ಕೊರೊನಾ ತಡೆಗೆ ವಿಧಿಸಿದ್ದ ನಿರ್ಬಂಧ ಆಗಸ್ಟ್ 16 ರವರೆಗೆ ಮುಂದುವರಿಕೆ; ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ

| Updated By: ganapathi bhat

Updated on: Jul 31, 2021 | 11:31 PM

Covid19 Third Wave: ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಗಳನ್ನು ಆಗಸ್ಟ್ 16 ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ತಡೆಗೆ ವಿಧಿಸಿದ್ದ ನಿರ್ಬಂಧ ಆಗಸ್ಟ್ 16 ರವರೆಗೆ ಮುಂದುವರಿಕೆ; ಕರ್ನಾಟಕ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕೊವಿಡ್19 ನಿಯಮಾವಳಿಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗಿದೆ. ಕೊರೊನಾ ತಡೆಗೆ ವಿಧಿಸಿದ್ದ ನಿರ್ಬಂಧ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ 3ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಆಗಸ್ಟ್ 16ರವರೆಗೆ ಕೊವಿಡ್ ನಿಯಮ ಮುಂದುವರಿಕೆ ಎಂದು ರಾಜ್ಯ ಸರ್ಕಾರ ಹೇಳಿದೆ. 

ಕರ್ನಾಟಕದ ಪಕ್ಕದ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಏರಿಕೆ ಆಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿಲ್ಲ. ಹೀಗಾಗಿ, ರಾಜ್ಯದಲ್ಲಿ ಜಾರಿಯಲ್ಲಿರುವ ಕೋವಿಡ್ ಮಾರ್ಗಸೂಚಿಗಳನ್ನು ಆಗಸ್ಟ್ 16 ಬೆಳಗ್ಗೆ 6 ಗಂಟೆಯವರೆಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿಗಳ ಸಭೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿಕೆ
ರಾತ್ರಿ ಕರ್ಫ್ಯೂ ಇನ್ನೂ 15 ದಿವಸ ಮುಂದುವರಿಸುತ್ತೇವೆ. ಚಿತ್ರಮಂದಿರಗಳಲ್ಲೂ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಇನ್ನೂ 15 ದಿವಸ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಪಬ್‌ಗಳಿಗೂ ಈಗಿರುವ ನಿಯಮವೇ ಅನ್ವಯವಾಗುತ್ತೆ. ಗಡಿಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸುವಂತೆ ಸೂಚಿನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿನಿಮಾ ಥಿಯೇಟರ್ಸ್ ಹಾಗೂ ಪಬ್​ಗಳಿಗೆ ಈಗಿರುವ ನಿಯಮವೇ ಮುಂದಿನ ಆಗಸ್ಟ್ 14 ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಕಳೆದ ವಾರದಿಂದ ಕೊವಿಡ್ ಸ್ಪೋಟವಾಗಿದೆ. ಹೀಗಾಗಿ ಡಿಸಿ ಮತ್ತು ಎಸ್​ಪಿ ವಿಶೇಷ ಜಾಗ್ರತೆವಹಿಸಬೇಕು. ಹೆಲ್ತ್ ಯೂನಿಟ್ಸ್ ಹೆಚ್ಚಿಗೆ ಮಾಡಿಕೊಳ್ಳಬೇಕು. ಆರೋಗ್ಯ ಮೂಲಸೌಕರ್ಯ ಹೆಚ್ಚಾಗಬೇಕು. ಕೇಂದ್ರದ ಆರೋಗ್ಯ ಸಚಿವರನ್ನು ಲಸಿಕೆ ಹೆಚ್ಚಿಸುವಂತೆ ಕೇಳಿದ್ದೇನೆ. 60 ಲಕ್ಷ ಡೋಸ್ ಲಸಿಕೆ ಕೊಡ್ತಿದ್ರು. ಅದನ್ನು ಒಂದೂವರೆ ಕೋಟಿಗೆ ಹೆಚ್ಚಿಸುವಂತೆ ಕೇಳಿದ್ದೇನೆ. ಈ ತಿಂಗಳು ಒಂದು ಕೋಟಿ ಮುಂದಿನ ತಿಂಗಳಿನಿಂದ ಒಂದೂವರೆ ಕೋಟಿ ಲಸಿಕೆ ಕೊಡ್ತೀವಿ ಎಂದು ಹೇಳಿದ್ದಾರೆ. ಗಡಿ ಭಾಗದಲ್ಲಿ ಒಂದು ಡೋಸ್ ಕೊವಿಡ್ ಲಸಿಕೆ ಆಗಿದ್ದರೂ ಬಿಡುತ್ತಿದ್ದೆವು. ಇನ್ನುಮುಂದೆ ಎರಡೂ ಡೋಸ್ ಲಸಿಕೆ ಆದರೆ ಮಾತ್ರ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಕರ್ಫ್ಯೂ 15 ದಿನ ಮುಂದುವರಿಕೆ; ಚಿತ್ರಮಂದಿರಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಅವಕಾಶ: ಬಸವರಾಜ ಬೊಮ್ಮಾಯಿ

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,987 ಕೊರೊನಾ ಕೇಸ್ ಪತ್ತೆ; 37 ಮಂದಿ ಸಾವು

(Karnataka State Govt orders to Continue Covid19 Corona Virus Guidelines until August 16)

Published On - 11:29 pm, Sat, 31 July 21