Karnataka Public Holidays 2023: ಕರ್ನಾಟಕ ಸರ್ಕಾರದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ

| Updated By: Digi Tech Desk

Updated on: Nov 22, 2022 | 5:32 PM

ಕರ್ನಾಟಕ ರಾಜ್ಯ ಸರ್ಕಾರ 2023ನೇ ಸಾರ್ವತ್ರಿಕ ರಜಾದಿನವನ್ನು ಪ್ರಕಟ ಮಾಡಿದೆ. ನಿಗದಿತ ರಜಾದಿನ, ಎರಡು, ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆಯನ್ನು ಒಳಗೊಂಡಂತೆ ಸಾರ್ವತ್ರಿಕ ರಜಾದಿನದ ವೇಳಾಪಟ್ಟಿಯನ್ನು ಇಂದು ಪ್ರಕಟ ಮಾಡಿದೆ.

Karnataka Public Holidays 2023: ಕರ್ನಾಟಕ ಸರ್ಕಾರದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಲ್ಲಿದೆ
Karnataka Public Holidays 2023
Follow us on

ಬೆಂಗಳೂರು; ಕರ್ನಾಟಕ ರಾಜ್ಯ ಸರ್ಕಾರ 2023ನೇ ಸಾರ್ವತ್ರಿಕ ರಜಾದಿನವನ್ನು ಪ್ರಕಟ ಮಾಡಿದೆ. ನಿಗದಿತ ರಜಾದಿನ, ಎರಡು, ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆಯನ್ನು ಒಳಗೊಂಡಂತೆ ಸಾರ್ವತ್ರಿಕ ರಜಾದಿನದ ವೇಳಾಪಟ್ಟಿಯನ್ನು ಇಂದು ಪ್ರಕಟ ಮಾಡಿದೆ.

ಸಾರ್ವತ್ರಿಕ ರಜಾದಿನದ ವೇಳಾಪಟ್ಟಿ ಮತ್ತು ಅಧಿಸೂಚನೆ ಇಲ್ಲಿದೆ

ಮಕರ ಸಂಕ್ರಾಂತಿ (15.01.2023), ಬಸವ ಜಯಂತಿ/ಅಕ್ಷಯ ತೃತೀಯ (23.04.2023) ಮತ್ತು ನರಕ ಚತುರ್ದಶಿ (12.11.2023) ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (14.10.2023) ಹಾಗೂ ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ (22.04.2023) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (28.10.2023) ಸಾರ್ವತ್ರಿಕ ರಜಾದಿನದ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಕಛೇರಿಗಳು ಮುಚ್ಚಲಾಗುತ್ತದೆ. ಸರ್ಕಾರಿಯ ತ್ವರಿತ ಕೆಲಸಗಳನ್ನು ವಿಲೇವಾರಿ ಬಗ್ಗೆ ಆಯಾಯ ಇಲಾಖಾ ಮುಖ್ಯಸ್ಥರುಗಳು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಪಟ್ಟಿಯಲ್ಲಿ ಮುಸಲ್ಮಾನ ಸಮುದಾಯದ ಹಬ್ಬಗಳು ನಿಗಧಿತ ದಿನಾಂಕದಲ್ಲಿ ಇರದಿದ್ದಾರೆ. ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ್ ನೌಕರರಿಗೆ ಅವರ ಹಬ್ಬದಂದು ರಜೆಯನ್ನು ನೀಡಬಹುದು.

03.09.2023 (ಭಾನುವಾರ) ಕೈಲ್ ಮೂಹೂರ್ತ, 18.10.2023 (ಬುಧವಾರ) ತುಲಾ ಸಂಕ್ರಮಣ ಹಾಗೂ 28.11.2023 (ಮಂಗಳವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯಿಸುವಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಶಿಕ್ಷಣ ಇಲಾಖೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಚರ್ಚೆಯನ್ನು ನಡೆಸಿ ರಜಾ ದಿನಗಳ ಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ.

ಈಗಾಗಲೇ ಪ್ರಕಟನೆಯಲ್ಲಿ ತಿಳಿಸಿರುವಂತೆ ಸಾರ್ವತ್ರಿಕ ರಜಾ ದಿನಗಳ ಜೊತೆಗೆ ಸರ್ಕಾರಿ ನೌಕರರು ಎರಡು ದಿವಸ ಮೀರದಂತೆ 2023ನೇ ವರ್ಷದಲ್ಲಿ ಅಧಿಸೂಚನೆ-1ರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸರ್ಕಾರಿ ನೌಕರರ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು ಎಂದು ಪ್ರಕಟಣೆಯ ಸೂಚನೆಯಲ್ಲಿ ತಿಳಿಸಲಾಗಿದೆ.

01.01.2023 ದೇವರ ದಾಸಿಮಯ್ಯ ಜಯಂತಿ, ಕ್ರಿಸ್‌ಮಸ್ ಈವ್ 24.12.2023 ಭಾನುವಾರದಂದು ಹಾಗೂ ಸ್ಯಾಟರ್ ಡೇ 08.04.2023 ಎರಡನೇ ಶನಿವಾರದಂದು ಬರುತ್ತದೆ, ಈ ಕಾರಣದಿಂದ ಈ ದಿನವನ್ನು ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ.
14.04.2023 ಸೌರಮಾನ ಯುಗಾದಿ, 18.09.2023 ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ, ಸ್ವರ್ಣಗೌರಿ, ಸೋಮವಾರ ವರಸಿದ್ಧಿ ವಿನಾಯಕ ವ್ರತ ಹಾಗೂ ಅನಂತ ಪದ್ಮನಾಭ ವ್ರತ ಹಾಗೂ 28 .09. 2023 ಗುರುವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ಈ ದಿನವನ್ನು ನಮೂದಿಸಿಲ್ಲ ಎಂದು ಪ್ರಕಟಣೆ ಹೇಳಿದೆ.

Published On - 2:44 pm, Mon, 21 November 22