ಕೊವಿಡ್ ಚಿಕಿತ್ಸೆಗೆ ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆಯಿಂದ ಆರ್ಥಿಕ ನೆರವು

|

Updated on: May 28, 2021 | 10:07 PM

ಕರ್ನಾಟಕ ಒಲಿಂಪಿಕ್ ಸಂಸ್ಥೆ ಘೋಷಿಸಿರುವ ಯೋಜನೆಯಿಂದ ರಾಜ್ಯದ ಹಲವು ಕ್ರೀಡಾಪಟುಗಳಿಗೆ ಆರ್ಥಿನ ನೆರವು ದೊರೆಯಲಿದ್ದು, ಅಗತ್ಯವುಳ್ಳ ಮತ್ತು ಅರ್ಹ ಕ್ರೀಡಾಪಟುಗಳು ಮಾತ್ರ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. 

ಕೊವಿಡ್ ಚಿಕಿತ್ಸೆಗೆ ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆಯಿಂದ ಆರ್ಥಿಕ ನೆರವು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕೊವಿಡ್‌ ಸೋಂಕು ಪೀಡಿತ ಕ್ರೀಡಾಪಟುಗಳಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆ ನೆರವು ನೀಡಲು ಮುಂದಾಗಿದೆ. ಈಗಾಗಲೇ ಕೊವಿಡ್ ಸೋಂಕಿಗೆ ತುತ್ತಾಗಿರುವ ಹಲವು ಕ್ರೀಡಾಪಡುಗಳಿಗೆ ಸಂಸ್ಥೆ ಚಿಕಿತ್ಸೆಗಾಗಿ ಆರ್ಥಿಕ ನೆರವು ಒದಗಿಸಿದೆ. ಒಲಿಂಪಿಯನ್ ನಜೀಬ್‌ ಅಗಾ ಅವರ ಚಿಕಿತ್ಸೆಗೆ ₹ 1 ಲಕ್ಷ, ಪತಿ ಕಳೆದುಕೊಂಡು ಕಷ್ಟದಲ್ಲಿರುವ ಅರ್ಜುನ ಪ್ರಶಸ್ತಿ ಪುರಸ್ಕೃತ ತೇಜಸ್ವಿನಿ ಅವರಿಗೆ ₹ 1 ಲಕ್ಷ ಸಹಾಯ ಧನವನ್ನು ಕರ್ನಾಟಕ ಒಲಿಂಪಿಕ್ ಸಂಸ್ಥೆ ಘೋಷಿಸಿದೆ. ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಈ ಕುರಿತು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಒಲಿಂಪಿಕ್ ಸಂಸ್ಥೆ ಘೋಷಿಸಿರುವ ಯೋಜನೆಯಿಂದ ರಾಜ್ಯದ ಹಲವು ಕ್ರೀಡಾಪಟುಗಳಿಗೆ ಆರ್ಥಿನ ನೆರವು ದೊರೆಯಲಿದ್ದು, ಅಗತ್ಯವುಳ್ಳ ಮತ್ತು ಅರ್ಹ ಕ್ರೀಡಾಪಟುಗಳು ಮಾತ್ರ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.

ಹಳ್ಳಿಗಳಲ್ಲಿ ಕೊವಿಡ್ ತಡೆಯಲು ಸೂಚನೆ
ಸದ್ಯ ಜಾರಿಯಲ್ಲಿರುವ ಕಠಿಣ ನಿಯಮಗಳಿಂದ ನಗರಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ‌ ಇಳಿಕೆಯಾಗಿದೆ. ನಗರಗಳ ಜತೆಗೆ ಹಳ್ಳಿಗಳಲ್ಲಿ ಕೊವಿಡ್ ಸೋಂಕಿನ ಪ್ರಮಾಣ ಕಡಿಮೆ‌ ಮಾಡುವ ನಿಟ್ಟಿನಲ್ಲಿ ಒತ್ತು ನೀಡಬೇಕು. ವೈದ್ಯರ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಿದರು. ಎರಡು ದಿನಗಳಿಗೆ ಒಮ್ಮೆ ರಾಜ್ಯದಲ್ಲಿ ಕೊವಿಡ್ ನಿರ್ವಹಣೆಯ ಬಗ್ಗೆ ನಡೆಸುವ ತಮ್ಮ ಸಂಪುಟದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕೊವಿಡ್ ಸೋಂಕುಮುಕ್ತರಾದವರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗುವಾಗ ಶಿಷ್ಟಾಚಾರ ಪಾಲನೆಯಾಗಬೇಕು. ಬ್ಲ್ಯಾಕ್ ಫಂಗಸ್ ಔಷಧ ಎಲ್ಲೇ ಸಿಕ್ಕಿದರೂ ಖರೀದಿಸಬೇಕು ಎಂದು ಸಿಎಂ ಯಡಿಯೂರಪ್ಪ ತಮ್ಮ ಸಹೋದ್ಯೋಗಿಗಳಿಗೆ ನಿರ್ದೇಶನ ನೀಡಿದರು.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಯಿತು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವತ್ಥ್​ ನಾರಾಯಣ, ಸಚಿವರಾದ ಆರ್. ಅಶೋಕ್, ಅರವಿಂದ ಲಿಂಬಾವಳಿ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಕೊವಿಡ್ ಲಸಿಕೆ ಪೂರೈಸಲು ತೀರ್ಮಾನಿಸಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ

ಸಿನಿಮಾ ತೆರೆಗೆ ಬರುವ ಮೊದಲೇ ಕನ್ನಡದ ಹೀರೋ, ಡೈರೆಕ್ಟರ್​ ಇಬ್ಬರೂ ಕೊವಿಡ್​ಗೆ ಬಲಿ