ಬೆಂಗಳೂರು: ಸ್ತಬ್ಧವಾಗಿದ್ದ ಕರುನಾಡು ಮತ್ತೆ ಸದ್ದುಮಾಡುತ್ತಿದೆ. ರಸ್ತೆಗಳು ವಾಹನಗಳಿಂದ ತುಂಬಿದ್ರೆ, ಬಸ್‌ಗಾಗಿ ಜನ ಗಂಟೆ ಗಂಟಲೇ ಕಾಯುತ್ತಿದ್ದರು. ಬಂದ್ ಆಗಿದ್ದ ಅಂಗಡಿಗಳ ಬಾಗಿಲು ತೆರೆಯುತ್ತಿದ್ದಂತೆ, ಖರೀದಿಗೆ ಜನ ಮುಗಿ ಬಿದಿದ್ದರು. ಮಾರುಕಟ್ಟೆಗಳಲ್ಲಿ ಕಾಲಿಡೋಕೆ ಆಗದಷ್ಟು ಜನರಿದ್ರೆ, ಮೆಟ್ರೋದಲ್ಲಿ ರೂಲ್ಸ್‌ಗಳು ಬ್ರೇಕ್ ಆಗಿದ್ವು.
ಸರ್ಕಾರದ ಎಡವಟ್ಟುಗಳು ಇವತ್ತಿನಿಂದ ಸರಿ ಹೋಗುತ್ತಾ?
ನಿನ್ನೆಯಿಂದ 16 ಜಿಲ್ಲೆಗಳಲ್ಲಿ ಕಂಪ್ಲೀಟ್ ಅನ್ಲಾಕ್ ಇದ್ರೆ, 13 ಜಿಲ್ಲೆಗಳಲ್ಲಿ ಅರ್ಧ ಓಪನ್ ಮಾಡಲಾಗಿದೆ. ಲಾಕ್ಡೌನ್ ಇದ್ದಾಗಲೇ ಜನರನ್ನ ನಿಯಂತ್ರಿಸೋಕೆ ಸರ್ಕಾರ ಪರದಾಡಿತ್ತು. ಆದ್ರೀಗ ಅನ್ಲಾಕ್ ಆದ ಮೊದಲ ದಿನ ಕಂಡ ದೃಶ್ಯಗಳು, ಸರ್ಕಾರ ಮಾಡ್ತಿರೋ ಎಡವಟ್ಟು ಆಪತ್ತಿಗೆ ಆಹ್ವಾನ ಕೊಡುವಂತಿತ್ತು. ಅನ್‌ಲಾಕ್ ಬೀಗ ಓಪನ್ ಆಗುತ್ತಿದ್ದಂತೆ ಜನ ಜಾತ್ರೆಯೇ ಶುರವಾಗಿತ್ತು. ನಿನ್ನೆ ಬಸ್‌ಗಳಿಗಾಗಿ ಜನ ಮುಗಿಬಿದ್ರೆ, ಮೆಟ್ರೋದಲ್ಲಿ ರೂಲ್ಸ್‌ಗಳು ಬ್ರೇಕ್ ಆಗಿತ್ತು. ಮಾರ್ಕೆಟ್‌ಗಳಲ್ಲಿ ಅಂತರವಿಲ್ಲದೇ ಜನರು ತುಂಬಿ ತುಳುಕುತ್ತಿದ್ದರು, ಹೋಟೆಲ್‌ಗಳಲ್ಲಿ ರೂಲ್ಸ್ ಇದ್ದು ಇಲ್ಲದಂತೆ ಆಗಿತ್ತು. ಅನ್ಲಾಕ್ ಮೊದಲ ದಿನ ಜನರ ನಿರ್ಲಕ್ಷ್ಯದ ಜೊತೆ ಸರ್ಕಾರದ ಸಾಲು ಸಾಲು ಎಡವಟ್ಟು ಮಾಡಿತ್ತು. ನಿನ್ನೆ ಆದ ಎಡವಟ್ಟುಗಳು ಇವತ್ತಾದ್ರೂ ಸರಿ ಹೋಗುತ್ತಾ ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಹಾಗಿದ್ರೆ ನಿನ್ನೆ ನಡೆದ ಎಡವಟ್ಟುಗಳು ಏನೇನು ಅಂತ ನೋಡೋದಾದ್ರೆ..
ಎಡವಟ್ಟು ನಂ 1: ಬಿಎಂಟಿಸಿ ಬಸ್‌ಗಾಗಿ ಮುಗಿಬಿದ್ದ ಜನರು
ಬಸ್ ಬರ್ತಿದ್ದಂತೆ, ನೂರಾರು ಜನ ಒಮ್ಮೆಲೆ ಮುತ್ತಿಗೆ ಹಾಕ್ತಿದ್ದಾರೆ. ಸೀಟ್ ಹಿಡಿಯೋಕೆ ನಾ ಮುಂದು ತಾ ಮುಂದು ಅಂತಿದ್ದ ದೃಶ್ಯಗಳು ಬೆಂಗಳೂರಿನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ. ಕೆಲವೊಂದಿಷ್ಟು ಜನ ಬಸ್ ಹಿಡಿಯೋಕೆ ಜಟಾಪಟಿ ಮಾಡಿದ್ರೆ, ಇನ್ನೊಂದಿಷ್ಟು ಜನ ಬಸ್ ಹತ್ತಿ ಸೀಟ್ಗಾಗಿ ಕಿತ್ತಾಟಕ್ಕೆ ಇಳಿದಿದ್ರು. ತಮ್ಮ ತಮ್ಮ ಮನೆಗೆ ಹೋಗೋ ಧಾವಂತದಲ್ಲಿದ್ದ ಜನರು ಹಿಂದೆ ಮುಂದೆ ನೋಡದೇ, ದೈಹಿಕ ಅಂತರ ಇಲ್ದೆ, ಮಾಸ್ಕ್ ಇಲ್ದೆ ಬಸ್ಯೊಳಗೆ ಕುರಿಮಂದೆಯಂತೆ ತುಂಬಿಕೊಂಡಿದ್ರು. ಇಷ್ಟಕ್ಕೆಲ್ಲ ಕಾರಣವಾಗಿದ್ದು, ಬಿಎಂಟಿಸಿ ಬೇಜವಾಬ್ದಾರಿ.
ಅಷ್ಟು ಬಸ್ ಬಿಡ್ತೀವಿ, ಇಷ್ಟು ಬಸ್ ಬಿಡ್ತೀವಿ ಅಂತಾ ಕಥೆ ಹೊಡೆದಿದ್ದ ಬಿಎಂಟಿಸಿ, ನಿನ್ನೆ ಬೆಳಗಾಗುತ್ತಲೇ ಪರಿಸ್ಥಿತಿ ನಿಭಾಯಿಸೋಕೆ ಪರದಾಡ್ತು. ಬೆಳಗ್ಗೆ ಬೇರೆ ಬೇರೆ ಊರುಗಳಿಂದ ಬಂದ ಜನರು ಬಸ್ಗಾಗಿ ಕಾಯುತ್ತಿದ್ದರು. ಮೊನ್ನೆಯೇ ವ್ಯವಸ್ಥೆ ಮಾಡಿಕೊಳ್ಳದ ಬಿಎಂಟಿಸಿ ಅಧಿಕಾರಿಗಳು, ಡ್ರೈವರ್, ಕಂಡಕ್ಟರ್ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ, ಕೊವಿಡ್ ನೆಗೆಟಿವ್ ರಿಪೋರ್ಟ್ ಇಲ್ಲ ಅಂತಾ ಡೂಟಿ ಕೊಟ್ಟಿರಲಿಲ್ಲ. ಬಸ್ ರೆಡಿಯಿದ್ರೂ, ಸಿಬ್ಬಂದಿ ಇಲ್ದೆ, ಬಸ್ ಬಾರದೇ ಜನರು ಪರಿತಪಿಸಿದ್ರು. ಒಂದೇ ಎರಡು ಬಸ್ ಬರುತ್ತಿದ್ದಂತೆ, ಬಸ್‌ಗಾಗಿ ಜನ ಮುಗಿಬಿದ್ರು. ಆದ್ರೆ ಮಧ್ಯಾಹ್ನದ ಹೊತ್ತಿಗೆ ಜನ ಕಡಿಮೆ ಇದ್ದಾಗ, ಬಸ್ ಬಿಟ್ಟು ಎಲ್ಲಾ ಸರಿಯಾಗಿದೆ, ಅಂತಾ ಬಿಎಂಟಿಸಿ ಪೋಸ್ ಕೊಟ್ಟಿತ್ತು.
