
ಅರಬ್ಬಿ ಸಮುದ್ರದಲ್ಲಿ (Arabian Sea) ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಬೆಳಗಾವಿಯಲ್ಲಿ ಮಳೆ ಬಿಡುವು ಕೊಟ್ಟರು ನರೆ ಭೀತಿ ನಿಂತ್ತಿಲ್ಲ. ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಜಮೀನುಗಳಿಗೆಲ್ಲಾ ಬಳ್ಳಾರಿ ನಾಲಾ ನೀರು ನುಗ್ಗಿದೆ. ನೂರಾರು ಏಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ, ಕಬ್ಬು ನೀರು ಪಾಲಾಗಿದೆ. ಬಾಸುಮತಿ ಅಂತಲೇ ಫೇಮಸ್ ಆಗಿದ್ದ, ಭತ್ತ ನೀರಿನಲ್ಲಿ ಮುಳುಗಡೆಯಾಗಿದೆ. ಜೊತೆಗೆ ನೂರಾರು ಏಕರೆಯಲ್ಲಿ ಬೆಳೆದ ಕಬ್ಬಿನ ಗದ್ದೆಯಲ್ಲೂ ಮೊಳಕಾಲುದ್ದ ನೀರು ನಿಂತ್ತಿದೆ. ಇಂದು ಕೂಡಾ ಮಳೆ ಜಾಸ್ತಿಯಾದರೆ ಕಬ್ಬು ಕೂಡಾ ಸಂಪೂರ್ಣ ಮುಳುಗೋ ಆತಂಕ ರೈತರನ್ನು ಕಾಡುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಮೈಸೂರಿನಲ್ಲಿ ಗ್ರಾ.ಪಂ.ಸದಸ್ಯೆ ಮನೆ ಕುಸಿದಿರುವಂತಹ ಘಟನೆ ಸರಗೂರು ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗ್ರಾ.ಪಂ. ಸದಸ್ಯೆ ಲಕ್ಷ್ಮಿನಂಜಪ್ಪ ಅವರಿಗೆ ಸೇರಿದ ಮನೆಯಾಗಿದ್ದು, ಘಟನೆ ವೇಳೆ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮನೆಯಿಲ್ಲದೆ ಗ್ರಾ.ಪಂ. ಸದಸ್ಯರ ಕುಟುಂಬ ನಿರಾಶ್ರಿತರಾಗಿದ್ದಾರೆ.
Published On - 10:28 am, Sat, 16 July 22