ಕಿರುತೆರೆಗೆ ಕಂಬ್ಯಾಕ್ ಮಾಡಿದ ಜಯ್ ಡಿಸೋಜ; ವೀಕ್ಷಕರಿಗೆ ಇಷ್ಟವಾಗುತ್ತಾ ಭಿನ್ನ ಅವತಾರ?
Jay D Souza: ಜಯ್ ‘ಮನೆದೇವ್ರು’ ಧಾರಾವಾಹಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಂತರ ಅವರು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಆದರು. ಈಗ ಅವರು ‘ಆಕಾಶ ದೀಪ’ ಧಾರಾವಾಹಿ ಮೂಲಕ ಮತ್ತೆ ಕನ್ನಡ ವೀಕ್ಷಕರ ಎದುರು ಬರುತ್ತಿದ್ದಾರೆ.
ಕೊವಿಡ್ ಸಂಕಷ್ಟದ ಸಂದರ್ಭದಲ್ಲಿ ಧಾರಾವಾಹಿಗಳು ಶೂಟಿಂಗ್ ಮಾಡೋದು ಕಷ್ಟವಾಗುತ್ತಿದೆ. ಈ ಸಂದರ್ಭದಲ್ಲೂ ‘ಆಕಾಶ ದೀಪ’ ಧಾರಾವಾಹಿ ಆರಂಭಗೊಳ್ಳುತ್ತಿದೆ. ಈ ಧಾರಾವಾಹಿ ಮೂಲಕ ಜಯ್ ಡಿಸೋಜ ಕಂಬ್ಯಾಕ್ ಮಾಡುತ್ತಿದ್ದಾರೆ.
ಜಯ್ ‘ಮನೆದೇವ್ರು’ ಧಾರಾವಾಹಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಂತರ ಅವರು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಆದರು. ಈಗ ಅವರು ಆಕಾಶ ದೀಪ ಧಾರಾವಾಹಿ ಮೂಲಕ ಮತ್ತೆ ಕನ್ನಡ ವೀಕ್ಷಕರ ಎದುರು ಬರುತ್ತಿದ್ದಾರೆ. ಈ ಧಾರಾವಾಹಿಯ ಶೂಟಿಂಗ್ ಕಳೆದ ಡಿಸೆಂಬರ್ನಲ್ಲೇ ಆರಂಭಗೊಂಡಿದೆ. ಒಂದಷ್ಟು ಎಪಿಸೋಡ್ಗಳನ್ನು ಈಗಾಗಲೇ ಶೂಟ್ ಮಾಡಲಾಗಿದ್ದು, ಜೂನ್ 21ರಿಂದ ಪ್ರಸಾರ ಆರಂಭಗೊಂಡಿದೆ.
ಈ ಮೊದಲೇ ‘ಆಕಾಶ ದೀಪ’ ಪ್ರಸಾರ ಆರಂಭಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಪ್ರಸಾರ ದಿನಾಂಕ ಮುಂದೂಡಲ್ಪಡುತ್ತಲೇ ಇತ್ತು. ಈಗ ‘ಆಕಾಶ ದೀಪ’ ಪ್ರಸಾರ ಆರಂಭಿಸಿದೆ. ಈ ಬಗ್ಗೆ ಜಯ್ ಸಂತಸ ವ್ಯಕ್ತಪಡಿಸುತ್ತಾರೆ. ಅಲ್ಲದೆ, ಈ ಪಾತ್ರವನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಅವರಲ್ಲಿದೆ.
‘ಮನೆದೇವ್ರು’ ಧಾರಾವಾಹಿಯಲ್ಲಿ ಸೂರ್ಯ ಹೆಸರಿನ ಪಾತ್ರವನ್ನು ಜಯ್ ಮಾಡಿದ್ದರು. ಈಗ ಆಕಾಶದೀಪ ಧಾರಾವಾಹಿಯಲ್ಲಿ ಕುರುಡುನ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಇಡೀ ಧಾರಾವಾಹಿಯ ಕಥೆ ಇವರ ಸುತ್ತವೇ ಸಾಗಲಿದೆ ಅನ್ನೋದು ವಿಶೇಷ.
ಅಂದಹಾಗೆ, ಈ ಧಾರಾವಾಹಿಯ ನಾಯಕಿ ದೀಪಾ, ಹಾಲಿನ ಡೈರಿ ಮಾಡಿ ತನ್ನ ಮನೆ ನಡೆಸುವ ಗುರಿ ಇರುವ ಹುಡುಗಿ. ದಯೆ, ವಿನಯ, ಮುಗ್ಧತೆ ದೀಪಾಳ ಗುಣಗಳು. ಅಪ್ಪನ ಮುದ್ದಿನ ಮಗಳಾದರೂ, ಚಿಕ್ಕಮ್ಮ ಮತ್ತು ಮಲಸೋದರಿಯ ಮುಷ್ಠಿಗೆ ಸಿಲುಕಿ ನರಳುವ ಆಕೆಯ ಬಾಳಿಗೆ ಅನಿರೀಕ್ಷಿತ ಬೆಳಕೊಂದು ಬರುತ್ತದೆ. ಅದುವೇ ಆಕಾಶ್. ನಂತರ ಏನೆಲ್ಲ ಆಗುತ್ತದೆ ಎಂಬುದು ಧಾರಾವಾಹಿಯ ಕಥೆ.
ಇದನ್ನೂ ಓದಿ:
ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಧಾರಾವಾಹಿ; ಜೂನ್ 7ರಿಂದ ಶುರು
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?
Published On - 7:21 am, Tue, 22 June 21