Award: ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಪ್ರಾಥಮಿಕ ಶಾಲೆಗಳ 20, ಪ್ರೌಢ ಶಾಲೆಗಳ 11 ಶಿಕ್ಷಕರಿಗೆ ಸಂದ ಮನ್ನಣೆ
2021-22ನೇ ಸಾಲಿಗೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ ‘ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಬೆಂಗಳೂರು: ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು ಪ್ರಾಥಮಿಕ ಶಾಲೆಯ 20 ಶಿಕ್ಷಕರಿಗೆ, ಪ್ರೌಢ ಶಾಲಾ ವಿಭಾಗದಲ್ಲಿ 11 ಶಿಕ್ಷಕರಿಗೆ (ಓರ್ವ ವಿಶೇಷ ಶಿಕ್ಷಕರು) ಪ್ರಶಸ್ತಿ ಘೋಷಿಸಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿ ಪಡೆದ ಶಿಕ್ಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ. 2021-22ನೇ ಸಾಲಿಗೆ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರಿಗೆ ‘ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನಿಸಲು ರಾಜ್ಯ ಸರ್ಕಾರ ಆದೇಶಿಸಿದೆ.
ಪ್ರಶಸ್ತಿ ವಿಜೇತ ಎಲ್ಲ ಶಿಕ್ಷಕರಿಗೂ ತಲಾ 10,000 ನಗದು ಬಹುಮಾನ ಮತ್ತು ಆಯಾ ಶಿಕ್ಷಕರು ಪ್ರತಿನಿಧಿಸುವ ಶಾಲೆಗಳ ಅಭಿವೃದ್ಧಿಗೆ 50,000 ಅನುದಾನವನ್ನು ಒದಗಿಸಲು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಇದನ್ನೂ ಓದಿ:
ಶಾಲೆ ಆರಂಭ: ಕೊರೊನಾ ಬಗ್ಗೆಯೇ ಮಕ್ಕಳಿಗೆ ಮೊದಲ ಪಾಠ; ಜಾಗೃತಿ ಮೂಡಿಸುತ್ತಿರುವ ಶಿಕ್ಷಕರು
NEP: ಬೆಂಗಳೂರು ನಗರ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಎನ್ಇಪಿ ವಿರೋಧಿಸಿ ಸಿದ್ದರಾಮಯ್ಯ ಪತ್ರ
(Karnataka State Level Best Teacher Award Announcement Recognition of 20 Primary Schools and 11 High School Teachers)
Published On - 5:00 pm, Fri, 3 September 21