ಎಡವಟ್ಟು ನಂ.2 : ಮೆಟ್ರೋದಲ್ಲೂ ಕೊವಿಡ್ ರೂಲ್ಸ್ ಬ್ರೇಕ್
ಒಂದ್ಕಡೆ ಬಸ್ ನಿಲ್ದಾಣದಲ್ಲಿ ಈ ಪರಿಸ್ಥಿತಿಯಾದ್ರೆ, ಮೆಟ್ರೋದಲ್ಲೂ ಇದಕ್ಕಿಂತ ಭಿನ್ನವೇನೂ ಇರಲಿಲ್ಲ.. ಮೆಟ್ರೋದಲ್ಲಿ ಪ್ರಯಾಣಿಸೋರ ಸಂಖ್ಯೆ ಕಡಿಮೆ ಇತ್ತು. ಆದ್ರೆ, ಮೆಟ್ರೋದೊಳಗೆ ಜನರು ದೈಹಿಕ ಅಂತರ ವಿಲ್ದೆ ಪ್ರಯಾಣಿಸಿದ್ರು.
ಎಡವಟ್ಟು ನಂ.3 : ಹೋಟೆಲ್ಗಳಲ್ಲಿ ದೈಹಿಕ ಅಂತರ ಮಾಯ
ಇನ್ನು ನಿನ್ನೆಯಿಂದ ಹೋಟೆಲ್ಗಳಲ್ಲಿ ಶೇಕಡಾ 50 ರಷ್ಟು ಗ್ರಾಹಕರಿಗೆ ಕುಳಿತು ತಿನ್ನಲು ಅವಕಾಶ ನೀಡಲಾಗಿದೆ. ಆದ್ರೆ, ಬೆಂಗಳೂರಿನ ಕೆಲ ಹೋಟೆಲ್ಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಜನ ಊಟ, ತಿಂಡಿ ಮಾಡ್ತಿದ್ರು. ಮತ್ತೊಂದಿಷ್ಟು ಕಡೆ ಹೋಟೆಲ್ ಸಿಬ್ಬಂದಿ ಮಾಸ್ಕ್ ಹಾಕದೇ ಸರ್ವಿಸ್ ಕೊಡ್ತಾಇದ್ರು.
ಎಡವಟ್ಟು ನಂ.4: ಮಾರುಕಟ್ಟೆಗಳು ಫುಲ್, ಮಾನಿಟರಿಂಗ್ ಮಾಡೋರೆ ಇಲ್ಲ
ಇನ್ನು ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ ಮಾರ್ಕೆಟ್‌ಗಳಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿತ್ತು. ದೈಹಿಕ ಅಂತರ ವಿಲ್ದೆ, ಮಾಸ್ಕ್ ಸಹ ಇಲ್ದೆ ಜನರು ಖರೀದಿಗೆ ಮುಗಿ ಬಿದ್ದಿದ್ರು. ಜನರಿಗಂತೂ ಬುದ್ಧಿ ಇಲ್ಲ, ಆದ್ರೆ ನಿಯಮ ಪಾಲನೆ ಮಾಡುವಂತೆ ನೋಡಿಕೊಳ್ಳೋಕೆ, ಮಾರ್ಷಲ್ಗಳು ಇರಲಿಲ್ಲ. ಬೆಂಗಳೂರು ಮಾರ್ಕೆಟ್‌ಗಲ್ಲಿ, ಬೆಳಗಾವಿಯ ಎಪಿಎಂಸಿ ಮಾರ್ಕೆಟ್.. ದಾವಣಗೆರೆಯ ಕೆ.ಆರ್.ಮಾರ್ಕೆಟ್. ವಿಜಯಪುರದ ಮಾರ್ಕೆಟ್ನಲ್ಲೂ ಕೊವಿಡ್ ರೂಲ್ಸ್ ಮಂಗಮಾಯವಾಗಿದ್ವು. ಇನ್ನು ಗದಗದಲ್ಲಿ ದಿನಸಿ ಅಂಗಡಿ, ಹಾಗೂ ಬಟ್ಟೆ ಅಂಗಡಿಗಳಲ್ಲಿ ಖರೀದಿಗಾಗಿ ಜನ ಗುಂಪು ಗುಂಪಾಗಿ ಸೇರಿದ್ರು. ಇಲ್ಲೂ ಸಹ, ಅಂಗಡಿ ಮಾಲೀಕರು ನಿರ್ಲಕ್ಷ್ಯ ವಹಿಸ್ತಿದ್ರೆ, ಅದನ್ನ ಕೇಳೋಕೆ ಯಾರೂ ಇರಲಿಲ್ಲ.
ಜನರಿಗೆ ಸಿಎಂ ಬಿಎಸ್ವೈ ಮನವಿಗೆ ಬೇಲೆನೇ ಇಲ್ವಾ?
