Karnataka Rains: ಕರ್ನಾಟಕದಲ್ಲಿ ಜೂನ್​, ಜುಲೈನಲ್ಲಿ ಎಷ್ಟು ಮಳೆಯಾಗಿದೆ? ಇನ್ನೂ ಮುಂದೆ ಎಷ್ಟಾಗಲಿದೆ?

| Updated By: ಗಂಗಾಧರ​ ಬ. ಸಾಬೋಜಿ

Updated on: Aug 02, 2024 | 4:20 PM

ಕರ್ನಾಟಕದಲ್ಲಿ ಹಲವೆಡೆ ಧಾರಾಕಾರಾ ಮಳೆಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನಾಹುತಗಳು ಸೃಷ್ಟಿಯಾಗುತ್ತಿವೆ. ಕರಾವಳಿ ಸಮುದ್ರ ತೀರದಲ್ಲಿ ಗಾಳಿ ಪರಿವರ್ತನೆಯಿಂದಾಗಿ ಇಂದಿನಿಂದ ಆಗಸ್ಟ್​ 6ರ ವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆ ಆಗಲಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

Karnataka Rains: ಕರ್ನಾಟಕದಲ್ಲಿ ಜೂನ್​, ಜುಲೈನಲ್ಲಿ ಎಷ್ಟು ಮಳೆಯಾಗಿದೆ? ಇನ್ನೂ ಮುಂದೆ ಎಷ್ಟಾಗಲಿದೆ?
ಕರ್ನಾಟಕದಲ್ಲಿ ಜೂನ್​, ಜುಲೈನಲ್ಲಿ ಎಷ್ಟು ಮಳೆಯಾಗಿದೆ? ಇನ್ನೂ ಮುಂದೆ ಎಷ್ಟಾಗಲಿದೆ?
Follow us on

ಬೆಂಗಳೂರು, ಆಗಸ್ಟ್​ 2: ಕರಾವಳಿ ಸಮುದ್ರ ತೀರದಲ್ಲಿ ಗಾಳಿ ಪರಿವರ್ತನೆ ಹಿನ್ನಲೆ ಇಂದಿನಿಂದ ಆಗಸ್ಟ್​​ 6ರ ವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ (Karnataka Rains) ಆಗಲಿದೆ. ಬೆಂಗಳೂರಿನಲ್ಲಿ ಕೂಡ ಹಲವೆಡೆ ಹಗುರದಿಂದ ಕುಡಿದ ಸಾಧಾರಣ ಮಳೆಯಗುವ (Rains) ಸಾಧ್ಯತೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್​​ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಶೇಕಡ 29 ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಹೇಳಿದ್ದಾರೆ.

ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಹೆಚ್ಚುವರಿ ಮಳೆ

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 19 ಸೆ.ಮೀ, ಪುತ್ತೂರಿನಲ್ಲಿ 16 ಸೆ.ಮೀ ಮಳೆಯಾಗಿದೆ.  ಜೂನ್ 1 ರಿಂದ ಜುಲೈ 31ರ ವರೆಗೆ ರಾಜ್ಯಾದ್ಯಂತ ಶೇಕಡ 29 ರಷ್ಟು ಹೆಚ್ಚುವರಿ ಮಳೆಯಾಗಿದೆ. ಕರಾವಳಿಯಲ್ಲಿ 29%, ಉತ್ತರ ಒಳನಾಡು 23, ಹಾಗೂ ದಕ್ಷಿಣ ಒಳನಾಡು 32% ಹೆಚ್ಚುವರಿ ಮಳೆ ಆಗಿದೆ.

ಕಲಬುರಗಿ ಹಾಗೂ ಯಾದಗಿರಿ ಹೊರತು ಪಡಿಸಿದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದೆ.  ಪೂರ್ವ ಅರಬ್ಬೀ ಸಮುದ್ರದ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕಡಲ ತೀರದಲ್ಲಿ ಸುಳಿಗಾಳಿ ಮುಂದುವರೆದಿರುವುದೇ ಜೂನ್ ಹಾಗೂ ಜುಲೈ ತಿಂಗಳಲ್ಲಿ ಹೆಚ್ಚುವರಿ ಮಳೆಗೆ ಮುಖ್ಯ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ: ತುಂಬಿದ ಗೇರುಸೊಪ್ಪ ಡ್ಯಾಂ; 5 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

18° ಯಿಂದ 20° ಉತ್ತರ ಅಕ್ಷಾಂಶದಲ್ಲಿ 3.1 ಕಿ.ಮೀಯಿಂದ 5.8 ಕಿ.ಮೀ ಅಂತರದಲ್ಲಿ ಸತತವಾಗಿ ಸೀಯರ್ ಝೋನ್ ಇತ್ತು. ಪ್ರೆಶರ್ ಗ್ರೆಡಿಯಂಟ್ (ಒತ್ತಡ) ಪರಿಣಾಮ ಗಾಳಿಯ ವೇಗ ಗಂಟೆಗೆ 40-50 ಕಿ.ಮೀ. ಬಂಗಾಲ ಉಪಸಾಗರದಲ್ಲಿ ವಾಯುಭಾರ ಕುಸಿತ ಹಾಗೂ 5.8 ಕಿ.ಮೀ ವರೆಗೆ ಗಾಳಿಯ ಪರಿಚಲನೆ ಇದೆ. ಈ ಎಲ್ಲಾ ಹವಾಮಾನ ವೈಪರಿತ್ಯ ಪರಿಣಾಮ ಜೂನ್ ಹಾಗೂ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಮಳೆ

ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ ಆಗಸ್ಟ್ 4ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆಗಸ್ಟ್ 3, 4ರಂದು 3 ಜಿಲ್ಲೆಗಳಲ್ಲಿ ರೆಂಜ್ ಅಲರ್ಟ್ ಮತ್ತು ಆಗಸ್ಟ್ 5, 6ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿಗೆ ಮತ್ತೆ ಮಳೆಯ ರೆಡ್ ಅಲರ್ಟ್​, ಮೂರು ದಿನ ಮಹಾಮಳೆ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 6ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:19 pm, Fri, 2 August 24