ಬಂಟ್ವಾಳ: ಕಂಬಳ ಓಟದಲ್ಲಿ ಅಡ್ಡಗೋಡೆ ಮೇಲೆ ಕೈಯಿಟ್ಟು ಮಗುಚಿ ಬಿದ್ದ ‘ಉಸೇನ್ ಬೋಲ್ಟ್’ ಖ್ಯಾತಿಯ ಶ್ರೀನಿವಾಸ ಗೌಡ
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕಳೆದ ವರ್ಷ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದರು. ಆದ್ರೆ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳ ಓಟದಲ್ಲಿ ಆಯತಪ್ಪಿದ್ದಾರೆ.
ಬಂಟ್ವಾಳ: ಕರ್ನಾಟಕದ ‘ಉಸೇನ್ ಬೋಲ್ಟ್’ ಖ್ಯಾತಿಯ ಶ್ರೀನಿವಾಸ ಗೌಡ ಕಂಬಳ ಓಟದಲ್ಲಿ ಆಯತಪ್ಪಿ ಬಿದ್ದಿದ್ದಾರೆ. ಈ ವರ್ಷದ ಮೊದಲ ಕಂಬಳ ಕೂಟವನ್ನು ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ಆಯೋಜಿಸಲಾಗಿತ್ತು. ಪಂದ್ಯದಲ್ಲಿ ಭಾಗವಹಿಸಿದ್ದ ಶ್ರೀನಿವಾಸ ಗೌಡ ಪ್ರೀ ಕ್ವಾಟರ್ ಫೈನಲ್ನಲ್ಲಿ ಓಡುತ್ತಿರುವಾಗ ಆಯತಪ್ಪಿ ಬಿದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಕಳೆದ ವರ್ಷ ಕಂಬಳ ಓಟದಲ್ಲಿ ದಾಖಲೆ ಬರೆದಿದ್ದರು. ಆದ್ರೆ ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳ ಓಟದ ಮೇಳೆ ಓಡುವಾಗ ಅಡ್ಡಗೋಡೆ ಮೇಲೆ ಕೈಯಿಟ್ಟು ಮಗುಚಿ ಬಿದ್ದಿದ್ದಾರೆ.
ಕೆಲ ಪಂದ್ಯಗಳಲ್ಲಿ ಭಾಗವಹಿಸದಂತೆ ಸೂಚನೆ ಘಟನೆಯಲ್ಲಿ ಶ್ರೀನಿವಾಸ ಗೌಡ ಕೈ ಮತ್ತು ಎದೆಯ ಭಾಗಕ್ಕೆ ಏಟು ಬಿದ್ದಿದ್ದು ಮುಂದಿನ ಕೆಲ ಪಂದ್ಯಗಳಲ್ಲಿ ಭಾಗವಹಿಸದಂತೆ ಸೂಚಿಸಲಾಗಿದೆ. ವರ್ಷದ ಆರಂಭಿಕ ಪಂದ್ಯದಲ್ಲೇ ಈ ರೀತಿಯ ಘಟನೆ ನಡೆದಿದ್ದು ಓಟದ ಚಿಗರೆಗಳಿಗೆ ಸದ್ಯಕ್ಕೆ ವಿಶ್ರಾಂತಿ ನೀಡಬೇಕಿದೆ.
ಕರ್ನಾಟಕದ ಉಸೇನ್ ಬೋಲ್ಟ್ಗಾಗಿ ಪೈಪೋಟಿ: ಮತ್ತೆ ಮೊದಲ ಸ್ಥಾನ ಅಲಂಕರಿಸಿದ ಶ್ರೀನಿವಾಸ್!
Dab It! ಶ್ರೀನಿವಾಸ್ ರೆಕಾರ್ಡ್ ಉಡೀಸ್, ಉದಯಿಸಿದ ಮತ್ತೊಬ್ಬ ಉಸೇನ್ ಬೋಲ್ಟ್!
Published On - 10:37 am, Mon, 1 February 21