ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂ. ನಷ್ಟವಾಗಿದೆ: ನೌಕರರ ಪ್ರತಿಭಟನೆ ನೆನೆದು ಲಕ್ಷ್ಮಣ ಸವದಿ ಬೇಸರ

| Updated By: ganapathi bhat

Updated on: Apr 06, 2022 | 8:50 PM

ನಮ್ಮ ಚಾಲಕ ಹಾಗೂ ನಿರ್ವಾಹಕರೇ ಬಸ್ಸುಗಳಿಗೆ ಕಲ್ಲು ಎಸೆದಿದ್ದು ನನಗೆ ತೀವ್ರ ಬೇಸರವಾಗಿದೆ ಎಂದು ಸಾರಿಗೆ ನೌಕರರ ಪ್ರತಿಭಟನೆ ನೆನೆದು ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂ. ನಷ್ಟವಾಗಿದೆ: ನೌಕರರ ಪ್ರತಿಭಟನೆ ನೆನೆದು ಲಕ್ಷ್ಮಣ ಸವದಿ ಬೇಸರ
ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ
Follow us on

ದಾವಣಗೆರೆ: ಸಾರಿಗೆ ನಿಗಮಕ್ಕೆ 4 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ. ಆದರೆ, ನಷ್ಟದಿಂದ ಸಾರಿಗೆ ಸಂಸ್ಥೆ ಮುಚ್ಚಲಿದೆ ಎಂಬ ಭಯ ಬೇಡ. ಅದಕ್ಕೆ ನಾನು ಅವಕಾಶ ನೀಡಲ್ಲ ಎಂದು ಸವದಿ ತಿಳಿಸಿದ್ದಾರೆ. ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ನೆನೆದು ಹೀಗೆ ಮಾತನಾಡಿದ್ದಾರೆ.

ನಮ್ಮ ಚಾಲಕ ಹಾಗೂ ನಿರ್ವಾಹಕರೇ ಬಸ್ಸುಗಳಿಗೆ ಕಲ್ಲು ಎಸೆದಿದ್ದು ನನಗೆ ತೀವ್ರ ಬೇಸರವಾಗಿದೆ ಎಂದು ಸಾರಿಗೆ ನೌಕರರ ಪ್ರತಿಭಟನೆ ನೆನೆದು ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ. ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪಲ್ಲ. ಆದರೆ, ಪ್ರತಿಭಟನೆ ನಡೆಸಿದ ಸಂದರ್ಭ ಸರಿಯಲ್ಲ. ಅನ್ನ ನೀಡಿದ ಬಸ್ಸುಗಳಿಗೆ ಕಲ್ಲು ಎಸೆದಿದ್ದು ಸರಿಯಲ್ಲ.

ಅದರಿಂದ, ನಮಗೆ ನಾಲ್ಕು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಾರಿಗೆ ಸಚಿವರು ಬೇಸರಿಸಿದ್ದಾರೆ. ಆದರೆ, ಇಂತಹ ನಷ್ಟದಿಂದ ಸಾರಿಗೆ ಸಂಸ್ಥೆ ಮುಚ್ಚಲಿದೆ ಎಂಬ ಭೀತಿ ಬೇಡ. ಅದಕ್ಕೆ ನಾನು ಅವಕಾಶ ನೀಡಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಖಾಸಗಿಯವರ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಬಸ್ ಸಂಚಾರ ಬೆಂಗಳೂರಿನಲ್ಲಿ ಇಷ್ಟರಲ್ಲಿಯೇ ಆರಂಭವಾಗಿದೆ. 300 ವಿದ್ಯುತ್ ಚಾಲಿತ ಬಸ್ ಸಂಚಾರ ಆರಂಭವಾಗಲಿದೆ. ಎರಡು ಕೋಟಿ ಬೆಲೆಬಾಳುವ ಬಸ್ಸುಗಳವು. ಅದಕ್ಕಾಗಿ ಕೇಂದ್ರ ಸರ್ಕಾರ 50 ಲಕ್ಷ ರೂಪಾಯಿ ಸಹಾಯ ಧನ ನೀಡುತ್ತದೆ. ಆ ಕಂಪನಿಗಳು ಬಸ್ಸು ಖರೀದಿ ಮಾಡಿ ನಮಗೆ ಕೊಡುತ್ತಾರೆ. ನಮ್ಮ ಚಾಲಕರೇ ಬಸ್ ನಡೆಸುತ್ತಾರೆ‌. ಬಳಿಕ, ಪ್ರತಿ ಕಿಲೋ ಮೀಟರ್​ಗೆ ಇಂತಿಷ್ಟು ಅಂತಾ ಹಣವನ್ನು ಖಾಸಗಿಯವರಿಗೆ ಕೊಡಲಾಗುವುದು ಎಂದು ಸವದಿ ವಿವರಿಸಿದ್ದಾರೆ.

ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ

ಸಾರಿಗೆ ನೌಕರರ ಅಮಾನತು ವಿಚಾರ: ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು?

Published On - 2:46 pm, Mon, 18 January 21