಾಕರಿಸಿದರು. ಸದನಕ್ಕೆ ಕಾರಣವಿಲ್ಲದೆ ಗೈರು ಹಾಜರಾಗುವುದನ್ನು ಸಹಿಸುವಿದಲ್ಲ ಎಂಬ ಸಂದೇಶವನ್ನೂ ಸ್ಪೀಕರ್ ಈ ಮೂಲಕ ರವಾನಿಸಿದರು.

Kannada News Live | ವಿಧಾನ ಪರಿಷತ್​ಗೆ ಸದಸ್ಯರು ಇನ್ನುಮುಂದೆ ಮೊಬೈಲ್ ತರುವಂತಿಲ್ಲ

Published On - 7:50 pm, Wed, 3 February 21