ಬೆಂಗಳೂರು ಜು.14: ಟೆಂಡರ್ ಪ್ರಕ್ರಿಯೆಗಳಲ್ಲಿ ಸರ್ಕಾರದ (Government) ಬೊಕ್ಕಸಕ್ಕೆ ಉಳಿತಾಯ ಹಾಗೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ತಿದ್ದುಪಡಿಗಳನ್ನು ಒಳಗೊಂಡಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ (Assembly) ಅಂಗೀಕಾರಗೊಂಡಿದೆ. ಈ ವಿಧೇಯಕದಲ್ಲಿ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ಟೆಂಡರ್ ವಿನಾಯಿತಿಗೆ ಅವಕಾಶ ನೀಡಲಾಗಿದೆ. 50 ಲಕ್ಷದಿಂದ 1 ಕೋಟಿ ರೂ.ಗೆ ಟೆಂಡರ್ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ.
ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದೆ. ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆಗೆ ಮುಖ್ಯಮಂತ್ರಿಗಳು ಸಮಯ ಕೇಳಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವುದಾಗಿ ಸಿದ್ದರಾಮಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ 25 ಸಾವಿರ ಕೋಟಿ ಕಾಮಗಾರಿ ಬಿಲ್ ಬಾಕಿಯಿದೆ. ಹಿಂದಿನ ಸರ್ಕಾರದ ಅವಧಿಯ ಬಿಲ್ಗಳು ಕೂಡ ಬಾಕಿಯಿದೆ. 3 ವರ್ಷದಿಂದ ಬಿಲ್ ಆಗದೆ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಹೇಳಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ತಿಳಿಸಿದರು.
ಗುತ್ತಿಗೆದಾರರ ಕುಂದುಕೊರತೆ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಬಳಿಕ ಶಿಡ್ಲಘಟ್ಟದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸೌಜನ್ಯವಾಗಿ ಬೇಡಿಕೆ ಸಲ್ಲಿಸಿದ್ದೇವೆ. ಭ್ರಷ್ಟಚಾರ ತೊಲಗಿಸಲು ಸಾದ್ಯವಿಲ್ಲ ಆದರೆ ನಿಯಂತ್ರಣ ಮಾಡಬಹುದು ಎಂದರು.
ಇದನ್ನೂ ಓದಿ: ಆರ್ಎಸ್ಎಸ್ಗೆ ಜಮೀನು ಹಸ್ತಾಂತರಕ್ಕೆ ತಡೆ, ಸದನದಲ್ಲಿ ಮಾಹಿತಿ ನೀಡಿದ ಕೃಷ್ಣಬೈರೇಗೌಡ
ಕಳೆದ ಬಿಜೆಪಿ ಸರ್ಕಾರದ ಕೆಲವು ಗುತ್ತಿಗೆಗಳನ್ನು ರದ್ದು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ನೀಡಿದ ಗುತ್ತಿಗೆಗಳ ರದ್ದು ಮಾಡುವುದಾಗಿ ಹೇಳಿದ್ದಾರೆ. ಒಂದು ಕೋಟಿ ರೂಪಾಯಿ ಕೆಲಸಕ್ಕೆ ನೂರು ಕೋಟಿ ರೂಪಾಯಿ ನೀಡಿದ್ದಾರಂತೆ. ಕಳೆದ ಬಿಜೆಪಿಯ ರಾಜ್ಯ ಸರ್ಕಾರ ನೀಡಿದ ಗುತ್ತಿಗೆಗಳ ಬಗ್ಗೆ ತನಿಖೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿಳಿಸಿದರು.
ಡಾ.ಕೆ.ಸುಧಾಕರ್ ಮಂತ್ರಿಯಾಗಿದ್ದಾಗ ನನಗೆ ನಮ್ಮ ಸಂಬಂಧಿಗಳಿಗೆ ಬೆದರಿಕೆ ಹಾಕುತ್ತಿದ್ದರು. ಆದರೆ ಈಗ ಅವರೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ನನ್ನ ಮೇಲೆ ಮಾನನಷ್ಟ ಮೊಖದ್ದಮೆ ಹಾಕುವುದಾಗಿ ಹೇಳುತ್ತಿದ್ದರು. ಆದರೆ ಇದುವರೆಗೂ ಯಾವ ಮೊಖದ್ದಮೆಯನ್ನು ಹಾಕಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