ಮುಂದಿನ ವಾರದಿಂದಲೇ ಪ್ರವಾಸಿ ಸ್ಥಳಗಳು ಓಪನ್ : ಸಚಿವ ಸಿ ಪಿ ಯೋಗೇಶ್ವರ್ ಘೋಷಣೆ

| Updated By: guruganesh bhat

Updated on: Jun 25, 2021 | 3:52 PM

185 ಕೋಟಿ ಮೊತ್ತದ ಟೆಂಡರ್ ಕರೆದು ಜೋಗ ಜಲಪಾತದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಜೋಗದಲ್ಲಿ 200-300 ಕ್ಯೂಸೆಕ್ಸ್ ನೀರು ಹರಿಸಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಲಿದ್ದೇವೆ. ಹೊನ್ನಾವರದಿಂದ ಜಲಮಾರ್ಗದ ಮೂಲಕ ಗೇರುಸೊಪ್ಪೆಗೆ ತರಲು ಸ್ಪೀಡ್ ಬೋಟ್ ವ್ಯವಸ್ಥೆ ಮಾಡಲಿದ್ದೇವೆ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

ಮುಂದಿನ ವಾರದಿಂದಲೇ ಪ್ರವಾಸಿ ಸ್ಥಳಗಳು ಓಪನ್ : ಸಚಿವ ಸಿ ಪಿ ಯೋಗೇಶ್ವರ್ ಘೋಷಣೆ
ಸಚಿವ ಸಿ.ಪಿ.ಯೋಗೇಶ್ವರ್
Follow us on

ಬೆಂಗಳೂರು: ಮುಂದಿನ ವಾರದಿಂದ ಪ್ರವಾಸಿ ತಾಣಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಬೆಂಗಳೂರಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು. ಕೊವಿಡ್​ನಿಂದ ನಲುಗಿರುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.

185 ಕೋಟಿ ಮೊತ್ತದ ಟೆಂಡರ್ ಕರೆದು ಜೋಗ ಜಲಪಾತದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಜೋಗದಲ್ಲಿ 200-300 ಕ್ಯೂಸೆಕ್ಸ್ ನೀರು ಹರಿಸಿ ವರ್ಷಪೂರ್ತಿ ನೀರು ಹರಿಯುವಂತೆ ಮಾಡಲಿದ್ದೇವೆ. ಹೊನ್ನಾವರದಿಂದ ಜಲಮಾರ್ಗದ ಮೂಲಕ ಗೇರುಸೊಪ್ಪೆಗೆ ತರಲು ಸ್ಪೀಡ್ ಬೋಟ್ ವ್ಯವಸ್ಥೆ ಮಾಡಲಿದ್ದೇವೆ. ಕೇವಲ ವಿದ್ಯುತ್ ಗೆ ಮಾತ್ರ ಜೋಗದ ನೀರು ಬಳಕೆಯಾಗುತ್ತಿತ್ತು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದರಿಂದ ಜೋಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಾಗಲಿದೆ. ಕೇರಳದಿಂದ ಗೋವಾ ಹೋಗುವ ಪ್ರವಾಸಿಗರನ್ನು ಸೆಳೆಯಲು ಸಹ ಕೆಲಸ ನಡೆಯುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ಪ್ರವಾಸೋದ್ಯಮ ಅಂದರೆ ಎಲ್ಲರೂ ನೆಗ್ಲೆಕ್ಟ್ ಖಾತೆ ಎಂದು ಹೇಳುತ್ತಿದ್ದರು. ಆದರೆ ನಾನು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. 50ರಿಂದ 55 ಲಕ್ಷ ಉದ್ಯೋಗ ಪ್ರವಾಸೋದ್ಯಮದಿಂದ ಸೃಷ್ಟಿಯಾಗುತ್ತಿದೆ. ಬಜೆಟ್ ನಲ್ಲಿ ನಮಗೆ ಹಣದ ಕೊರತೆ ಇತ್ತು. ಹಣಕಾಸು ಇಲಾಖೆಯೊಂದಿಗೂ ಕೂಡ ಮಾತನಾಡಿದ್ದೇವೆ. ಆದ್ಯತೆ ಮೇರೆಗೆ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡ್ತೇವೆ ಅಂತ ಒಪ್ಪಿಗೆ ಕೊಟ್ಟಿದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಪಕ್ಷಕ್ಕೆ ಕುಂದು ಬರಬಾರದೆಂದು ನಮ್ಮ ನೋವುಗಳನ್ನು ನಾಲ್ಕು ಗೋಡೆ ಮಧ್ಯೆ ಹೇಳಿದ್ದೇವೆ. ರಿಸಲ್ಟ್ ಯಾವಾಗ ಹೇಳುತ್ತಾರೆ ನೋಡೋಣ. ಅವರು ನಮ್ಮ ಎಲ್ಲ ಸಮಸ್ಯೆ ಸರಿಪಡಿಸುವ ವಿಶ್ವಾಸವಿದೆ. ನನಗೆ ವೈಯಕ್ತಿಕವಾಗಿ ಯಾವ ಸಮಸ್ಯೆಯೂ ಇಲ್ಲ. ಮುಖ್ಯಮಂತ್ರಿ ಬಗ್ಗೆಯೂ ಅಪಾರ ಗೌರವವಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಹೊಂದಾಣಿಕೆ ರಾಜಕಾರಣ ಬೇಡವೆಂಬುದಷ್ಟೇ ನಮ್ಮ ಸಮಸ್ಯೆ. ಹಿರಿಯರು ಎಲ್ಲ ತೀರ್ಮಾನ ಮಾಡುತ್ತೇವೆಂದು ಹೇಳಿದ್ದಾರೆ ಎಂದು ಅವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಹೆಲಿ-ಪ್ರವಾಸೋದ್ಯಮ ಸೇವೆಗಳಿಗೆ ಜಕ್ಕೂರು ವಿಮಾನ ನಿಲ್ದಾಣವನ್ನು ಬಳಸಲಾಗುವುದು ಎಂದ ಸಚಿವ ಸಿಪಿ ಯೋಗೇಶ್ವರ್

Ramesh Jarkiholi: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಬಿಟ್ಟಿದ್ದೇನೆ; ಕಾಂಗ್ರೆಸ್​ಗೂ ವಾಪಸ್ಸಾಗಲ್ಲ: ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟನೆ

(Karnataka tourism Minister CP Yogeshwar says Tourist places are open from next week)