Karnataka Covid19 Update ರಾಜ್ಯದಲ್ಲಿ 310 ಹೊಸ ಕೊರೊನಾವೈರಸ್ ಪ್ರಕರಣ ಪತ್ತೆ ,6 ಮಂದಿ ಸಾವು
Covid 19: ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9578 ಆಗಿದೆ. ಆರೋಗ್ಯ ಬುಲೆಟಿನ್ ಪ್ರಕಾರ ಈವರೆಗೆ 37 922 ಮಂದಿ ಕೊವಿಡ್ನಿಂದ ಮೃತಪಟ್ಟಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಇಂದು (ಗುರುವಾರ) 310 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಸಾವಿಗೀಡಾಗಿದ್ದಾರೆ. ಇದೇ ಅವಧಿಯಲ್ಲಿ 347 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಲ್ಲಿಯವರೆಗೆ 29,34,870 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9578 ಆಗಿದೆ. ಆರೋಗ್ಯ ಬುಲೆಟಿನ್ ಪ್ರಕಾರ ಈವರೆಗೆ 37, 922 ಮಂದಿ ಕೊವಿಡ್ನಿಂದ ಮೃತಪಟ್ಟಿದ್ದಾರೆ. ಕೊವಿಡ್ ಖಚಿತ ಪ್ರಕರಣಗಳ ಸಂಖ್ಯೆ 29,82,399 ಆಗಿದ್ದು, ಖಚಿತ ಪ್ರಕರಣಗಳ ಶೇಕಡಾವಾರು 0.26 ಆಗಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ 1.93 ಆಗಿದೆ.
ಇಂದಿನ 14/10/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/HFES4QDg24@PMOIndia @MoHFW_INDIA @CMofKarnataka @BSBommai @mla_sudhakar @Randeep_Dev @BBMPCOMM @mysurucitycorp pic.twitter.com/dbvW3rX8Rr
— K’taka Health Dept (@DHFWKA) October 14, 2021
ಬೆಂಗಳೂರಿನಲ್ಲಿ 148 ಮಂದಿಗೆ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 1248892 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6637 ಆಗಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಜಿಲ್ಲಾವಾರು ಕೊವಿಡ್ ಪ್ರಕರಣಗಳ ಸಂಖ್ಯೆ
ಬಾಗಲಕೋಟೆಯಲ್ಲಿ ಯಾವುದೇ ಸೋಂಕು ಪ್ರಕರಣ ವರದಿ ಆಗಿಲ್ಲ. ಬಳ್ಳಾರಿ,ಬೆಳಗಾವಿಯಲ್ಲಿ -4, ಬೆಂಗಳೂರು ಗ್ರಾಮಾಂತರದಲ್ಲಿ 7, ಬೆಂಗಳೂರು ನಗರ-148, ಬೀದರ್-3,ಚಾಮರಾಜನಗರ-4, ಚಿಕ್ಕಬಳ್ಳಾಪುರ- 1,ಚಿಕ್ಕಮಗಳೂರು-5, ಚಿತ್ರದುರ್ಗ-2,ದಕ್ಷಿಣ ಕನ್ನಡ- 40 ,ದಾವಣಗೆರೆ-3,ದಾರವಾಡ-1,ಗದಗ-0,ಹಾಸನ-15, ಹಾವೇರಿ 2,ಕಲಬುರಗಿ-0, ಕೊಡಗು-8,ಕೋಲಾರ-1,ಕೊಪ್ಪಳ -0, ಮಂಡ್ಯ-5,ಮೈಸೂರು- 27, ರಾಯಚೂರು-1, ರಾಮನಗರ-0 ,ಶಿವಮೊಗ್ಗ-4,ತುಮಕೂರು-8,ಉಡುಪಿ-7,ಉತ್ತರ ಕನ್ನಡ- 10, ವಿಜಯಪುರಂ,ಯಾದಗಿರಿ ಯಲ್ಲಿ ಯಾವುದೇ ಹೊಸ ಸೋಂಕು ಪ್ರಕರಣ ವರದಿ ಆಗಿಲ್ಲ.
ಇದನ್ನೂ ಓದಿ: Coronavirus cases in India: ಭಾರತದಲ್ಲಿ 18,132 ಹೊಸ ಕೊವಿಡ್ ಪ್ರಕರಣ ಪತ್ತೆ,193 ಮಂದಿ ಸಾವು
Published On - 6:37 pm, Thu, 14 October 21