ಒಂದಕ್ಡೆ ಸರ್ಕಾರ ಮಾನಿಟರ್ ಮಾಡ್ಬೇಕಿತ್ತು ಅನ್ನೋದು ಎಷ್ಟು ಸತ್ಯವೋ, ಜನರು ಕೂಡಾ ಅಷ್ಟೇ ಜವಾಬ್ದಾರಿಯಿಂದ ವರ್ತಿಸಬೇಕಿರೋದು ಅಷ್ಟೇ ಸತ್ಯ. ಪಂಜರದಿಂದ ಹಾರಿ ಬಿಟ್ಟ ಹಕ್ಕಿಯಂತೆ ಹಾರಾಡದೇ, ಹೆಮ್ಮಾರಿ ವಿರುದ್ಧ ಹೋರಾಟ ಮಾಡೋಕೆ ಹದ್ದು ಬಸ್ತಿನಲ್ಲಿರಬೇಕು. ಹೀಗಾಗೇ ಸಿಎಂ ಬಿಎಸ್ವೈ ಜನರು ರೂಲ್ಸ್ ಫಾಲೋ ಮಾಡಬೇಕು ಅಂತಾ ಮನವಿ ಮಾಡಿದ್ದಾರೆ.
ಮೈಮರೆತು ನಿರ್ಲಕ್ಷ್ಯದಿಂದ ವರ್ತಿಸೋ ಜನಕ್ಕೆ ಬುದ್ಧಿ ಬರುತ್ತಾ?
ನಿನ್ನೆ ಸರ್ಕಾರ ಫ್ರೀ ಬಿಡುತ್ತಿದ್ದಂತೆ ಜನ ಪಂಜರದಿಂದ ಹೊರ ಬಂದ ಪಕ್ಷಿಗಳಂತೆ ಸಿಕ್ಕಸಿಕ್ಕ ಕಡೆಗಳಲ್ಲಿ ಹಾರಾಡಿದ್ರು. ಕೊರೊನಾ ಇದೇ ಅನ್ನೋದನ್ನ ಕೂಡ ಜನರು ಮರೆತು ಹೋಗಿದ್ರು. ಮಾರ್ಕೆಟ್‌ಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಕೊರೊನಾ ರೂಲ್ಸ್‌ಗೆ ಬೆಲೆಯೇ ಇಲ್ಲದಂತಾಗಿತ್ತು. ಜನ ಮೈಮರೆತು ದೈಹಿಕ ಅಂತರವಿಲ್ಲದೇ ಬೇಕಾಬಿಟ್ಟಿಯಾಗಿ ಓಡಾಡಿದ್ರು. ಸರ್ಕಾರದ ಕೈಯಲ್ಲಿ ಕೂಡ ಜನರನ್ನ ಕಂಟ್ರೋಲ್ ಮಾಡೋಕೆ ಆಗಿಲ್ಲ. ಮುಂದಿನ ದಿನಗಳಲ್ಲಿ ನಿನ್ನೆಯ ತರನೇ ಆದ್ರೆ ಕಂಟ್ರೋಲ್‌ಗೆ ಬಂದಿರೋ ಕೊರೊನಾ ಮತ್ತಷ್ಟು ಹೆಚ್ಚಾಗೋದು ಪಕ್ಕಾ. ನಿನ್ನೆ ನಡೆದ ಎಡವಟ್ಟುಗಳು ಇವತ್ತಿನಿಂದ ಸರಿಹೋಗಿಲ್ಲ ಅಂದ್ರೆ ಮತ್ತೆ ಜನ ಕೊರೊನಾದಿಂದ ಹೊಡೆತ ತಿನ್ನಬೇಕಾಗುತ್ತೆ. ಮತ್ತೆ ಲಾಕ್‌ಡೌನ್ ಆಗಿ ಮನೆವಾಸ ಅನುಭವಿಸಬೇಕಾಗುತ್ತೆ.. ಸೋ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ. ಕೊರೊನಾ ರೂಲ್ಸ್ ಫಾಲೋ ಮಾಡಿ ಕೊರೊನಾಕ್ಕೆ ಮೂಗುದಾರ ಹಾಕಬೇಕಿದೆ.
ಇದನ್ನೂ ಓದಿ: ಕಿರುತೆರೆಗೆ ಕಂಬ್ಯಾಕ್ ಮಾಡಿದ ಜಯ್ ಡಿಸೋಜ; ವೀಕ್ಷಕರಿಗೆ ಇಷ್ಟವಾಗುತ್ತಾ ಭಿನ್ನ ಅವತಾರ?