ಪಂಜಾಬ್​, ಉತ್ತರ ಪ್ರದೇಶಕ್ಕೆ ರಾಜ್ಯದಿಂದ ವಿದ್ಯುತ್​ ವಾಪಸ್​​​

|

Updated on: Jun 11, 2024 | 9:47 AM

ರಾಜ್ಯದಲ್ಲಿ ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಕಳೆದ ವರ್ಷ ಅಗಸ್ಟನಲ್ಲೇ ಬೇಸಿಗೆ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಜಲವಿದ್ಯುತ್​ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿತ್ತು. ಉಷ್ಣ ವಿದ್ಯುತ್ ​ಸ್ಥಾವರದಲ್ಲೂ ವಿದ್ಯುತ್​ ಉತ್ಪಾದನೆ ಕಡಿಮೆಯಾಗಿದ್ದರಿಂದ ಪೂರೈಕೆಗೆ ಹೊಡೆತ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಂಜಾಬ್​ ಮತ್ತು ಉತ್ತರ ಪ್ರದೇಶ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಒಪ್ಪಂದ ಮಾಡಿಕೊಂಡಿದೆ.

ಪಂಜಾಬ್​, ಉತ್ತರ ಪ್ರದೇಶಕ್ಕೆ ರಾಜ್ಯದಿಂದ ವಿದ್ಯುತ್​ ವಾಪಸ್​​​
ಕೆಜೆ ಜಾರ್ಜ್​
Follow us on

ಬೆಂಗಳೂರು, ಜೂನ್​ 08: ರಾಜ್ಯದಲ್ಲಿ ತಲೆದೂರಿದ್ದ ವಿದ್ಯುತ್​ ಕ್ಷಾಮವನ್ನು ನೀಗಿಸಲು ಸರ್ಕಾರ (Karnataka Government) ಪಂಜಾಬ್ (Punjab)​​ ಮತ್ತು ಉತ್ತರ ಪ್ರದೇಶದೊಂದಿಗೆ (Uttar Pradesh) 2023ರ ನವೆಂಬರ್​ನಿಂದ 2024ರ ಮೇವರೆಗೂ ವಿದ್ಯುತ್​​ ವಿನಿಮಯದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದಂತೆ ಇದೀಗ ಸರ್ಕಾರ ಜೂನ್​ 16ರಿಂದ ಪಂಜಾಬ್​ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ವಿದ್ಯುತ್​ (Electricity) ಹಿಂದುರುಗಿಸುತ್ತದೆ.

ರಾಜ್ಯದಲ್ಲಿ ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದ ಕಳೆದ ವರ್ಷ ಅಗಸ್ಟನಲ್ಲೇ ಬೇಸಿಗೆ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಜಲವಿದ್ಯುತ್​ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿತು. ಸಮರ್ಪಕ ಪ್ರಮಾಣದಲ್ಲಿ ವಿದ್ಯತ್​ ಉತ್ಪಾದನೆಯಾಗಲಿಲ್ಲ. ಮತ್ತು ಉಷ್ಣ ವಿದ್ಯುತ್ ​ಸ್ಥಾವರದಲ್ಲೂ ವಿದ್ಯುತ್​ ಉತ್ಪಾದನೆ ಕಡಿಮೆಯಾಗಿದ್ದರಿಂದ ಪೂರೈಕೆಗೆ ಹೊಡೆತ ಬಿತ್ತು. ಅಲ್ಲದೆ, ಯಾವುದೇ ಕಾರಣಕ್ಕೂ ಲೋಡ್​ ಶೆಡ್ಡಿಂಗ್​ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಂಜಾಬ್​ ಮತ್ತು ಉತ್ತರ ಪ್ರದೇಶನಿಂದ ವಿದ್ಯುತ್​ ವಿನಿಮಯ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಇಂದು, ನಾಳೆ ಪವರ್​​ ಕಟ್; ಇಲ್ಲಿದೆ ವಿವರ

2023ರ ಅಕ್ಟೋಬರ್​ನಿಂದ 2024ರ ಮೇ ವರೆಗೆ ಪ್ರತಿದಿನ ಉತ್ತರ ಪ್ರದೇಶದಿಂದ 300 ರಿಂದ 600 ಮೆಗಾವ್ಯಾಟ್​ ವಿದ್ಯುತ್​​ ಪಡೆದುಕೊಳ್ಳಲಾಗಿದೆ. ಇದೇ ರೀತಿ ಪಂಜಾಬ್​ನಿಂದ 2023ರ ನವೆಂಬರ್​​ನಿಂದ 2024ರ ಮೇ ವರೆಗೆ ಪ್ರತಿದಿನ 500 ಮೆಗಾವ್ಯಾಟ್​ ವಿದ್ಯುತ್​ ಪಡೆದುಕೊಳ್ಳಲಾಗಿದೆ. ಇದೀಗ, ಜೂನ್​ 16ರಿಂದ ಸೆಪ್ಟೆಂಬರ್​ 30ರವರೆಗೆ ಹಿಂತಿರುಗಿಸಲಾಗುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್​​ ಹೇಳಿದರು.

ಈ ವರ್ಷ ಫೆಬ್ರವರಿ 12 ರಂದು ರಾಜ್ಯದಲ್ಲಿ 17,220 ಮೆಗಾವ್ಯಾಟ್​ ವಿದ್ಯುತ್​ ಬಳಕೆಯಾಗಿದೆ. 2023ರ ಅಗಸ್ಟ್​ 25 ರಂದು 16,950 ಮೆಗಾವ್ಯಾಟ್​ ವಿದ್ಯುತ್​ ಬಳಕೆಯಾಗಿದೆ. ಇದೇ ದಿನಾಂಕದಂದು 2022ರಲ್ಲಿ 11,268 ಮೆಗಾವ್ಯಾಟ್​ ವಿದ್ಯುತ್​ ಬಳಕೆಯಾಗಿತ್ತು. ಕಳೆದ ವರ್ಷ ಅಗಸ್ಟ್​ನಲ್ಲಿ ರಾಜ್ಯದಲ್ಲಿ ಪ್ರತಿದಿನ 1500-2000 ಮೆಗಾವ್ಯಾಟ್​ ವಿದ್ಯುತ್​ ಕೊರತೆಯಾಗಿತ್ತು ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