ಬೆಂಗಳೂರು, ಮೇ 14: ಕಳೆದ 3-4 ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣರಾಯ ಆರ್ಭಟಿಸುತ್ತಿದ್ದಾನೆ. ಮಳೆಯಿಂದ (Rain) ಕೆಲವು ಕಡೆ ಸಣ್ಣ-ಪುಟ್ಟ ಅವಘಡಗಳು ಸಂಭವಿಸಿದ್ದರೇ, ಮತ್ತೆ ಕೆಲವು ಕಡೆ, ವರುಣರಾಯ ಭೂಮಿಗೆ ಇಳಿದಿದ್ದರಿಂದ ಜನರು ಸಂತೋಷಗೊಂಡಿದ್ದಾರೆ. ಸೋಮವಾರ (ಮೇ 13) ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ನೀರಿನ ಮೂಲಗಳಿಗೆ ಜೀವ ಕಳೆ ಬಂದಿದೆ. ಹಾಗಿದ್ದರೆ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ? ಇಲ್ಲಿದೆ ಓದಿ..
ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ ಒಟ್ಟು 99.5 ಮಿಮೀ ಮಳೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ 129 ಮಿಮೀ, ರಾಮನಗರ ಜಿಲ್ಲೆಯಲ್ಲಿ 113.5 ಮಿಮೀ, ಕೋಲಾರ 85.5 ಮಿಮೀ, ತುಮಕೂರು 82 ಜಿಲ್ಲೆಯಲ್ಲಿ ಮಿಮೀ, ಮೈಸೂರು ಜಿಲ್ಲೆಯಲ್ಲಿ 74.5 ಮಿಮೀ., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 56 ಮಿಮೀ, ಚಿಕ್ಕಮಗಳೂರು ಜಿಲ್ಲೆಯಲ್ಲಿ 54.5 ಮಿಮೀ, ಚಾಮರಾಜನಗರ ಜಿಲ್ಲೆಯಲ್ಲಿ 52 ಮಿಮೀ, ಬೆಳಗಾವಿ ಜಿಲ್ಲೆಯಲ್ಲಿ 47.5 ಮಿ.ಮೀ, ಕೊಡಗು ಜಿಲ್ಲೆಯಲ್ಲಿ 45.5 ಮಿಮೀ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 44.5 ಮಿಮೀ, ಶಿವಮೊಗ್ಗ ಜಿಲ್ಲೆಯಲ್ಲಿ 24 ಮಿಮೀ ಮಳೆಯಾಗಿದೆ.
ಮಂಡ್ಯ ಜಿಲ್ಲೆಯ ತಲಗವಾಡಿಯಲ್ಲಿ 129 ಮಿಮೀ, ಹೊಸಹಳ್ಳಿಯಲ್ಲಿ 123 ಮಿಮೀ, ಹರಳಹಳ್ಳಿ: 122.5 ಮಿಮೀ, ನೆಲಮಾಕನಹಳ್ಳಿ: 121 ಮಿಮೀ, ಕ್ಯಾತಘಟ್ಟ: 117.5 ಮಿಮೀ ಮಳೆಯಾಗಿದೆ.
ಮೇ 1 ಮತ್ತು 13 ರ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಶೇ31 ರಷ್ಟು ಹೆಚ್ಚು ಮಳೆಯಾಗಿದೆ. ಏಪ್ರಿಲ್ 1 ರಿಂದ 30 ರ ನಡುವೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಶೇ 99ರಷ್ಟು ಕಡಿಮೆ ಮಳೆಯಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಶಿವಮೊಗ್ಗ, ಕೊಡಗು ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ
ಮೇ 1 ಮತ್ತು 13 ರ ನಡುವೆ ತುಮಕೂರು, ಚಿತ್ರದುರ್ಗ, ರಾಯಚೂರು ಮತ್ತು ಬೀದರ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದಾದ್ಯಂತ ಗರಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಳೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Tue, 14 May 24