ರಾಜ್ಯದ ಹಲವೆಡೆ ಧಗಧಗಿಸಿದ ಕಾವೇರಿ ಕಿಚ್ಚು; ಎಲ್ಲೆಲ್ಲಿ ಏನೇನಾಯ್ತು? ಇಲ್ಲಿದೆ ವಿವರ
ಗಡಿನಾಡು ಚಾಮರಾಜನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮೊಳಗಿತು. ನಡುರಸ್ತೆಯಲ್ಲಿ ಘಂಟೆ ಬಾರಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಚಾಮರಾಜನಗರದಲ್ಲಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಜನತಾ ದರ್ಶನ ನಡೀತಿತ್ತು. ಆದರೆ, ಸಚಿವರ ಭೇಟಿಗಾಗಿ ರೈತರು ಖಾಲಿ ಮಡಿಕೆ ಹಿಡಿದು ಬಂದ್ರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದಾಗ ವಾಗ್ವಾದ ನಡೀತು.

ಬೆಂಗಳೂರು, ಸೆಪ್ಟೆಂಬರ್ 25: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ವಿರೋಧಿಸಿ ಸೋಮವಾರವೂ ರಾಜ್ಯದಾದ್ಯಂತ ಪ್ರತಿಭಟನೆಗಳು (Protest) ನಡೆದಿವೆ. ಮಂಡ್ಯ, ಮೈಸೂರು, ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಮೈಸೂರಿನಲ್ಲಿ ಸಚಿವ ಮಹದೇವಪ್ಪ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರವೂ ಧರಣಿ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಬಂದ್ ಇರಲಿದೆ. ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ, ರಾಜ್ಯದಲ್ಲಿ ಪ್ರತಿಭಟನೆ ಮುಂದುವರಿದಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆದ ಧರಣಿಯಲ್ಲಿ ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್ಕುಮಾರ್ ಭಾಗವಹಿಸಿದ್ದಾರೆ.
ಹಾಸನದಲ್ಲೂ ಆಕ್ರೋಶ ಭುಗಿಲೆದ್ದಿತ್ತು. ಹೇಮಾವತಿ ಜಲಾಶಯದ ನೀರು ಬಿಡುಗಡೆ ಖಂಡಿಸಿ, ಹೋರಾಟಗಾರರು ಡ್ಯಾಂಗೆ ಮುತ್ತಿಗೆ ಹಾಕಲು ಮುಂದಾದ್ರು. ಗೇಟ್ ಹತ್ತಲು ಒಳನುಗ್ಗಲು ಯತ್ನಿಸಿದವ್ರನ್ನ ಪೊಲೀಸರು ತಡೆದ್ರು. ಇನ್ನು, ಜೆಡಿಎಸ್ ಕಾರ್ಯಕರ್ತರು ಕೂಡ ರಸ್ತೆಗೆ ಇಳಿದಿದ್ರು. ಗೊರೂರು-ಅರಕಲಗೂಡು ರಸ್ತೆ ತಡೆದು ಆಕ್ರೋಶ ಹೊರಹಾಕಿದ್ರು. ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಗುಟುರು ಹಾಕಿದ್ರು.
ಗಡಿನಾಡು ಚಾಮರಾಜನಗರದಲ್ಲಿ ವಿಭಿನ್ನವಾಗಿ ಪ್ರತಿಭಟನೆ ಮೊಳಗಿತು. ನಡುರಸ್ತೆಯಲ್ಲಿ ಘಂಟೆ ಬಾರಿಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಚಾಮರಾಜನಗರದಲ್ಲಿ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಜನತಾ ದರ್ಶನ ನಡೀತಿತ್ತು. ಆದರೆ, ಸಚಿವರ ಭೇಟಿಗಾಗಿ ರೈತರು ಖಾಲಿ ಮಡಿಕೆ ಹಿಡಿದು ಬಂದ್ರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದಾಗ ವಾಗ್ವಾದ ನಡೀತು.
ಇದನ್ನೂ ಓದಿ: ಬೆಂಗಳೂರು ಬಂದ್: ನಾಳೆ ಏನೇನು ಇರುತ್ತೆ? ಏನೇನು ಇರುವುದಿಲ್ಲ?
ಭದ್ರಾ ನೀರಿಗಾಗಿ ದಾವಣಗೆರೆ ಬಂದ್
ಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಸ್ಥಗಿತಮಾಡಿರೋದರ ವಿರುದ್ಧ, ದಾವಣಗೆರೆ ಬಂದ್ಗೆ ರೈತ ಒಕ್ಕೂಟ ಕರೆ ಕೊಟ್ಟಿತ್ತು. ಬಂದ್ಗೆ ಕೆಲವರು ಸ್ವಯಂಪ್ರೇರಿತರಾಗಿ ಅಂಗಡಿಮುಂಗಟ್ಟು ಬಂದ್ ಮಾಡಿದ್ರು. ಮತ್ತೆ ಕೆಲವೆಡೆ ಒತ್ತಾಯಪೂರ್ವಕವಾಗಿ ಅಂಗಡಿ ಕ್ಲೋಸ್ ಮಾಡಿಸಿದ್ರು. ಸರ್ಕಾರಿ ಸಾರಿಗೆ ಬಸ್ಗಳನ್ನ ತಡೆದು ರೈತರು ಪ್ರತಿಭಟನೆ ನಡೆಸಿದ್ರು.