AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather Today: ಕರ್ನಾಟಕ ರಾಜ್ಯ ಹವಾಮಾನ ವರದಿ – ಇಂದು ಎಲ್ಲೆಲ್ಲಿ ಮಳೆಯಾಗಲಿದೆ? ತಾಪಮಾನ ಹೇಗಿರಲಿದೆ?

Weather Forecast: ಮೇ ತಿಂಗಳ ಸುಡು ಬಿಸಿಲನ್ನು ಶಮನ ಮಾಡಲೆಂಬಂತೆ ಬಂದೆರಗಿದ ಮಳೆರಾಯನಿಂದ ಹಲವೆಡೆ ವಾತಾವರಣ ತಂಪಾಗಿದೆ. ಇನ್ನೇನು ಮೇ ತಿಂಗಳ ಅಂತ್ಯಕ್ಕೆ ಮುಂಗಾರು ನೆರೆಯ ಕೇರಳ ರಾಜ್ಯವನ್ನು ಪ್ರವೇಶಿಸಲಿದ್ದು, ಅದಾಗಿ 2-3 ದಿನಗಳಲ್ಲಿ ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆ.

Karnataka Weather Today: ಕರ್ನಾಟಕ ರಾಜ್ಯ ಹವಾಮಾನ ವರದಿ - ಇಂದು ಎಲ್ಲೆಲ್ಲಿ ಮಳೆಯಾಗಲಿದೆ? ತಾಪಮಾನ ಹೇಗಿರಲಿದೆ?
ಕರ್ನಾಟಕ ರಾಜ್ಯ ಹವಮಾನ ವರದಿ
Skanda
|

Updated on: May 17, 2021 | 7:23 AM

Share

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೆ ಚಂಡಮಾರುತದ ಪರಿಣಾಮ ಕಳೆದೆರೆಡು ದಿನಗಳಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗಾಲದ ವಾತಾವರಣ ಸೃಷ್ಟಿಯಾಗಿದ್ದು, ಇಂದು ಕೂಡಾ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ವರದಿಗಳು ತಿಳಿಸಿವೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮುಂಜಾನೆಯೇ ಮೋಡ ಕವಿದ ವಾತಾವರಣವಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಮೇ ತಿಂಗಳ ಸುಡು ಬಿಸಿಲನ್ನು ಶಮನ ಮಾಡಲೆಂಬಂತೆ ಬಂದೆರಗಿದ ಮಳೆರಾಯನಿಂದ ಹಲವೆಡೆ ವಾತಾವರಣ ತಂಪಾಗಿದೆ. ಇನ್ನೇನು ಮೇ ತಿಂಗಳ ಅಂತ್ಯಕ್ಕೆ ಮುಂಗಾರು ನೆರೆಯ ಕೇರಳ ರಾಜ್ಯವನ್ನು ಪ್ರವೇಶಿಸಲಿದ್ದು, ಅದಾಗಿ 2-3 ದಿನಗಳಲ್ಲಿ ಕರ್ನಾಟಕಕ್ಕೆ ಬರುವ ಸಾಧ್ಯತೆ ಇರುವುದರಿಂದ ಈ ಬಾರಿಯ ಬೇಸಿಗೆಯ ತಾಪಕ್ಕೆ ಕಡಿವಾಣ ಬಿದ್ದಂತಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಅಂತೆಯೇ, ಶಿವಮೊಗ್ಗದಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್. ಮೈಸೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್. ಬೆಳಗಾವಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್. ದಾವಣಗೆರೆಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

ಇತ್ತ ಮಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೆ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿಯಲ್ಲಿ ಗರಿಷ್ಠ 24 ಡಿಗ್ರಿ ಸೆಲ್ಸಿಯಸ್, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವುದಾಗಿ ಹವಾಮಾನ ವರದಿಗಳು ತಿಳಿಸಿವೆ.

ಇನ್ನುಳಿದಂತೆ ರಾಜ್ಯದ ಇತರ ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ ಇಲ್ಲಿದೆ: ಚಿಕ್ಕಮಗಳೂರು: ಗರಿಷ್ಠ 26, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಚಿತ್ರದುರ್ಗ: ಗರಿಷ್ಠ 31, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಉಡುಪಿ: ಗರಿಷ್ಠ 31, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಕಾರವಾರ: ಗರಿಷ್ಠ 30, ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾವೇರಿ: ಗರಿಷ್ಠ 30, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಗದಗ: ಗರಿಷ್ಠ 31, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಕೊಪ್ಪಳ: ಗರಿಷ್ಠ 32, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ರಾಯಚೂರು: ಗರಿಷ್ಠ 34, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಯಾದಗಿರಿ: ಗರಿಷ್ಠ 34, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ವಿಜಯಪುರ: ಗರಿಷ್ಠ 32, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಬೀದರ್: ಗರಿಷ್ಠ 34, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಬಾಗಲಕೋಟೆ: ಗರಿಷ್ಠ 32, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಚಿಕ್ಕಬಳ್ಳಾಪುರ: ಗರಿಷ್ಠ 31, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಕೋಲಾರ: ಗರಿಷ್ಠ 32, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತುಮಕೂರು: ಗರಿಷ್ಠ 31, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಮಂಡ್ಯ: ಗರಿಷ್ಠ 30, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ರಾಮನಗರ: ಗರಿಷ್ಠ 31, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಹಾಸನ: ಗರಿಷ್ಠ 27, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಚಾಮರಾಜನಗರ: ಗರಿಷ್ಠ 31, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್

ಇದನ್ನೂ ಓದಿ: ಇಂದೂ ಸೇರಿ ಮೂರು ದಿನಗಳ ಕಾಲ ತೌಕ್ತೆ ಎಫೆಕ್ಟ್ ಇರಲಿದೆ; ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಮಾಹಿತಿ

ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು